ಬಿಸಿ ಬಿಸಿ ಸುದ್ದಿ

ತಹಶೀಲ್ದಾರ್ ವರ್ಮಾ ಅವರಿಂದ ಪೌರಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ

ಶಹಾಬಾದ: ನಗರವನ್ನು ಸ್ವಚ್ಛಗೊಳಿಸಿ ಉತ್ತಮ ಪರಿಸರ ನಿರ್ಮಾಣ ಮಾಡಿ ಕೊಡುವುದರ ಮೂಲಕ ನಮ್ಮೆಲ್ಲರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಶ್ರಮ ಎಲ್ಲದಕ್ಕಿಂತ ಶ್ರೇಷ್ಠವಾದುದು ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ನಗರದ ಜಿಇ ಕಾಲೋನಿಯಲ್ಲಿ ಅಧಿಸೂಚಿತ ಕ್ಷೇತ್ರ ಸಮಿತಿಯ ಪೌರಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದರು.

ಕೊರೊನಾ ವೈರಸ್ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಬಹುತೇಕ ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಪೌರಕಾರ್ಮಿಕರು ಕಾಲೋನಿಯ ಕಸವನ್ನು ತೆಗೆದು ಸ್ವಚ್ಛಗೊಳಿಸುವುದರ ಜತೆಗೆ ಅಂದವಾಗಿ ಕಾಣುವಂತೆ ಮಾಡುತ್ತಿದ್ದಾರೆ.ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಇಲ್ಲಿನ ಯುವಕರ ತಂಡ ಸ್ವಯಂಪ್ರೇರಿತರಾಗಿ ಅದು ಕಡುಬಡವರಿಗೆ,ನಿರ್ಗತಿಕರಿಗೆ ಹಾಗೂ ಪೌರಕಾರ್ಮಿಕರನ್ನು ಗುರುತಿಸಿ ಆಹಾರವನ್ನು ಹಂಚುತ್ತಿದ್ದಾರೆ.

ತಾಲೂಕಾಢಳಿತದ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ.ಅವರ ಸೇವೆ ಶ್ಲಾಘನೀಯವಾದುದು. ನಿಮ್ಮ ಸುತ್ತ ಮುತ್ತಲಿನ ಬಡಜನರು ಇದ್ದರೇ ಅವರನ್ನು ಗುರುತಿಸಿ ನಮಗೆ ತಿಳಿಸಿ, ಅವರಿಗೂ ಹಂಚಲಾಗುತ್ತದೆ. ಅದರ ಜತೆಗೆ ನಿಮಗೆ ಆಹಾರದ ಸಮಸ್ಯೆಯಾದರೆ ನಮ್ಮ ಗಮನಕ್ಕೆ ತಂದರೆ ಮತ್ತೆ ತಾಲೂಕಾಢಳಿತ ನೆರವಿಗೆ ಬರುತ್ತದೆ ಎಂದರು.
ಅಧಿಸೂಚಿತ ಕ್ಷೇತ್ರ ಸಮಿತಿಯ ಅಧಿಕಾರಿ ಪೀರಶೆಟ್ಟಿ ಮಾತನಾಡಿ, ಕೆಲಸದ ಸಮಯದಲ್ಲಿ ಎಲ್ಲರೂ ಮಾಸ್ಕ್ ಧರಿಸಿ, ಕೈಚೀಲ ಬಳಸಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ರೋಗ ಬಾರದಂತೆ ಮತ್ತು ಹರಡದಂತೆ ನಿಮ್ಮ ಹಾಗೂ ಕುಟುಂಬದ ರಕ್ಷಣೆ ಮಾಡುವುದು ನಿಮ್ಮ ಕರ್ತವ್ಯ ಎಂದರು.ಸುಮಾರು ೩೦ ಜನರಿಗೆ ಆಹಾರದ ಕಿಟ್ ವಿತರಿಸಿದರು.

ನಗರಸಭೆಯ ಸದಸ್ಯ ರವಿ ರಾಠೋಡ, ಭಾಗಿರಥಿ ಗುನ್ನಾಪೂರ, ಗಿರಿರಾಜ ಮೇಲಗಿರಿ, ದತ್ತಾ ಫಂಡ್, ಅರ್ಜುನ ತಳವಾರ, ಭೋಜುಕುಮಾರ ಜಾಪೂರ, ಜಿಇ ಕಾಲೋನಿಯ ಸುಪರ್‌ವೈಸರ್ ಸೆಕ್ಯೂರಿಟಿ ಮೆಹಬೂಬ ಇತರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago