ಹೈದರಾಬಾದ್ ಕರ್ನಾಟಕ

ರಕ್ತದಾನ ಮಾಡಿ ಜೀವ ಉಳಿಸಬೇಕು : ರಮೇಶಕುಮಾರ ಕಾಂಬಳೆ

ರಿಪಬ್ಲೀಕನ್ ಯೂತ್ ಫೆಡ್ರೇಷನ್ ವತಿಯಿಂದ ರಕ್ತದಾನ ಶಿಬಿರ
ಕಲಬುರಗಿ : ಮನುಷ್ಯನಿಗೆ ಮನುಷ್ಯನ ರಕ್ತವನ್ನೇ ನೀಡಬೇಕು. ಆದರೆ, ಅನೇಕರಿಗೆ ರಕ್ತದಾನ ಮಾಡಲು ಆಸಕ್ತಿ ಇಲ್ಲ. ಲಕ್ಷಾಂತರ ಮಂದಿ ರಕ್ತಸ್ರಾವದಿಂದಾಗಿ ಜೀವ ಉಳಿಸಿಕೊಳ್ಳಲು ಜೀವನ್ಮರಣ ಹೋರಾಟ ನಡೆಸುತ್ತಾರೆ. ಇಂತಹ ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವ ಉಳಿಸಬೇಕು ಎಂದು ಸಂಚಾರಿ ಪೆÇಲೀಸ್ ಅಧಿಕಾರಿ ರಮೇಶಕುಮಾರ ಕಾಂಬಳೆ ಅವರು ಸಲಹೆ ನೀಡಿದರು.

ನಗರದ ನ್ಯೂ ಘಾಟಗೆ ಲೇಔಟ್‍ನ ಬುದ್ಧ ವಿಹಾರದ ಆವರಣದಲ್ಲಿ ರಿಪಬ್ಲೀಕನ್ ಯೂತ್ ಫೆಡ್ರೇಷನ್ ವತಿಯಿಂದ ಹಮ್ಮಿಕೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 129ನೇ ಜಯಂತಿ ಪ್ರಯುಕ್ತ ಉಚಿತ ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಿಪಬ್ಲೀಕನ್ ಯೂತ್ ಫೆಡ್ರೇಷನ್ ಸಂಘಟನೆಯ ಸಂಚಾಲಕ ಹನುಮಂತ ಇಟಗಿ ಅವರು ಮಾತನಾಡಿ, ರಕ್ತದ ಬಗ್ಗೆ ಜಾಗೃತಿ ಇಲ್ಲದ ಕಾರಣ ರಕ್ತದಾನ ಮಾಡುವುದಕ್ಕೆ ಯಾರು ಮುಂದೆ ಬರುತ್ತಿಲ್ಲ. ಇದರಿಂದ ರಕ್ತ ಸಂಗ್ರಹ ಕಡಿಮೆಯಾಗುತ್ತಿದೆ. ಆದರೆ ದೇಶದಲ್ಲಿ ರಕ್ತದ ಕೊರತೆಯಿಂದ ಲಕ್ಷಾಂತರ ಜನರು ಆಸ್ಪತ್ರೆಯಲ್ಲೇ ಮೃತಪಡುತ್ತಿದ್ದಾರೆ. ಹೀಗಾಗಿ ರಕ್ತದಾನ ಮಾಡುವುದು ಪುಣ್ಯದ ಕೆಲಸವಾಗಿದೆ ಎಂದು ಅವರು ಹೇಳಿದರು.

ಅಶೋಕ ಕಪನೂರ, ತ್ಯಾಗರಾಜ ಸಾಗರ, ಸಾಯಿ ಕಪನೂರ, ಸಿದ್ಧಾರ್ಥ ವಾರೆ, ವಿದ್ಯಾಸಾಗರ ಬಬಲಾದ, ಸತೀಶ ಕಲಕೇರಿ, ಸಾತಪ್ಪ ಭಜಂತ್ರಿ, ರಾಘವೇಂದ್ರ ಕಿರಸಾವಳಗಿ, ಸುನೀಲ ಕಟ್ಟಿಮನಿ, ದಿಲೀಪ, ಕಿರಣ ಮೊರೆ, ಶ್ರೀನಿವಾಸ ಕಾಂಬಳೆ ಸೇರಿದಂತೆ ಮುಂತಾದವರು ಉಚಿತ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಸಂಘರಾಜ ವಾಲಿಕರ್, ಸಂಚಾಲಕ ಹನುಮಂತ ಇಟಗಿ, ಕಾರ್ಯಾಧ್ಯಕ್ಷ ಸಂತೋಷ ಮೇಲ್ಮನಿ, ನಾಗೇಂದ್ರ ಜವಳಿ, ನಗರಾಧ್ಯಕ್ಷ ಶೀವಕುಮಾರ ಜಾಲವಾದ, ಡಾ.ಅನೀಲ್ ಟೆಂಗಳಿ, ಬಾಲಾಜಿ ಜೆ. ಚಿತ್ತೇಕರ್, ಅನೀಲ್ ದೇವರಮನಿ, ಅಂಬರೀಶ್ ಅಂಬಲಗಿ, ರಾಣು ಮುದ್ದನಕರ್, ವಿಘ್ನೇಶ್ವರ ಟೈಗರ್, ಶಶಿ ಆಲೂರ್ಕರ್, ಅರುಣಕುಮಾರ ಗಡ್ಡದ, ವಿದ್ಯಾಸಾಗರ ಬಬಲಾದಕರ್, ಚಿದಾನಂದ ಕುಡ್ಡನ್, ಸಿದ್ಧಾರ್ಥ ಪಾರೆ, ರಮೇಶ ಹಾಗರಗಿ, ಮಹೇಶ ನವಲಗಿರಿ, ಮಯೂರ್ ವಾಘಮೋರೆ, ರುಕ್ಕೆಶ್ ಬಚ್ಚನ್, ಅನೀಲ ಸಾಜರೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago