ಸುರಪುರ: ಕೊರೊನಾ ವೈರಸ್ ದಾಳಿಯಿಂದ ತಡೆಯಲು ಲಾಕ್‌ಡೌನ್ ನಿಯಮ ಜಾರಿಯಾಗಿದ್ದರಿಂದ ಕೆಎಮ್‌ಎಫ್ ಡೈರಿಯಲ್ಲಿ ನಿತ್ಯವು ಲಕ್ಷಾಂತರ ಲೀಟರ್ ಹಾಲು ಉಳಿಯುತ್ತಿರುವುದರಿಂದ ರಾಜ್ಯದಲ್ಲಿನ ಎಲ್ಲಾ ಸ್ಲಂ ಕೊಳಗೇರಿಗಳಲ್ಲಿನ ಬಡ ಕುಟುಂಬಗಳಿಗೆ ಉಚಿತವಾಗಿ ಹಾಲು ವಿತರಣೆಯ ಯೋಜನೆ ಜಾರಿಯಾಗಿದ್ದರಿಂದ ನಿತ್ಯವು ನಗರದಲ್ಲಿನ ಎಲ್ಲಾ ಸ್ಲಂಗಳಲ್ಲಿನ ಬಡ ಕುಟುಂಬಗಳಿಗೆ ಉಚಿತವಾಗಿ ಅರ್ಧ ಲೀಟರ್ ಹಾಲು ವಿತರಿಸಲಾಗುತ್ತಿದೆ.
ನಗರಸಭೆಯ ಸಿಬ್ಬಂದಿಗಳು ನಿತ್ಯವು ನಗರದಲ್ಲಿನ ಸ್ಲಂ ಕುಟುಂಬಗಳಿಗೆ ಒಟ್ಟು ೧೮೧೦ ಲೀಟರ್ ಹಾಲು ವಿತರಣೆ ಮಾಡುತ್ತಿದ್ದು,ನಗರಸಭೆಯ ಸಿಬ್ಬಂದಿ ಬೆಳಿಗ್ಗೆ ಆರು ಗಂಟೆಯಿಂದ ಹಾಲು ಪ್ರತಿ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.ನಗರಸಭೆಯ ಸಿಬ್ಬಂದಿಯ ಈ ಶ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ರಂಗಂಪೇಟೆಯಲ್ಲಿನ ಎಲ್ಲಾ ಸ್ಲಂಗಳಲ್ಲಿನ ಬಡ ಕುಟುಂಬಗಳಿಗೆ ನಗರಸಭೆ ಎಸ್‌ಐ ಶಿವಪುತ್ರಪ್ಪ ಹಾಗು ದಫೇದಾರ ಶರಣಪ್ಪ ನೇತೃತ್ವದಲ್ಲಿ ನಿತ್ಯವು ಹಾಲು ವಿತರಿಸುವ ಮೂಲಕ ಸ್ಲಂ ನಿವಾಸಿಗಳ ಜನರಲ್ಲಿ ಸಂತೋಷವನ್ನುಂಟು ಮಾಡಿದ್ದಾರೆ.ಲಾಕ್‌ಡೌನ್ ಕಾರಣದಿಂದ ಹಾಲು ತರಕಾರಿಗೆ ಕಷ್ಟಪಡಬೇಕಿದ್ದ ಜನರ ಮನೆ ಬಾಗಿಲಿಗೆ ಹಾಲು ತಲುಪಿಸುವುದು ಇಡೀ ಸ್ಲಂ ಜನರಿಗೆ ನಗರಸಭೆಯ ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.ಇಂದು ನಡೆದ ಹಾಲು ವಿತರಣೆಯಲ್ಲಿ ಎಸ್‌ಐ ಶಿವಪುತ್ರ,ದಫೇದಾರ್ ಶರಣಪ್ಪ,ಸಿಬ್ಬಂದಿಗಳಾದ ಚಂದ್ರಪ್ಪ,ದೇವಿಂದ್ರಪ್ಪ ಹಾಗು ವೆಂಕಟೇಶ ಮತ್ತಿತರರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…