ವಾಡಿ: ಗುಳೆ ಹೋದವರ ಗುಡ್ಡದ ದೇವರು ಎಂದೇ ಖಾತಿಯಾದ ಲಾಡ್ಲಾಪುರ ಹಾಜಿಸರ್ವರ್ (ಹಾದಿಶರಣ) ಜಾತ್ರೆ ಏ.೧೦ ರಂದು ಲಕ್ಷಾಂತರ ಭಕ್ತರ ನಡುವೆ ಸಂಭ್ರಮದಿಂದ ನಡೆಯಬೇಕಿತ್ತು. ಕೊರೊನಾ ವೈರಸ್ ಕಟ್ಟಿಹಾಕಲು ಸಜ್ಜಾಗಿರುವ ಕಾಖಿ ಪಡೆ ಶುಕ್ರವಾರ ಗುಡ್ಡಕ್ಕೆ ಸರ್ಪಗಾವಲು ಹಾಕಿತ್ತು. ಭಕ್ತರಿಲ್ಲದೆ ಭಣಗುಡುತ್ತಿದ್ದ ಗುಡ್ಡದ ಪರಿಸರ, ಬಿಡಾರುಗಳು ಕಣ್ಮರೆಯಾಗಿ ಬಿಕೋ ಎನ್ನುತ್ತಿತ್ತು.
ಹೊಟ್ಟೆಪಾಡಿಗಾಗಿ ಮುಂಬೈ, ಪುಣೆ, ಬೆಂಗಳೂರು ಸೇರಿದಂತೆ ಇನ್ನಿತರ ರಾಜ್ಯಗಳ ಮಹಾನಗರಗಳಿಗೆ ಗುಳೆ ಹೋದ ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳ ಮತ್ತು ನೂರಾರು ತಾಂಡಾಗಳ ಜನರು ಏಪ್ರಿಲ್ ತಿಂಗಳಲ್ಲಿ ನಡೆಯುವ ಲಾಡ್ಲಾಪುರ ಹಾಜಿಸರ್ವರ್ ಜಾತ್ರೆಗೆ ಬರುವುದು ಸಾಮಾನ್ಯ. ಏ.೯ ರಿಂದ ಐದು ದಿನಗಳ ವರೆಗೆ ನಡೆಯುವ ಜಾತ್ರೆಯಲ್ಲಿ ಗುಡ್ಡದ ಸುತ್ತಲೂ ಬಿಡಾರು ಹಾಕುವುದು ಮತ್ತು ಪ್ರತಿ ಮನೆಯಿಂದ ಕನಿಷ್ಠ ೨ರಿಂದ ೪ ಕುರಿಗಳನ್ನು ಬಲಿ ನೀಡುವುದು ಸಂಪ್ರದಾಯ. ಪ್ರತಿ ವರ್ಷ ಸುಮಾರು ೬೦೦೦ ಕುರಿಗಳ ಬಲಿ ಬೀಳುತ್ತದೆ. ಈ ಬಾರಿ ಜಾತ್ರೆಗೆ ಕೊರೊನಾ ಕಂಟಕ ಎದುರಾಗಿದ್ದು, ಗುಳೆ ಹೋದ ಸಾವಿರಾರು ಕುಟುಂಬಗಳು ಊರಿಗೆ ಮರಳಿದ್ದಾರಾದರೂ ಜಾತ್ರೆ ರದ್ದಾದ ಕಾರಣ ಪ್ರಾಣಿ ಬಲಿಯೂ ನಿಂತಿದೆ. ಭಕ್ತಿಯ ಹೆಸರಿನಲ್ಲಿ ಭಕ್ತರ ಒಡಲಿಗೆ ಭೋಜನವಾಗುತ್ತಿದ್ದ ಸಾವಿರಾರು ಕುರಿಗಳು, ಪ್ರಾಣ ರಕ್ಷಣೆಯಾಗಿ ನಿಟ್ಟುಸಿರು ಬಿಟ್ಟಿವೆ.
ಲಾಕ್‌ಡೌನ್ ಘೋಷಣೆಗೆ ಬೆಲೆ ಕೊಟ್ಟು ಜಾತ್ರೆ ರದ್ದುಪಡಿಸಿದ್ದೇವೆ. ಭಕ್ತರು ಮನೆಯಿಂದ ಹೊರಗಡೆ ಬಂದಿಲ್ಲ. ಮನೆಯಲ್ಲಿಯೇ ಸಹಿ ಖಾದ್ಯ ಮಾಲದಿ ಸಿದ್ದಪಡಿಸಿ ದೇವರನ್ನು ಸ್ಮರಿಸಿದ್ದಾರೆ. ನಾಲ್ವರು ಪೂಜಾರಿಗಳು ಮಾತ್ರೆ ಗುಡ್ಡವನ್ನು ಹತ್ತಿ ಕಳಸಾರೋಹಣ ನೆರವೇರಿಸಿದ್ದಾರೆ. ದೀಪವನ್ನು ಹಚ್ಚಿ ಸರಳವಾಗಿ ಪೂಜೆ ಸಲ್ಲಿಸಿದ್ದಾರೆ. ಈ ವರ್ಷ ಭಕ್ತರಾರೂ ಪ್ರಾಣಿ ಬಲಿ ನೀಡಿಲ್ಲ. ಸರಕಾರದ ಆದೇಶಕ್ಕೆ ಗ್ರಾಮಸ್ಥರು ಸಹಕಾರ ನೀಡಿದ್ದಾರೆ.
ಜಾತ್ರೆ ನಡೆದಿದ್ದರೆ ಬಿಡಾರುಗಳ ಅಂಗಡಿಗಳ ಟೆಂಡರ್‌ಗಳಿಂದ ೧೦ ಲಕ್ಷ ರೂ. ದೇವಸ್ಥಾನಕ್ಕೆ ಕಾಣಿಕೆ ಬರುತ್ತಿತ್ತು. ಜಾತ್ರೆ ರದ್ದಾಗಿ ಪ್ರಾಣಿಗಳ ಬಲಿ ತಪ್ಪಿದ್ದರಿಂದ ಭಕ್ತರ ಸುಮಾರು ೫ ಕೋಟಿ ರೂ. ಉಳಿದಂತಾಗಿದೆ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಸಾಬಣ್ಣ ಆನೇಮಿ ತಿಳಿಸಿದ್ದಾರೆ. ಭಕ್ತರು ಗುಡ್ಡವನ್ನು ಹತ್ತದಂತೆ ತಡೆಯಲು ಡಿವೈಎಸ್‌ಪಿ ವೆಂಕನಗೌಡ ಪಾಟೀಲ ಹಾಗೂ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ಮಾರ್ಗದರ್ಶನದಡಿ ಒಂದು ಕೆಎಸ್‌ಆರ್‌ಪಿ ತುಕಡಿ, ೧೫ ಜನ ಪೊಲೀಸ್ ಸಿಬ್ಬಂದಿ ಸೇರಿದಂತೆ ಇಬ್ಬರು ಪಿಎಸ್‌ಐ ತಂಡದೊಂದಿಗೆ ಜಾತ್ರೆಗೆ ಭದ್ರತೆ ಒದಗಿಸಿದ್ದೇವೆ ಎಂದು ವಾಡಿ ಠಾಣೆಯ ಪಿಎಸ್‌ಐ ವಿಜಯಕುಮಾರ ಭಾವಗಿ ಪ್ರತಿಕ್ರೀಯಿಸಿದ್ದಾರೆ. ಗುಡ್ಡದ ಜಾತ್ರೆಗೆ ಕಿಕ್ಕಿರಿದು ಸೇರುತ್ತಿದ್ದ ಭಕ್ತರು, ಈ ವರ್ಷ ಮನೆಯಲ್ಲಿ ಲಾಕ್ ಆಗುವ ಮೂಲಕ ಕೊರೊನಾ ಹೋರಾಟಕ್ಕೆ ಸಹಕಾರ ನಿಡಿದ್ದು ಪ್ರಸಂಶೆಗೆ ಪಾತ್ರವಾಯಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…