ಬಿಸಿ ಬಿಸಿ ಸುದ್ದಿ

ಕೊರೊನಾ ಎಫೆಕ್ಟ್‌ನಿಂದ ಕುಸಿದ ಶೇಂಗಾ ಬೆಲೆ ಸಂಕಷ್ಟದಲ್ಲಿ ರೈತ

ಸುರಪುರ: ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಬರಗಾಲ ಇದ್ದುದರಿಂದ ಸರಿಯಾದ ಬೆಳೆ ಬಾರದೆ ಕಂಗಾಲಾಗಿದ್ದ ರೈತರಿಗೆ ಈ ವರ್ಷ ಮತ್ತೆ ನೆರೆ ಹಾಗು ಬರದ ಹಾವಳಿಯಿಂದ ತತ್ತರಿಸಿದ್ದರು.

ಬೇಸಿಗೆ ಬೆಳೆಯಾಗಿ ಭತ್ತ ಮತ್ತು ಶೇಂಗಾ ಬೆಳೆದ ರೈತರು ಈಗ ಒಳ್ಳೆಯ ದರವಿಲ್ಲದೆ ಪರದಾಡುವಂತಾಗಿದೆ.ಭತ್ತದ ರಾಶಿ ಆರಂಭಗೊಂಡಿದ್ದು,ಶೇಂಗಾ ಬೆಳೆ ಈಗಾಗಲೆ ಮಾರುಕಟ್ಟೆಗೆ ಬಂದಿವೆ.ನಗರದ ಎಪಿಎಂಸಿ ಗಂಜ್‌ನಲ್ಲಿ ನಿತ್ಯವು ಸಾವಿರಾರು ಕ್ವಿಂಟಲ್ ಶೇಂಗಾವನ್ನು ರೈತರು ಮಾರಾಟಕ್ಕೆ ತರುತ್ತಿದ್ದಾರೆ.ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಹೊರಗಡೆಯ ಖರೀದಿದಾರರು ಬರದೆ ಸ್ಥಳಿಯ ಖರೀದಿದಾರರದೆ ದರಬಾರ ನಡೆದಂತಾಗಿದೆ.

ಶೇಂಗಾ ಬೆಳೆದು ಗಂಜಿಗೆ ತಂದ್ರ ಒಳ್ಳೆ ರೇಟಿಲ್ಲದೆ ಅಡ್ಡಕದುಡ್ಡಗಿ ಮಾರಂಗಾಗ್ಯಾದ.ಕೊರೊನಾ ರೋಗದ ಸಲುವಾಗಿ ಹೊರಗಿನ ಖರೀದಿದಾರರು ಬರವಲ್ರು ಇಲ್ಲಿಯವ್ರ ಏನ್ ರೇಟ್ ಹೇಳ್ತಾರ ಅದೆ ರೇಟಿಗಿ ಕೊಡಂಗಾಗ್ಯಾದ.ಸರಕಾರನೆ ಶೇಂಗಾ ಖರೀದಿ ಮಾಡಿದ್ರ ಚೊಲೊ ಆಗ್ತಾದ. -ಪ್ರಭು ಕೋನ್ಹಾಳ ರೈತ

ಹೊರಗಿನ ಖರೀದಿದಾರರು ಮಾರುಕಟ್ಟೆಯಲ್ಲಿ ಖರೀದಿಗೆ ಬಂದರೆ ಟೆಂಡರ್ ನಡೆದು ರೈತರ ಫಸಲಿಗೆ ಉತ್ತಮವಾದ ಬೆಲೆ ಲಭಿಸುತ್ತದೆ.ಆದರೆ ಹೊರಗಡೆಯಿಂದ ಖರೀದಿದಾರರು ಬರದಿದ್ದರೆ ಸ್ಥಳಿಯ ಖರೀದಿದಾರರು ನಿಗದಿಪಡಿಸಿದ ದರಕ್ಕೆ ನೀಡುವ ಅನಿವಾರ್ಯತೆ ರೈತರಿಗೆ ಎದುರಾಗಲಿದೆ.ಈಗ ಇದೇ ಪರಸ್ಥಿತಿಗೆ ಸಿಲುಕಿರುವ ರೈತರು ಸರಿಯಾದ ಬೆಲೆ ಸಿಗುತ್ತಿಲ್ಲವೆಂದು ತಮ್ಮ ನೋವು ಹೇಳಿಕೊಳ್ಳುತ್ತಿದ್ದಾರೆ.

ಶೇಂಗಾ ಮಾರಾಟಕ್ಕೆ ಬಂದ ಅನೇಕ ರೈತರು ಮಾತನಾಡಿ,ಹಿಂದೆ ಶೇಂಗಾ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ಏಳು ಸಾವಿರ ರೂಪಾಯಿ ವರೆಗೆ ಇರುತ್ತಿತ್ತು.ಆದರೆ ಈಗ ಬರೀ ಐದು ಸಾವಿರದ ಮೂರು ನೂರರಿಂದ ಐದು ಸಾವಿರದ ನಾಲ್ಕು ನೂರು ರೂಪಾಯಿಗಳ ವರೆಗೆ ಇದೆ.ನಾವು ಒಂದು ಎಕರೆ ಶೇಂಗಾ ಬೆಳೆಯಲು ಕನಿಷ್ಠ ಇಪ್ಪತ್ತು ಸಾವಿರ ರೂಪಾಯಿಗಳ ವರೆಗೆ ಖರ್ಚಾಗುತ್ತದೆ.ಆದರೆ ಇಲ್ಲಿ ಸರಿಯಾದ ಬೆಲೆ ಸಿಗದೆ ವ್ಯವಸಾಯ ಮಾಡಿ ಸಾಲಕ್ಕೆ ಸಿಲುಕಿ ನರಳಬೇಕಾದ ಪರಸ್ಥಿತಿ ಇದೆ ಎಂದು ಗೋಳಿಡುತ್ತಿದ್ದಾರೆ.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

10 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

21 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

21 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

23 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

23 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

23 hours ago