ಬಿಸಿ ಬಿಸಿ ಸುದ್ದಿ

600 ಕುಟುಂಬಗಳಿಗೆ ಶಾಸಕ ಖರ್ಗೆ ಅವರಿಂದ ಧವಸ ಧಾನ್ಯ ವಿತರಣೆ

ಕಲಬುರಗಿ: ಲಾಕ್ ಡೌನ್‌ನಿಂದಾಗಿ ಬೆಂಗಳೂರಿನಲ್ಲಿಯೇ ಉಳಿದ‌ ಕಲಬುರಗಿ ಹಾಗೂ‌ ಚಿತ್ತಾಪುರ ತಾಲೂಕಿನ ಕನಿಷ್ಠ 600 ಕ್ಕೂ ಅಧಿಕ ದಿನಗೂಲಿ ಮಾಡುವ ಕುಟುಂಬಗಳಿಗೆ ಎರಡು ತಿಂಗಳಿಗೆ ಆಗುವಷ್ಟು ಧವಸ ಧಾನ್ಯ ಮುಖ್ಯವಾಗಿ ಅಕ್ಕಿ ಬೇಳೆ ಹಾಗೂ ಅಡುಗೆ ಎಣ್ಣೆಯನ್ನು ಪಾಕೇಟ್ ಮಾಡಿ  ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಇಂದು ವಿತರಿಸಿದರು.

ಬೆಂಗಳೂರು ನಗರದ ಹಲವೆಡೆ ಹಾಗೂ ಹೊರಭಾಗದಲ್ಲಿ ಅಲ್ಲಲ್ಲಿ ವಾಸವಾಗಿದ್ದ ಕಲಬುರಗಿ ಹಾಗೂ ಚಿತ್ತಾಪುರ ತಾಲೂಕಿನ ಸುಮಾರು 600 ಕುಟುಂಬಗಳು ಲಾಕ್ ಡೌನ್ ಆದಾಗಿನಿಂದ ಊರುಗಳಿಗೆ ತಲುಪಲಾಗಿರಲಿಲ್ಲ. ಮಾಡಲು ಕೆಲಸವಿಲ್ಲದೆ. ಅನ್ನ, ನೀರು ಹಾಗೂ ವೈದ್ಯಕೀಯ ಸೌಲಭ್ಯಗಳಿಲ್ಲದೆ ಸದರಿ ಕುಟುಂಬದ ಸದಸ್ಯರು ಸಂಕಟಪಡುತ್ತಿರುವ ವಿಷಯ ಇತ್ತೀಚಿಗೆ ಚಿತ್ತಾಪುರದಲ್ಲಿ ಪ್ರಾರಂಭಿಸಲಾಗಿದ್ದ ಸಹಾಯವಾಣಿ ಹಾಗೂ ಕೆಪಿಸಿಸಿ ವತಿಯಿಂದ ಆರಂಭಿಸಲಾಗಿದ್ದ ಸಹಾಯವಾಣಿಯ ಮೂಲಕ ತಿಳಿದು ಬಂತು.

ತಕ್ಷಣ ಕಾರ್ಯಪ್ರವೃತ್ತರಾದ ಶಾಸಕರು ಅಕ್ಕಿ, ಬೇಳೆ ಹಾಗೂ ಅಡುಗೆ ಎಣ್ಣೆಯನ್ನು ಪ್ಯಾಕೇಟ್ ಮೂಲಕ ಎರಡು ತಿಂಗಳಿಗಾಗುವಷ್ಟು ಎಲ್ಲ ಕುಟುಂಬಗಳಿಗೆ ತಲುಪಿಸಿ ಸಮಾಜಿಕ ಜವಾಬ್ದಾರಿ ಮೆರೆದಿದ್ದಾರೆ. ಶಾಸಕರ ಕರೆಗೆ ಓಗೊಟ್ಟು ಸಂಘ ಸಂಸ್ಥೆಗಳು, ವ್ಯಾಪಾರಿಗಳು, ಎಪಿಎಂಸಿ ವರ್ತಕರು ಚಿತ್ತಾಪುರ ಪಟ್ಟಣದಲ್ಲಿ ಈಗಾಗಲೇ ಅಲ್ಲಿನ ಜನರಿಗೆ ಜೀವನಾಶ್ಯಕ ವಸ್ತುಗಳನ್ನು ತಲುಪಿಸಿದ್ದಾರೆ.

” ಜನರು ತುಂಬಾ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ‌ ಚಿತ್ತಾಪುರ ಶಾಸಕನಾಗಿ ಹಾಗೂ ಕಲಬುರಗಿ ಜಿಲ್ಲೆಯ ಮಣ್ಣಿನ ಮಗನಾಗಿ ನಾನು ನನ್ನ ಕರ್ತವ್ಯವವನ್ನು ನಿಭಾಯಿಸುತ್ತಿದ್ದೇನೆ. ಇದು ನಿರಂತರವಾಗಿ ಮುಂದುವರೆಯಲಿದೆ. ಯಾರು ಹಸಿವಿನಿಂದ ಬಳಲಬಾರದು. ಕಲಬುರಗಿ ಹಾಗೂ ಚಿತ್ತಾಪುರ ತಾಲೂಕಿನ ನಾಗರಿಕರು ಇದೇ ರೀತಿ ಸಂಕಟಪಡುತ್ತಿದ್ದರೆ ಸಾರ್ವಜನಿಕರು ನನ್ನ ಗಮನಕ್ಕೆ‌ ತನ್ನಿ, ನಾನು ತಕ್ಷಣಕ್ಕೆ‌ ಸ್ಪಂದಿಸುತ್ತೇನೆ. ನೊಂದ ಜನರ ಕಣ್ಣೀರು ಒರೆಸುವ ಮಹತ್ಕಾರ್ಯದಲ್ಲಿ ನಾವು ನೀವೆಲ್ಲ ಕೈಜೋಡಿಸೋಣ” ಎಂದು ಶಾಸಕರು ಕರೆ ನೀಡಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

50 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

51 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

54 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago