ಬಿಸಿ ಬಿಸಿ ಸುದ್ದಿ

ಬಡಾವಣೆಗೆ ಹತ್ತು ತರಕಾರಿ ಮಾರಟ ಕೇಂದ್ರ ರಚಿಸಿ: ಡಾ.ಅಜಗರ್ ಚುಲಬುಲ್

ಕಲಬುರಗಿ: ನಗರದ ರೋಜಾ ಪ್ರದೇಶದಲ್ಲಿ ಎರಡನೂರಕ್ಕೂ ಹೆಚ್ಚು ತರಕಾರಿ ಮಾರಾಟಗಾರರು ಇದ್ದು, ಲಾಕ್ ಡೌನ್ ಪ್ರಭಾವದಿಂದ ಪ್ರದೇಶದಲ್ಲಿ ಮಾರಟ ಬಂದ್ ಮಾಡಲಾಗಿದೆ. ಆದಷ್ಟು ಶೀಘ್ರ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಮಾದರಿಯಲ್ಲಿ ಕೆ.ಸಿ.ಟಿ ಕಾಲೇಜು ಅಥವಾ ಪೀರ್ ಬಂಗಾಲಿ ಮೈದಾನದಲ್ಲಿ ತರಕಾರಿ ಮಾರಾಟ ವ್ಯವಸ್ಥೆ ಕಲ್ಪಿಸಬೇಕೆಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಮಹಮ್ಮದ್ ಅಜಗರ್ ಚುಲಬುಲ್ ಒತ್ತಾಯಿಸಿದರು.

ಅವರು ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಮಾಜ ಸೇವಕರಿಗೆ ಪೊಲೀಸ್ ಸಹಾಯಕ ಪಾಸ್ ವಿತರಣೆ ಸಂದರ್ಭದಲ್ಲಿ ಮಾತನಾಡಿ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.

ಈಗಾಗಲೇ ಜಿಲ್ಲಾಡಳಿತ ಹಲವು ಮುಂಜಾಗ್ರತಾ ಕ್ರಮಗಳು ಕೈಗೊಳ್ಳುತ್ತಿದ್ದು ಜನರ ಸಹಕಾರವು ಸಿಗುತ್ತಿದೆ., ಅದರು ಜನರ ಓಡಾಟ ಹೆಚ್ಚಾಗಿದೆ. ನಾವಶ್ಯಕ ಓಡಾಟ ತಡೆಯಲು ಪ್ರತಿ ಬಡಾವಣೆಗೆ ಹತ್ತು ತರಕಾರಿ ಮಾರಾಟಗಾರನ್ನು ನಿಯೋಜಿಸಿ, ಇಂತಹ ಪ್ರದೇಶದಲ್ಲಿ ಜನಜಂಗುಳಿಯಾಗದ ರೀತಿ ಎಚ್ಚರಿಕೆ ವಹಿಸಬೇಕು ಎಂದರು.

ಎರಡು-ಮೂರುದಿನದಲ್ಲಿ ತರಕಾರಿ ಮಾರಾಟಗಾರ ಪಟ್ಟಿ ಸಿದ್ಧಪಡಿಸಿ, ಸೂಕ್ತ ಕ್ರಮ ಕೈಗೊಳಲಾಗುದು, ರಂಝಾನ್ ತಿಂಗಳಲ್ಲಿ ಯಾರು ಆತಂಕ ಪಡುವ ಅಗತ್ಯವಿಲ್ಲ. ರಂಝಾನನಲ್ಲಿ ಮುಸ್ಲಿಂ ಬಾಂಧವರೆಲ್ಲರು ಮನೆಯಲ್ಲಿ ನಮಾಜ ಮಾಡಬೇಕು, ಯಾರು ಸಹ ಮನೆಯಿಂದ ಹೊರಗಡೆ ಬರಬಾರದೆಂದು ರೋಜಾ ಪೊಲೀಸ್ ಠಾಣೆಯ ಸಿ.ಪಿ.ಐ ಅಸ್ಲಂ ಪಾಶ ಮನವಿ ಮಾಡಿದರು.

ಈ ವೇಳೆಯಲ್ಲಿ ಸಿಪಿಐ(ಎಂ) ಮುಖಂಡರಾದ ಮಾರುತಿ ಮಾನ್ಪಡೆ, ಮಜಹರ್ ಆಲಂ ಖಾನ್, ರಹಿಮ್ ಮಿರ್ಚಿ, ಮೌಲಾನಾ ನೂಹ, ನ್ಯಾಯವಾದಿ ಕಲೀಮ್, ಜಹೀರ್ ಖಾನ್, ಹಬಿಬ್ ಖಾನ್, ಆಜಮ್ ಪಟೇಲ್ ಸೇರಿದಂತೆ ರಾಜಕೀಯ ಮುಖಂಡರು ಮತ್ತು ಶಾಂತಿ ಸಭೆಯ ಸದಸ್ಯರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

24 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago