ಶಹಾಬಾದ: ನಗರದ ಕೊರೊನಾ ಕಂಟೋನಮೆಂಟ್ ಜೋನ್ ವ್ಯಾಪ್ತಿಯ ಹಾಗೂ ಇತರ ಪ್ರದೇಶದ ಬಡ ಕುಟುಂಬಗಳಿಗೆ ಅಗತ್ಯ ದಿನಸಿ ಕಿಟ್ ಹಾಗೂ ತರಕಾರಿಗಳನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖಂಡ ವಿಜಯಕುಮಾರ ರಾಮಕೃಷ್ಣ ವಿತರಿಸಿದರು.
ಈ ಸಂದರ್ಭದಲ್ಲಿ ನಾವು ಹಸಿವಿನಿಂದ ಪರದಾಡುವ ಬಡ ಕುಟುಂಬಗಳಿಗೆ ಆಹಾರ ಮತ್ತು ತರಕಾರಿ ನೀಡುವ ಕೆಲಸಕ್ಕೆ ಮಹತ್ವ ನೀಡುತ್ತಿದ್ದೆವೆ ಮುಖಂಡರಾದ ವಿಜಯಕುಮಾರ ರಾಮಕೃಷ್ಣ ಹೇಳಿದರು.
ಕಿಟ್‌ನಲ್ಲಿ ೪ ಕೆಜಿ ಗೋಧಿ ಹಿಟ್ಟು, ಎಣ್ಣೆ ಪಾಕೆಟ್, ಮೇನಸಿನ ಪುಡಿ, ಅರಿಷಿಣ ಪುಡಿ, ಸಾಸಿವೆ, ಜೀರಿಗೆ ಒಳಗೊಂಡಿದೆ.ಅಲ್ಲದೇ ಟೊಮಾಟೋ,ಈರುಳ್ಳಿ,ಬೆಂಡಿಕಾಯಿ,ಚವಳಿಕಾಯಿ,ಬದನೆಕಾಯಿ,ಹಸಿ ಮೆಣಸಿನಕಾಯಿ ನೀಡಿದರು. ಇದೇ ಸಂದರ್ಭದಲ್ಲಿ ಸುಮಾರು ೨೫೦ ಬಡ ಕುಟುಂಬಗಳಿಗೆ ಕಿಟ್ ಹಾಗೂ ತರಕಾರಿಗಳನ್ನು ವಿತರಣೆ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್, ಡಾ.ಜಹೀರ್,ಹಾಷಮ್ ಖಾನ್, ಮೃತ್ಯುಂಜಯ್ ಹಿರೇಮಠ,ವಿಶ್ವರಾಧ್ಯ ಬೀರಾಳ, ಡಾ.ಅಹ್ಮದ್ ಪಟೇಲ್, ಅನ್ವರ್ ಪಾಷಾ, ಕುಮಾರ ಚವ್ಹಾಣ, ಫಜಲ್ ಪಟೇಲ್, ಇಮ್ರಾನ್ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…