ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಠಪದಲ್ಲಿ ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ್ ನೆತೃತ್ವದಲ್ಲಿ ಜಿಲ್ಲಾ ವೀರಶೈವ ಸಮಾಜದ ಸಭೆಯಲ್ಲಿ ಮಾತನಾಡುತ್ತಾ ಏಪ್ರಿಲ್.೨೬ ರಂದು ಮುಂಜಾನೆ ೮:ರಂದು ಬಸವಜಯಂತಿ ಕಾರ್ಯಕ್ರಮವನ್ನು ಬಸವೇಶ್ವರ ಮೂರ್ತಿ ಆವರಣದಲ್ಲಿ ಕಡಿಮೆ ಜನ ಸೇರಿ ಎಲ್ಲರು ಕಡ್ಡಾಯವಾಗಿ ಮಾಸ್ಕ ಹಾಕಿಕೊಂಡು ಕನಿಷ್ಠ ನಿರ್ದಿಷ್ಟಿತ ಅಂತರದಲ್ಲಿದ್ದು ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಜಿಗಳು, ಸುಲಫುಲ ಮಠ ಅವರ ನೇತೃತ್ವದಲ್ಲಿ ಜರುಗುವದು.
ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ ಮತ್ತು ಪಿ.ಎಸ್. ಮಹಾಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ಷಟಸ್ತಲ ಧ್ವಜಾರೋಹಣಮಾಡಿ ವಿಶ್ವಗುರು ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವರು. ತಾವು ಸರಕಾರದಿಂದ ಜಿಲ್ಲಾಡಳಿತ ಪರವಾಗಿ ಮೂರ್ತಿಗೆ ಮಾಲಾರ್ಪಣೆ ಮಾಡಲು ಕೋರಿದೆ. ಹಾಗೆಯೆ ಸರಕಾರವು ಬಸವಜಯಂತಿಗೆ ನೀಡುವ ಎಲ್ಲಾ ಅನುದಾನವನ್ನು ಕೊವಿಡ್ -೧೯ ಗೆ ದೇಣಿಗೆಯಾಗಿ ನೀಡಲು ಮನವಿ .ಹಾಗೇಯೆ ಬಸವಜಯಂತಿ ಅಂಗವಾಗಿ ಸುಮಾರು ೧೦೦೦ ಸ್ಯಾನಿಟರಿ ಕಿಟ್‌ಗಳನ್ನು ಅರುಣಕುಮಾರ ಪಾಟೀಲ ಅವರ ನೆತೃತ್ವದಲ್ಲಿ ತಮಗೆ ನೀಡಲಾಗುವುದು ತಾವು ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಹಾಗೂ ಪೌರಕಾರ್ಮಿಕರಿಗೆ ನೀಡಲು ಮನವಿ ಮಾಡಿಕೊಳ್ಳುತ್ತೆವೆ. ಹಾಗೆಯೇ ಎಲ್ಲಾ ಸಮಾಜ ಬಾಂಧವರು ಮತ್ತು ಕಾರ್ಯಶರಣರು ತಮ್ಮ ತಮ್ಮ ಮನೆಯಲ್ಲಿಯೇ ಬಸವಜಯಂತಿಯನ್ನು ಆಚರಿಸಲು ಈ ಮೂಲಕ ಕೊರುತ್ತೇವೆ.
ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಬಸವಸೇನೆ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಕಂಟಿ, ಜಿಲ್ಲಾ ವೀರಶೈವ ಸಮಾಜದ ಗೌರವ ಅಧ್ಯಕ್ಷ ಜಿ.ಡಿ ಅಣಕಲ್, ಹಿರಿಯ ಉಪಾಧ್ಯಕ್ಷ ಕಲ್ಯಾಣಪ್ಪಾ ಪಾಟೀಲ ಮಳಖೆಡ, ಸುಭಾಶ ಬಿಜಾಪುರೆ, ರವಿಂದ್ರ ಶಾಬಾದಿ, ಅಲೋಕ ಸೊರಡೆ, ಶ್ರೀಶೈಲ ಘೂಳಿ, ಶಿವಶರಣ ದೇಗಾಂವ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…