ಹೈದರಾಬಾದ್ ಕರ್ನಾಟಕ

ಕನ್ನಡದ ಕುಲಗುರು ಲಿಂ.‌ ಚನ್ನಬಸವ ಪಟ್ಟದ್ದೇವರು

ಭಾಲ್ಕಿ ಹಿರೇಮಠ ಸಂಸ್ಥಾನದ ಇತಿಹಾಸದಲ್ಲಿ ಲಿಂಗೈಕ್ಯ ಸದ್ಗುರು ಡಾ. ಚನ್ನಬಸವ ಪಟ್ಟದ್ದೇವರು ಈ ನಾಡು ಕಂಡ ಒಬ್ಬ ಮಹಾನ್ ಸಾಧಕ ಯುಗಪುರುಷರಾಗಿದ್ದರು. ಅನಕ್ಷರತೆ, ಅಜ್ಞಾನ, ಮೂಢನಂಬಿಕೆಗಳಿಂದ ತುಂಬಿಹೋಗಿದ್ದ ಬೀದರ ಜಿಲ್ಲೆಯಲ್ಲಿ ಭಾಲ್ಕಿಯ ಅಪ್ಪಗಳು ನವೋದಯದ ಹರಿಕಾರರಾಗಿ ಉದಯಿಸಿದರು.

ಒಂದು ಬಡತನವುಳ್ಳ ಸಾದಾ ಮಠದ ಸರಳ ಸನ್ಯಾಸಿಯೊಬ್ಬರು ಇಷ್ಟೊಂದು ಸಮಾಜೋಪಯೋಗಿ ಕಾರ್ಯಗಳನ್ನು ಮಾಡಬಹುದೆ? ಎನ್ನುವಷ್ಟರ ಮಟ್ಟಿಗೆ ಪಟ್ಟದ್ದೇವರ ಕಾರ್ಯಗಳು ಜನಜನಿತವಾಗಿವೆ.

ಅಡಳಿತ ಭಾಷೆ ಉರ್ದು, ವ್ಯವಹಾರ ಭಾಷೆ ಮರಾಠಿಯ ಪ್ರಾಬಲ್ಯದ ಗಡಿನಾಡು ಬೀದರನಲ್ಲಿ ಇಂದು ಕನ್ನಡ ಉಳಿದಿದೆ ಎಂದರೆ ಅದಕ್ಕೆ ಕಾರಣ ಭಾಲ್ಕಿ ಅಪ್ಪಗಳ ಕನ್ನಡ ಪ್ರೇಮ. ಕನ್ನಡದ ವಚನಶಾಸ್ತ್ರದಿಂದ ಸಮಾಜದಲ್ಲಿನ ಅಜ್ಞಾನದ ಅಂಧಕಾರನ್ನು ಅಳಿಸಿದ್ದರು. ಅವರ ಪಾಲಿಗೆ ಸಮಾಜ ಸೇವೆಯೇ ಇಷ್ಟಲಿಂಗ, ಸಂಸ್ಕೃತಿಯ ರಕ್ಷಣೆ ಪ್ರಾಣಲಿಂಗ, ಕನ್ನಡವೇ ಭಾವಲಿಂಗವಾಗಿತ್ತು.

ಬಸವಕಲ್ಯಾಣದಲ್ಲಿ ೧೨ ವರ್ಷಗಳ ಕಾಲ ನೆಲೆನಿಂತು ಸ್ವತ: ಕಲ್ಲು ಮಣ್ಣು ಹೊತ್ತು ಕಾಯಕ ಮಾಡುತ್ತಲೇ ನೂತನ ಅನುಭವ ಮಂಟಪವನ್ನು ನಿರ್ಮಾಣ ಮಾಡಿದ್ದು ಐತಿಹಾಸಿಕ ದಾಖಲೆ ಎನಿಸಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ದಾಸೋಹ, ದಲಿತರಿಗೆ ಲಿಂಗದೀಕ್ಷೆ, ಅಂತರ್‌ಜಾತಿ ವಿವಾಹದಂಥ ಅನೇಕ ಕಾರ್ಯಗಳನ್ನು ಪಟ್ಟದ್ದೇವರು ಮಾಡಿದ್ದಾರೆ. ಅವರ ಮಾರ್ಗದಲ್ಲಿ ನಡೆಯುತ್ತಿರುವ ಈಗಿನ ಹಿರಿಯ ಸ್ವಾಮೀಜಿಗಳಾದ ಡಾ. ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪದ ಅಧ್ಯಕ್ಷರಾಗಿದ್ದಾರೆ. ಒಂದು ಕೈಯ್ಯಲ್ಲಿ ಬಸವಧರ್ಮ, ಇನ್ನೊಂದು ಕೈಯ್ಯಲ್ಲಿ ಶಿಕ್ಷಣದ ದೀವಿಗೆ ಹಿಡಿದುಕೊಂಡು ಈ ಭಾಗದಲ್ಲಿ ಬಹುದೊಡ್ಡ ಸಾಮಾಜಿಕ ಕ್ರಾಂತಿಯನ್ನೇ ಮಾಡುತ್ತಿದ್ದಾರೆ.

