ನಗರಸಭೆ ಸಿಬ್ಬಂದಿಯಿಂದ ಸ್ಲಂ ಪ್ರದೇಶದ ಎಲ್ಲಾ ಕುಟುಂಬಗಳಿಗೆ ಉಚಿತ ಹಾಲು

0
55

ಸುರಪುರ: ಕೊರೊನಾ ವೈರಸ್ ದಾಳಿಯಿಂದ ತಡೆಯಲು ಲಾಕ್‌ಡೌನ್ ನಿಯಮ ಜಾರಿಯಾಗಿದ್ದರಿಂದ ಕೆಎಮ್‌ಎಫ್ ಡೈರಿಯಲ್ಲಿ ನಿತ್ಯವು ಲಕ್ಷಾಂತರ ಲೀಟರ್ ಹಾಲು ಉಳಿಯುತ್ತಿರುವುದರಿಂದ ರಾಜ್ಯದಲ್ಲಿನ ಎಲ್ಲಾ ಸ್ಲಂ ಕೊಳಗೇರಿಗಳಲ್ಲಿನ ಬಡ ಕುಟುಂಬಗಳಿಗೆ ಉಚಿತವಾಗಿ ಹಾಲು ವಿತರಣೆಯ ಯೋಜನೆ ಜಾರಿಯಾಗಿದ್ದರಿಂದ ನಿತ್ಯವು ನಗರದಲ್ಲಿನ ಎಲ್ಲಾ ಸ್ಲಂಗಳಲ್ಲಿನ ಬಡ ಕುಟುಂಬಗಳಿಗೆ ಉಚಿತವಾಗಿ ಅರ್ಧ ಲೀಟರ್ ಹಾಲು ವಿತರಿಸಲಾಗುತ್ತಿದೆ.

ನಗರಸಭೆಯ ಸಿಬ್ಬಂದಿಗಳು ನಿತ್ಯವು ನಗರದಲ್ಲಿನ ಸ್ಲಂ ಕುಟುಂಬಗಳಿಗೆ ಒಟ್ಟು ೧೮೧೦ ಲೀಟರ್ ಹಾಲು ವಿತರಣೆ ಮಾಡುತ್ತಿದ್ದು,ನಗರಸಭೆಯ ಸಿಬ್ಬಂದಿ ಬೆಳಿಗ್ಗೆ ಆರು ಗಂಟೆಯಿಂದ ಹಾಲು ಪ್ರತಿ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.ನಗರಸಭೆಯ ಸಿಬ್ಬಂದಿಯ ಈ ಶ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Contact Your\'s Advertisement; 9902492681

ರಂಗಂಪೇಟೆಯಲ್ಲಿನ ಎಲ್ಲಾ ಸ್ಲಂಗಳಲ್ಲಿನ ಬಡ ಕುಟುಂಬಗಳಿಗೆ ನಗರಸಭೆ ಎಸ್‌ಐ ಶಿವಪುತ್ರಪ್ಪ ಹಾಗು ದಫೇದಾರ ಶರಣಪ್ಪ ನೇತೃತ್ವದಲ್ಲಿ ನಿತ್ಯವು ಹಾಲು ವಿತರಿಸುವ ಮೂಲಕ ಸ್ಲಂ ನಿವಾಸಿಗಳ ಜನರಲ್ಲಿ ಸಂತೋಷವನ್ನುಂಟು ಮಾಡಿದ್ದಾರೆ.ಲಾಕ್‌ಡೌನ್ ಕಾರಣದಿಂದ ಹಾಲು ತರಕಾರಿಗೆ ಕಷ್ಟಪಡಬೇಕಿದ್ದ ಜನರ ಮನೆ ಬಾಗಿಲಿಗೆ ಹಾಲು ತಲುಪಿಸುವುದು ಇಡೀ ಸ್ಲಂ ಜನರಿಗೆ ನಗರಸಭೆಯ ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.ಇಂದು ನಡೆದ ಹಾಲು ವಿತರಣೆಯಲ್ಲಿ ಎಸ್‌ಐ ಶಿವಪುತ್ರ,ದಫೇದಾರ್ ಶರಣಪ್ಪ,ಸಿಬ್ಬಂದಿಗಳಾದ ಚಂದ್ರಪ್ಪ,ದೇವಿಂದ್ರಪ್ಪ ಹಾಗು ವೆಂಕಟೇಶ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here