ಬಿಸಿ ಬಿಸಿ ಸುದ್ದಿ

ರೋಜಾ ಸಂದರ್ಭ ಸೈರನ್ ಬಳಕೆಗೆ ಅನುಮತಿ ನೀಡಲು ಮುಸ್ಲಿಂ ಬಂಧುಗಳ ಮನವಿ

ಸುರಪುರ: ತಾಲೂಕಿನಾದ್ಯಂತ ಇಂದಿನಿಂದ ಮುಸ್ಲೀಂ ಸಮುದಾಯದ ಜನರ ಪವಿತ್ರ ಮಾಸವಾದ ರಂಜಾನ್ ತಿಂಗಳ ಆರಂಭವಾಗಿದ್ದು ಇಂದಿನಿಂದ ಎಲ್ಲರು ತಮ್ಮ ಮನೆಗಳಲ್ಲಿ ರೋಜಾ ಉಪವಾಸ ಆರಂಭಿಸುತ್ತಿದ್ದು,ಬೆಳಗಿನ ಜಾವ 4 ಗಂಟೆಗೆ ಮಸೀದಿಗಳಲ್ಲಿನ ಮೌಲ್ವಿಗಳು ಜನರಿಗೆ ರೋಜಾ ಸಮಯ ಎಚ್ಚರಿಸಲು ಸೈರನ್ ಬಳಕೆಗೆ ಅನುಮತಿ ನೀಡುವಂತೆ ಮುಸ್ಲಿಂ ಸಮುದಾಯದ ಮುಖಂಡ ಉಸ್ತಾದ ವಜಾಹತ್ ಹುಸೇನ್ ತಿಳಿಸಿದರು.

ನಗರದ ಡಿವಾಯ್‍ಎಸ್ಪಿ ಕಚೇರಿಯಲ್ಲಿ ಡಿವಾಯ್‍ಎಸ್ಪಿ ವೆಂಕಟೇಶ ಹುಗಿಬಂಡಿಯವರಿಗೆ ಮನವಿ ಸಲ್ಲಿಸಿ ಮಾತನಾಡಿ,ನಮ್ಮ ದೊಡ್ಡ ಹಬ್ಬ ಮತ್ತು ಉಪವಾಸದ ಈ ತಿಂಗಳು ಎಲ್ಲಾ ಮುಸ್ಲಂ ಜನತೆ ಬೆಳಿಗ್ಗೆ 3:30ಕ್ಕೆ ರೋಜಾ ಆರಂಭದ ಸಮಯ ಎದ್ದೇಳುವುದು ಅವಶ್ಯವಾಗಿರುತ್ತದೆ. ರೋಜಾ ಸಮಯವು ಒಂದೊಂದು ದಿನ ಹೆಚ್ಚು ಕಡಿಮೆ ಸಮಯದಲ್ಲಿರುವುದರಿಂದ ಜನರಿಗೆ ಸಮಯ ಗೊತ್ತಾಗದು,ಆದ್ದರಿಂದ ಮಸೀದಿಯಲ್ಲಿನ ಮೌಲ್ವಿಗಳು ಆಯಾ ಸರಿಯಾದ ಸಮಯಕ್ಕೆ ಸೈರನ್ ಬಾರಿಸುವ ಮೂಲಕ ಜನರಿಗೆ ತಿಳಿಸುತ್ತಾರೆ,ಇದಕ್ಕೆ ಅನುಮತಿ ನೀಡುವಂತೆ ಹಾಗು ರೋಜಾ ಬಿಡುವ ಸಂಜೆ ಸಮಯದಲ್ಲಿ ಹಣ್ಣು ಮತ್ತಿತರೆ ಫಲಹಾರ ಸೇವಿಸುವ ವಾಡಿಕೆಯಿಂದಾಗಿ,ಸಂಜೆ ವೇಳೆ ಹಣ್ಣು ಹಂಪಲು ಖರೀದಿಗೆ ಹೋಗಿ ಬರಲು ಅವಕಾಶ ನಿಡುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಡಿವಾಯ್‍ಎಸ್ಪಿ ವೆಂಕಟೇಶ ಹುಗಿಬಂಡಿ ಮಾತನಾಡಿ,ನಿಮ್ಮ ಆಚರಣೆಗೆ ನಮ್ಮ ಯಾವುದೇ ವಿರೋಧವಿಲ್ಲ.ಆದರೆ ನೀವು ಸಲ್ಲಿಸಿರುವವ ಮನವಿಗೆ ಸಂಬಂಧಿಸಿದ ವಿಷಯದ ಕುರಿತು ಪರವಾನಿಗೆ ನೀಡುವ ಅಥವಾ ತಿರಸ್ಕರಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗಿದ್ದು, ಇದನ್ನು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸಯ್ಯದ್ ಅಬ್ದುಲ್ ರಜಾಕ್ ಖಾದ್ರಿ,ಸಯ್ಯದ್ ಅಮ್ಜಾದ್ ಪಾಶಾ ಖಾದ್ರಿ, ಟಿಪ್ಪು ಸುಲ್ತಾನ ಸಂಘದ ರಾಜ್ಯಾಧ್ಯಕ್ಷ ಹರ್ಷದ ದಖನಿ,ಶರೀಫ್ ಸಂತ್ರಾಸ್,ಮಹ್ಮದ್ ಬಾಷಾಮಿಯಾ,ಮಹ್ಮದ್ ಗೌಸ್,ಅಬುಬಕರ್,ವಜಿದ್ ನಗನೂರಿ,ಮಹೆಬೂಬ್ ಸೇರಿದಂತೆ ಅನೇಕರು ಮನವಿ ಮಾಡಿದ್ದಾರೆ.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

22 mins ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

52 mins ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

59 mins ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

1 hour ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

2 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

3 hours ago