ಪೂಜ್ಯ ಬಸವಲಿಂಗ ಪಟ್ಟದ್ದೇವರ ಬಗ್ಗೆ
ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಆಶ್ರಯ ಬಯಸಿ ಅಧ್ಯಯನ ಮಡಲು (ಪಿಯುಸಿ) ಓದಲು ಬಂದ ಬಡ ವಿದ್ಯಾರ್ಥಿಯಾಗಿದ್ದವರು ಬಸವಲಿಂಗ ಪಟ್ಟದ್ದೇವರು. ಆಂಧ್ರಪ್ರದೇಶದ ಮೆದಕ ಜಿಲ್ಲೆ ನಾರಾಯಣಖೇಡ ತಾಲೂಕಿನ ನಾಗೂರ(ಬಿ) ಗ್ರಾಮದವರಾದ ಇವರ ಮೊದಲಿನ ಹೆಸರು ಶಿವರಾಜ. ಲಿಂಗಾಯತ ಕಾಡೊದೆ ಮನೆತನದ ಭಾಗೀರಥಿ ಮತ್ತು ರಾಚಪ್ಪ ಅವರ ಹಿರಿಯ ಮಗನಾಗಿ ಜನಿಸಿದವರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಅಜ್ಜನಮನೆ ಔರಾದನಲ್ಲಿ ಮುಗಿಸಿ ಮುಂದೆ ಪಿಯುಸಿ ಮತ್ತು ಪದವಿಗಾಗಿ ಭಾಲ್ಕಿ ಅಪ್ಪಗಳ ಸಾನಿಧ್ಯದಲ್ಲಿ ವಿದ್ಯಾರ್ಥಿಯಾಗಿ ಬಂದರು. ಗುರುಚನ್ನಬಸವರ ಕಾರುಣ್ಯಕ್ಕೆ ಒಳಗಾಗಿ ಶ್ರೀಮಠದ ಉತ್ತರಾಧಿಕಾರಿ ಶಿವಲಿಂಗದೇವರು ಎಂದು ನಾಮಕರಣಗೊಂಡರು. ನಂತರ ೧೯೮೫ರಲ್ಲಿ ಬಸವಲಿಂಗ ಪಟ್ಟದ್ದೇವರು ಎಂಬ ನಾಮದಿಂದ ಹಿರೇಮಠ ಸಂಸ್ಥಾನದ ಪಟ್ಟಾಧ್ಯಕ್ಷರಾದರು.

ಸರಳ ಸಾದಾ ಉಡುಪು, ಮುಖದಲ್ಲಿ ಮುಗ್ಧತೆ, ಮಾತೃ ಹೃದಯಿಗಳಾಗಿರುವ ಬಸವಲಿಂಗಪಟ್ಟದ್ದೇವರು ಯಾವ ಪ್ರಚಾರಕ್ಕೂ ಎಳಸದ ಮನಸ್ಸು. ಸರ್ವರ ಹಿತವನ್ನೇ ಬಯಸುವ ಪಟ್ಟದ್ದೇವರು ಅನೇಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳ ಮೂಲಕ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅನೇಕ ಮಠಾಧೀಶರಿಗೆ ಮಾದರಿ ಎನಿಸಿದ್ದಾರೆ.
ದಣಿವರಿಯದ ದುಡಿಮೆ, ಮೃದುವಾದ ಮಾತು, ಬಂದುದನ್ನು ಎದುರಿಸುವ ಛಾತಿ, ಬಿದ್ದುದನ್ನು ಮತ್ತೆ ಕಟ್ಟುವ ಬಲವುಳ್ಳ ಬಸವಲಿಂಗಪಟ್ಟದ್ದೇವರ ಕಾರ್ಯಗಳೇ ಇದ್ದಕ್ಕೆ ಸಾಕ್ಷಿ ಎನಿಸುತ್ತವೆ. ಶರಣ ಪರಂಪರೆಯ ತಳಹದಿಯ ಮೇಲೆ ಅಧುನಿಕ ಶಿಕ್ಷಣ ನೀಡುತ್ತಿರುವ ಹಿರೇಮಠ ಸಂಸ್ಥಾನ ವಿದ್ಯಾಪೀಠದ ವಿವಿಧ ಶಾಲಾ ಕಾಲೇಜುಗಳು ಸ್ಥಾಪಿಸಿದ್ದಾರೆ.

ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಅಧ್ಯಯನ ಗೈದ ನೂರಾರು ವಿದ್ಯಾರ್ಥಿಗಳು ಪ್ರತಿವರ್ಷ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್, ಪಶುವೈದ್ಯಕೀಯ, ಕೃಷಿ, ತೋಟಗಾರಿಗೆ ಮುಂತಾದೆಡೆ ಆಯ್ಕೆಯಾಗುತ್ತಿದ್ದಾರೆ. ಅನೇಕರು ಅಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿದ್ದು ಇಲ್ಲಿನ ಸಾಧನೆ.

ಅನಾಥ ಮಕ್ಕಳಿಗೆ ಉಚಿತ ವಸತಿ, ಊಟ, ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಭಾಲ್ಕಿ ಮಠದಲ್ಲಿರುವ ಹಾನಗಲ್ ಕುಮಾರೇಶ್ವರ ಉಚಿತ ಪ್ರಸಾದನಿಲಯದಲ್ಲಿ ೪೦೦ಕ್ಕೂ ಅಧಿಕ ಬಡ ಮಕ್ಕಳು ನೆಲೆಸಿದ್ದಾರೆ. ಸ್ವತಃ ಬರಹಗಾರರಾಗಿರುವ ಶ್ರೀಗಳು ಬಸವಧರ್ಮ ಪ್ರಸಾರ ಸಂಸ್ಥೆಯ ಮೂಲಕ ನೂರಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.ಆಂಧ್ರ, ಮಹಾರಾಷ್ಟ, ತೇಲಂಗಾಣ ರಾಜ್ಯಗಳಲ್ಲಿ ಬಸವ ಪರಿಷತ್‌ಗಳನ್ನು ಸ್ಥಾಪಿಸಿದ್ದಾರೆ. ಸ್ವತ: ಪಾದಯಾತ್ರೆಯ ಮೂಲಕ ಬಸವಧರ್ಮ ಪ್ರಚಾರ ಕೈಗೊಂಡಿದ್ದಾರೆ. ಹೊರ ರಾಜ್ಯಗಳಲ್ಲಿ ಬಸವಪ್ರಜ್ಷೆ ಬೆಳಗಿಸಿದ ಶ್ರೀಗಳ ಸಂಘಟನಾ ಕಾರ್ಯ ಅದ್ಭುತವೆನಿಸಿದೆ. ಲಿಂಗಾಯತ ಸಿದ್ಧಾಂತ ಮತ್ತು ಸಮಾಜವನ್ನು ವಿಸ್ತಾರದಿಂದ ವಿಸ್ತಾರಕ್ಕೆ ಜಾತ್ಯತೀತವಾಗಿ ಬೆಳೆಸಿದ್ದಾರೆ. ಇವರ ಸೇವಾ ಸಾಧನೆಗೆ ಕಲಬುರ್ಗಿ ವಿ.ವಿ. ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ರಾಜ್ಯಮಟ್ಟದ ಅನೇಕ ಪುರಸ್ಕಾರಗಳು ಸಂದಿವೆ. ಈ ವರ್ಷ ಬಸವ ರಾಷ್ಟ್ರೀಯ ಪುರಸ್ಕಾರವೂ ಪೂಜ್ಯರಿಗೆ ಒಲಿದಿದೆ.

ಸೋಮನಾಥ ಮುದ್ದಾ ಭಾಲ್ಕಿ
emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

7 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

8 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

8 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

8 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

9 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

9 hours ago