ಸುರಪುರ: ತಾಲೂಕಿನಾದ್ಯಂತ ಇಂದಿನಿಂದ ಮುಸ್ಲೀಂ ಸಮುದಾಯದ ಜನರ ಪವಿತ್ರ ಮಾಸವಾದ ರಂಜಾನ್ ತಿಂಗಳ ಆರಂಭವಾಗಿದ್ದು ಇಂದಿನಿಂದ ಎಲ್ಲರು ತಮ್ಮ ಮನೆಗಳಲ್ಲಿ ರೋಜಾ ಉಪವಾಸ ಆರಂಭಿಸುತ್ತಿದ್ದು,ಬೆಳಗಿನ ಜಾವ 4 ಗಂಟೆಗೆ ಮಸೀದಿಗಳಲ್ಲಿನ ಮೌಲ್ವಿಗಳು ಜನರಿಗೆ ರೋಜಾ ಸಮಯ ಎಚ್ಚರಿಸಲು ಸೈರನ್ ಬಳಕೆಗೆ ಅನುಮತಿ ನೀಡುವಂತೆ ಮುಸ್ಲಿಂ ಸಮುದಾಯದ ಮುಖಂಡ ಉಸ್ತಾದ ವಜಾಹತ್ ಹುಸೇನ್ ತಿಳಿಸಿದರು.
ನಗರದ ಡಿವಾಯ್‍ಎಸ್ಪಿ ಕಚೇರಿಯಲ್ಲಿ ಡಿವಾಯ್‍ಎಸ್ಪಿ ವೆಂಕಟೇಶ ಹುಗಿಬಂಡಿಯವರಿಗೆ ಮನವಿ ಸಲ್ಲಿಸಿ ಮಾತನಾಡಿ,ನಮ್ಮ ದೊಡ್ಡ ಹಬ್ಬ ಮತ್ತು ಉಪವಾಸದ ಈ ತಿಂಗಳು ಎಲ್ಲಾ ಮುಸ್ಲಂ ಜನತೆ ಬೆಳಿಗ್ಗೆ 3:30ಕ್ಕೆ ರೋಜಾ ಆರಂಭದ ಸಮಯ ಎದ್ದೇಳುವುದು ಅವಶ್ಯವಾಗಿರುತ್ತದೆ. ರೋಜಾ ಸಮಯವು ಒಂದೊಂದು ದಿನ ಹೆಚ್ಚು ಕಡಿಮೆ ಸಮಯದಲ್ಲಿರುವುದರಿಂದ ಜನರಿಗೆ ಸಮಯ ಗೊತ್ತಾಗದು,ಆದ್ದರಿಂದ ಮಸೀದಿಯಲ್ಲಿನ ಮೌಲ್ವಿಗಳು ಆಯಾ ಸರಿಯಾದ ಸಮಯಕ್ಕೆ ಸೈರನ್ ಬಾರಿಸುವ ಮೂಲಕ ಜನರಿಗೆ ತಿಳಿಸುತ್ತಾರೆ,ಇದಕ್ಕೆ ಅನುಮತಿ ನೀಡುವಂತೆ ಹಾಗು ರೋಜಾ ಬಿಡುವ ಸಂಜೆ ಸಮಯದಲ್ಲಿ ಹಣ್ಣು ಮತ್ತಿತರೆ ಫಲಹಾರ ಸೇವಿಸುವ ವಾಡಿಕೆಯಿಂದಾಗಿ,ಸಂಜೆ ವೇಳೆ ಹಣ್ಣು ಹಂಪಲು ಖರೀದಿಗೆ ಹೋಗಿ ಬರಲು ಅವಕಾಶ ನಿಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಡಿವಾಯ್‍ಎಸ್ಪಿ ವೆಂಕಟೇಶ ಹುಗಿಬಂಡಿ ಮಾತನಾಡಿ,ನಿಮ್ಮ ಆಚರಣೆಗೆ ನಮ್ಮ ಯಾವುದೇ ವಿರೋಧವಿಲ್ಲ.ಆದರೆ ನೀವು ಸಲ್ಲಿಸಿರುವವ ಮನವಿಗೆ ಸಂಬಂಧಿಸಿದ ವಿಷಯದ ಕುರಿತು ಪರವಾನಿಗೆ ನೀಡುವ ಅಥವಾ ತಿರಸ್ಕರಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗಿದ್ದು, ಇದನ್ನು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಯ್ಯದ್ ಅಬ್ದುಲ್ ರಜಾಕ್ ಖಾದ್ರಿ,ಸಯ್ಯದ್ ಅಮ್ಜಾದ್ ಪಾಶಾ ಖಾದ್ರಿ, ಟಿಪ್ಪು ಸುಲ್ತಾನ ಸಂಘದ ರಾಜ್ಯಾಧ್ಯಕ್ಷ ಹರ್ಷದ ದಖನಿ,ಶರೀಫ್ ಸಂತ್ರಾಸ್,ಮಹ್ಮದ್ ಬಾಷಾಮಿಯಾ,ಮಹ್ಮದ್ ಗೌಸ್,ಅಬುಬಕರ್,ವಜಿದ್ ನಗನೂರಿ,ಮಹೆಬೂಬ್ ಸೇರಿದಂತೆ ಅನೇಕರು ಮನವಿ ಮಾಡಿದ್ದಾರೆ.