ಬಿಸಿ ಬಿಸಿ ಸುದ್ದಿ

ಬದುಕಿದರೆ ಏನನ್ನಾದರೂ ಮಾಡಬಹುದು ಆದರೆ, ನೀನು ಬದುಕಿರಬೇಕಷ್ಟೇ

ಧರ್ಮಕ್ಕೂ, ದೆವ್ವಕ್ಕೂ ದೇವರಿಗೂ ಅಂಜದ ಮಾನವ ಪ್ರಾಣಿ ಜೀವಕ್ಕೆ ಅಂಜುತ್ತಾನೆ ಎನ್ನುವುದು ಸಾಬೀತಾಯಿತು. ತನ್ನದೇ ಆದ ಕಲ್ಪನಾ ಲೋಕದಲ್ಲಿ ಜೀವಿಸುತ್ತಿದ್ದ ಮಾನವ ಜೀವಿ ಈಗ ಜೀವದ ಬೆಲೆ ಏನು ಎನ್ನುವುದನ್ನು ಕಂಡುಕೊಂಡ. ಬ್ಯಾಂಕಿನ ಖಾತೆಯಲ್ಲಿ ಎಷ್ಟು ದುಡ್ಡಿದ್ದರೂ ಕೆಲಸಕ್ಕೆ ಬರುವುದಿಲ್ಲ ಎನ್ನುವುದು ಖಾತ್ರಿಯಾಯಿತು. ದೇಹ ದುಡಿಯದ ಹೊರತು ವಿಶ್ರಾಂತಿ ಪಡೆಯುವುದಿಲ್ಲ ಅದರಂತೆ ಸಂಬಂಧಗಳನ್ನು ಲೆಕ್ಕಿಸದೆ ಬಾಳಿದರೇ ಉಳಿಗಾಲವಿಲ್ಲ ಎನ್ನುವುದನ್ನು ಅರಿತುಕೊಂಡ. ಧರ್ಮ ದೊಡ್ಡದಲ್ಲ ದಯೆ ದೊಡ್ಡದು, ಜಾತಿ ದೊಡ್ಡದಲ್ಲ ನೀತಿ ದೊಡ್ಡದು ಎನ್ನುವ ಮಾತನ್ನು ಮತ್ತೆ ಮತ್ತೆ ಪುಷ್ಠಿಕರಿಸಿದೆ.

ಕೊರೋನಾ ನೂರಾರು ಪಾಠಗಳನ್ನು ಕಲಿಸಿದೆ. ಸಮಯದ ಮಹತ್ವ ತಿಳಿಸಿಕೊಟ್ಟಿದೆ. ಬಂಧು ಬಳಗದವರ ಮೌಲ್ಯ ತಿಳಿಸಿದೆ. ಹಣ ಮಾಡಬೇಕೆಂಬ ಹಪಾಹಪಿತನದಲ್ಲಿ ತನ್ನದೇ ಸ್ವಂತ ಕುಟುಂಬವನ್ನು ನಿರ್ಲಕ್ಷಿಸಿದವರಿಗೆ ಕುಟುಂಬದ ಮಹತ್ವದ ಪಾಠ ಹೇಳಿದೆ. ಮಾನವ ಕೃತಕವಾಗಿ ನಿರ್ಮಿಸಿಕೊಂಡ ಬದುಕು ಶಾಶ್ವತವಲ್ಲ ಎಂಬ ಸತ್ಯವನ್ನು ಸಾರಿ ಹೇಳಿದೆ. ದುಡಿಯುವ ಶ್ರಮಿಕ ವರ್ಗದವರ ಮೌಲ್ಯ ಜೀವನಕ್ಕೆ ಅರ್ಥ ಹೇಳಿಕೊಟ್ಟಿದೆ. ಜಾತಿ, ಧರ್ಮ, ಕುಲ, ಗೋತ್ರ ನೋಡದೇ ಯಾರನ್ನು ಬೇಕಾದರೂ ಕೊರೋನಾ ಅಪ್ಪಿಕೊಳ್ಳಬಹುದು. ಅಪ್ಪಿ ಮುದ್ದಾಡಬಹುದು.

ಮರೆತು ಹೋದ ಗ್ರಾಮೀಣ ಆಟಗಳನ್ನು ಕೊರೋನಾ ಮತ್ತೆ ನೆನಪಿಸಿದೆ. ಹೊಲ ಗದ್ದೆಗಳತ್ತ ಮುಖ ಮಾಡದ ಜನರು ಹೊಲ ಗದ್ದೆಗಳಿಗೆ ಹೋಗಲು ಶುರು ಮಾಡಿದ್ದಾರೆ ಕೆಲಸಕ್ಕಾಗಿ ಅಲ್ಲದಿದ್ದರೂ ಪ್ರಶಾಂತ ವಾತಾವರಣಕ್ಕಾಗಿ. ಮರದ ಕೆಳಗಡೆ ಕುಳಿತು ಕುಟುಂಬಸ್ಥರ, ಸ್ನೇಹಿತರ ಜೊತೆ ಸಂತೃಪ್ತಿಯಾಗಿ ಊಟ ಮಾಡುತ್ತಿದ್ದಾರೆ. ಇಂತಹ ಊಟ ಮಾಡಿ ಎಷ್ಟು ವರ್ಷಗಳಾಗಿವೆಯೋ ಎಂದು ಮನಸ್ಸಿನಲ್ಲಿ ಮಮ್ಮಲ ಮರಗುತ್ತಿದ್ದಾರೆ. ಅವರೆಲ್ಲರಿಗೆ ಈಗ ನಿಜ ಜೀವನದ ಅರ್ಥ ಗೊತ್ತಾಗುತ್ತಿದೆ.

ಕಾರು ಕೊಳ್ಳಬೇಕು, ಬಂಗಲೆ ಕಟ್ಟಿಸಿಕೊಳ್ಳಬೇಕು ಎಂಬ ಜನರಿಗೆ ಈಗ ಜೀವ ಉಳಿದರೇ ಸಾಕು ಎಂಬ ಭಾವನೆ ವ್ಯಕ್ತವಾಗುತ್ತಿದೆ. ಅನುಮಾನದಿಂದ ನೋಡುತ್ತಿದ್ದವರ ಮೇಲೆ ಅನುಕಂಪ ಬರಲು ಪ್ರಾರಂಭವಾಗಿದೆ. ಜೀವನದ ಪ್ರತಿ ಕ್ಷಣದಲ್ಲಿ ಯಾರೂ ಕನಿಷ್ಟರಲ್ಲ, ಎಲ್ಲರೂ ಒಂದಲ್ಲ ಒಂದು ದಿನ ಕೆಲಸಕ್ಕೆ ಬರುತ್ತಾರೆ ಎಂಬ ಸತ್ಯದ ದರ್ಶನವಾಗಿದೆ.
ಮಾನವ ಜನ್ಮ ದೊಡ್ಡದು ಸಾರ್ಥಕ ಮಾಡಿಕೊಳ್ಳಿರಣ್ಣ ಎಂಬ ಹಿರಿಯರ ಮಾತು ಕಿವಿಯಲ್ಲಿ ಅನುರಣಿಸುತ್ತಿದೆ. ನನ್ನ ಮಟ್ಟಿಗಂತೂ ಕೊರೋನಾ ಒಂದು ಪಾಠದ ಖಣಿಯೇ ಆಗಿದೆ. ನೋಡದೇ ಉಳಿದ ಎಷ್ಟು ಕಲಾತ್ಮಕ ಚಿತ್ರಗಳನ್ನು ಸಾಧ್ಯವಾದಷ್ಟು ನೋಡಿದ್ದೆನೆ, ಓದದೇ ಉಳಿದಿದ್ದ ಹತ್ತಾರು ಪುಸ್ತಕಗಳನ್ನು ಓದಲು ಹಚ್ಚಿದೆ, ಮನೆಯಲ್ಲಿ ವರ್ಷಗಟ್ಟಲೇ ಮಾಡದೇ ಉಳಿದಿದ್ದ ಕೆಲಸಗಳನ್ನು ಮಾಡಲು ಹಚ್ಚಿದೆ. ಅಂತಿಮವಾಗಿ ಬದುಕಿದರೆ ಏನನ್ನಾದರೂ ಮಾಡಬಹುದು ಆದರೆ, ಜೀವವೇ ಹೋದ ಮೇಲೆ ಏನೂ ಮಾಡಲು ಸಾದ್ಯವಿಲ್ಲ ಎನ್ನುವುದನ್ನು ಕಲಿಸಿ ಕೊಟ್ಟಿದೆ. ಜನಜೀವನದ ಸಾಮಾಜಿಕ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯಾಗಿ ತಾನು ಸ್ವಂತವಾಗಿ ಏನು ಮಾಡಬಲ್ಲೇ ಅದರ ಪರಿಣಾಮ ಏನಾದೀತು ಎಂಬ ಮಹತ್ತರ ಸಂದೇಶ ನೀಡಿದೆ.

ಕೊನೆಯದಾಗಿ ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಎನ್ನುವ ಮಾತಿನಂತೆ ಜೀವನದ ಬಂಡಿಯನ್ನು ಮುನ್ನಡೆಸಲು ಪುಣ್ಯ ಕಾರ್ಯಗಳು ನಮ್ಮನ್ನು ಸಾವಿನ ದವಡೆಯಿಂದ ಪಾರು ಮಾಡುತ್ತವೆ. ಆದರೆ, ನಮ್ಮ ಜೀವನದ ಅನೇಕ ನಮ್ಮ ಪಾಪ ಕರ್ಮಗಳು ನಾವು ಎಷ್ಟೇ ಕೊಸರಾಡಿದರೂ ನಮ್ಮನ್ನು ಸಾವಿನಿಂದ ಪಾರು ಮಾಡಲು ಸಾಧ್ಯವಿಲ್ಲ ಆದ್ದರಿಂದ ಇನ್ನೊಬ್ಬರ ಕಷ್ಟಗಳಿಗೆ ಹೆಗಲು ಕೊಡೊಣಾ. ನಮ್ಮ ಜೀವದಂತೆ ಇನ್ನೊಬ್ಬರ ಜೀವ ಎಂದು ಭಾವಿಸೋಣಾ. ಶರಣರ ವಚನದಂತೆ ಬಾರದು ಬಪ್ಪದು, ಬಪ್ಪದು ತಪ್ಪದು ಎಂಬಂತೆ ಬಂದಿದ್ದನ್ನು ಸ್ವೀಕಾರ ಮಾಡುವ ಮನೋಭಾವ ಬೆಳಸಿಕೊಳ್ಳೋನಾ ಏನಂತೀರಾ?.

ಹಣಮಂತ ಶೇರಿ, ಖಜೂರಿ
ಹವ್ಯಾಸಿ ಬರಹಗಾರ

emedialine

View Comments

  • ಅದ್ಭುತ ಸಾಲುಗಳು ಸರ್. ಕರೋನಾ ನಮ್ಮ ಬದುಕು ಹಾಗೂ ಚಿಂತನೆಯ ದಿಕ್ಕನ್ನು ಬದಲಿಸಿದ ಪರಿಯನ್ನು ನಮ್ಮ ಮುಂದೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು.

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago