ಇಡೀ ಜಗತ್ತಿಗೆ ಅಪ್ಪಳಿಸಿದ ಈ ಸಾಂಕ್ರಾಮಿಕ ಪಿಡುಗಿನಿಂದ ಇಡೀ ಮನುಕುಲವೆ ನಲುಗುವಂತಾಗಿದೆ.ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರಿಗೂ ಗೃಹಬಂಧನಕ್ಕೊಳಪಡಿದ ಸರ್ಕಾರದ ನಡೆಯನ್ನು ಅನುಸರಿಸಲೆಬೇಕು.ಈ ಪಿಡುಗಿಗೆ ಬಲಿಯಾಗುವದನ್ನು ತಪ್ಪಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು.

ಈಗ ಈ ಕರೋನ ಪಿಡುಗಿನಿಂದ ಪ್ರತಿಯೊಬ್ಬರೂ ಮನೆಯಲ್ಲೆ ಇರಬೇಕಾದ ಸಂದರ್ಭದಿಂದ ಮನೆ ಈಗ ಎಲ್ಲರ ಪ್ರೀತಿಪಾತ್ರವಾದ ತಾಣವಾಗಿದೆ .ಮನೆಯೆ ಮಂತ್ರಾಲಯ ಎನ್ನುವುದ ಅಕ್ಷರಶಃ ನಿಜವಾಗಿದೆ. ಮನೆಯಲ್ಲೆ ಉಳಿದು ಈಗ ಎಲ್ಲರೂ ಸಹನಶೀಲರಾಗಿದ್ದಾರೆ ,ಒಬ್ಬರಿಗೊಬ್ಬರು ಹೊಂದಿಕೊಂಡು ಬಾಳುವದು ಕಲಿತಿದ್ದಾರೆ (ಸಿಟ್ಟು ಮಾಡಿಕೊಂಡು ಎಲ್ಲೂ ಹೋಗುವಂತಿಲ್ಲ ) ವ್ಯಸನಿಗಳು ಕುಡಿಯದೆ ಮನೆ ರಣರಂಗವಾಗುವದು ತಪ್ಪಿದೆ.ಎಷ್ಟೊ ಕೌಟುಂಬಿಕ ಕಲಹಗಳು ತಗ್ಗಿವೆ.ಅಪರಾಧಗಳ ಪ್ರಮಾಣವೂ ಕುಂಠಿತಗೊಂಡಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕರೋನಾ ನಮಗೆ ಮಿತವ್ಯಯ ದ ಪಾಠ ಕಲಿಸಿದೆ.ಅಹಾರ ಪದಾರ್ಥಗಳು ಮತ್ತಾವದೆ ಅವಶ್ಯಕ ವಸ್ತು ಗಳನ್ನು ಬೇಕಾದಷ್ಟೆ ಬಳಸುವ ಪರಿಪಾಠ ಬೆಳೆಸಿಕೊಂಡಿದ್ದೆವೆ.ಧೀರ್ಘ ಕಾಲದ ಲಾಕ್ ಡೌನ್ ಪರಿಣಾಮದಿಂದ ಊರುಗಳಲ್ಲಿ ಆಹಾರ ದಿನಸಿಗಳ ಕೊರತೆ ತಲೆದೂರುತ್ತಿದೆ.ನಮ್ಮ ದೇಶದಲ್ಲಿ ಅಪಾರ ಆಹಾರ ಸಂಪತ್ತು ಇರಬಹುದು ,ಆದರೆ ಸಾರಿಗೆ ವ್ಯವಸ್ಥೆ ಕೊರತೆಯಿಂದ ಅವಶ್ಯ ವಸ್ತುಗಳ ವ್ಯತ್ಯಯ ಉಂಟಾಗುವದು ಸಹಜವೆ.
ಇಂತಹ ಸಂದರ್ಬದಲ್ಲಿ ದೊರೆಯುವ ಅಹಾರ ಪದಾರ್ಥಗಳು. ಅವಶ್ಯಕ ವಸ್ತುಗಳನ್ನು ಮಿತವಾಗಿ ಬಳಸಿ ಅವುಗಳ ಅಭಾವ ತಲೆದೂರದಂತೆ ಪ್ರತಿಯೊಬ್ಬ ನಾಗರಿಕರು ಅರಿತು ಬಳಸಬೇಕು.

ಮೊದಲು ಮನೆಗೆ ಬೇಕಾಗಲಿ ಬೇಡವಾಗಲಿ ತಂದು ತುಂಬಿಡುವ ಪದ್ದತಿ ಬೆಳೆಸಿಕೊಂಡಿದ್ದೆವು.ಈಗ ಅಂಗಡಿ ಮಾಲ್ ಗಳೆಲ್ಲ ಮುಚ್ಚಿರುವದರಿಂದ ಶಾಪಿಂಗ್ ಮಾಡುವದು ಬಂದ್ ಆಗಿದೆ.ಇರುವದರಲ್ಲೆ ಮಿತವಾಗಿ ಬಳಸಿ ಬದುಕಬಹುದೆಂದು ಅರಿವಾಗಿದೆ.

ಈಗ ಎಲ್ಲರೂ ಮನೆಯಲ್ಲಿ ಇರುವುದರಿಂದ ನೀರೂ ಹೆಚ್ಚು ಪ್ರಮಾಣದಲ್ಲಿ ಬಳಸಲ್ಪಡುತ್ತದೆ .ಮುಂದಿನ ದಿನಗಳಲ್ಲಿ ನಿರಿನ ಅಬಾವ ತಲೆದೂರದಂತೆ ನೀರನ್ನು ಮಿತವಾಗಿ ಬಳಸಲು ಪ್ರಯತ್ನಿಸೋಣ. ಈ ಒಂದು ಸಂದರ್ಭದಲ್ಲಿ ನಾವೆಲ್ಲರೂ ಮಿತವ್ಯಯದ ಪಾಠ ಕಲಿಯುವದು ಅತಿ ಅವಶ್ಯಕ.

ಜ್ಯೋತಿ ಡಿ.ಬೊಮ್ಮಾ.
emedialine

View Comments

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago