ಅತ್ಯಂತ ಸರಳವಾಗಿ ಬಸವಜಯಂತಿ ಆಚರಿ : ಪಾಟೀಲ್

0
50

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಠಪದಲ್ಲಿ ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ್ ನೆತೃತ್ವದಲ್ಲಿ ಜಿಲ್ಲಾ ವೀರಶೈವ ಸಮಾಜದ ಸಭೆಯಲ್ಲಿ ಮಾತನಾಡುತ್ತಾ ಏಪ್ರಿಲ್.೨೬ ರಂದು ಮುಂಜಾನೆ ೮:ರಂದು ಬಸವಜಯಂತಿ ಕಾರ್ಯಕ್ರಮವನ್ನು ಬಸವೇಶ್ವರ ಮೂರ್ತಿ ಆವರಣದಲ್ಲಿ ಕಡಿಮೆ ಜನ ಸೇರಿ ಎಲ್ಲರು ಕಡ್ಡಾಯವಾಗಿ ಮಾಸ್ಕ ಹಾಕಿಕೊಂಡು ಕನಿಷ್ಠ ನಿರ್ದಿಷ್ಟಿತ ಅಂತರದಲ್ಲಿದ್ದು ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಜಿಗಳು, ಸುಲಫುಲ ಮಠ ಅವರ ನೇತೃತ್ವದಲ್ಲಿ ಜರುಗುವದು.

ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ ಮತ್ತು ಪಿ.ಎಸ್. ಮಹಾಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ಷಟಸ್ತಲ ಧ್ವಜಾರೋಹಣಮಾಡಿ ವಿಶ್ವಗುರು ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವರು. ತಾವು ಸರಕಾರದಿಂದ ಜಿಲ್ಲಾಡಳಿತ ಪರವಾಗಿ ಮೂರ್ತಿಗೆ ಮಾಲಾರ್ಪಣೆ ಮಾಡಲು ಕೋರಿದೆ. ಹಾಗೆಯೆ ಸರಕಾರವು ಬಸವಜಯಂತಿಗೆ ನೀಡುವ ಎಲ್ಲಾ ಅನುದಾನವನ್ನು ಕೊವಿಡ್ -೧೯ ಗೆ ದೇಣಿಗೆಯಾಗಿ ನೀಡಲು ಮನವಿ .ಹಾಗೇಯೆ ಬಸವಜಯಂತಿ ಅಂಗವಾಗಿ ಸುಮಾರು ೧೦೦೦ ಸ್ಯಾನಿಟರಿ ಕಿಟ್‌ಗಳನ್ನು ಅರುಣಕುಮಾರ ಪಾಟೀಲ ಅವರ ನೆತೃತ್ವದಲ್ಲಿ ತಮಗೆ ನೀಡಲಾಗುವುದು ತಾವು ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಹಾಗೂ ಪೌರಕಾರ್ಮಿಕರಿಗೆ ನೀಡಲು ಮನವಿ ಮಾಡಿಕೊಳ್ಳುತ್ತೆವೆ. ಹಾಗೆಯೇ ಎಲ್ಲಾ ಸಮಾಜ ಬಾಂಧವರು ಮತ್ತು ಕಾರ್ಯಶರಣರು ತಮ್ಮ ತಮ್ಮ ಮನೆಯಲ್ಲಿಯೇ ಬಸವಜಯಂತಿಯನ್ನು ಆಚರಿಸಲು ಈ ಮೂಲಕ ಕೊರುತ್ತೇವೆ.

Contact Your\'s Advertisement; 9902492681

ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಬಸವಸೇನೆ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಕಂಟಿ, ಜಿಲ್ಲಾ ವೀರಶೈವ ಸಮಾಜದ ಗೌರವ ಅಧ್ಯಕ್ಷ ಜಿ.ಡಿ ಅಣಕಲ್, ಹಿರಿಯ ಉಪಾಧ್ಯಕ್ಷ ಕಲ್ಯಾಣಪ್ಪಾ ಪಾಟೀಲ ಮಳಖೆಡ, ಸುಭಾಶ ಬಿಜಾಪುರೆ, ರವಿಂದ್ರ ಶಾಬಾದಿ, ಅಲೋಕ ಸೊರಡೆ, ಶ್ರೀಶೈಲ ಘೂಳಿ, ಶಿವಶರಣ ದೇಗಾಂವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here