ರಂಭಾಪುರಿ ಶ್ರೀಗಳ, ಶಾಮನೂರು ಶಿವಶಂಕರಪ್ಪನವರ ನಡೆಗೆ ಖಂಡನೆ

ಬೀದರ್: ಕೊರೊನಾ ಎಂಬ ಸಾಂಕ್ರಮಿಕ ಮಹಾಮಾರಿಯಿಂದ ಇಡಿ ಜಗತ್ತೆ ಭಯಭಿತÀವಾಗಿದೆ. ನಮ್ಮ ಸರ್ಕಾರ ಲಾಕ್‍ಡೌನ್ ಮಾಡುವ ಮೂಲಕ ಈ ಮಹಾಮಾರಿ ಹರಡದಂತೆ ಶತಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವವನ್ನು ಎಲ್ಲ ಬಸವ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಅತ್ಯಂತ ಸರಳವಾಗಿ ಆಚರಿಸುವುದು ಸಂತೋಷ ತಂದಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಕಲ್ಯಾಣ ಅನುಭವಮಂಟಪದ ಅಧ್ಯಕ್ಷರಾದ ಪೂಜಶ್ರೀ ಡಾ. ಬಸವಲಿಂಗ ಪಟ್ಟದೇವರು ಎಂದರು.

ಇಂತಹ ಸಂತೋಷದ ಸಂದರ್ಭದಲ್ಲಿಯೂ ಕೆಲವು ವಿಕೃತ ಮನಸ್ಸಿನ ವ್ಯಕ್ತಿಗಳು ಬಸವಣ್ಣನವರ ಬಗ್ಗೆ ಸುಳ್ಳು ಹೇಳಿಕೆಗಳನ್ನು ಕೊಡುವುದು ಹಾಗೂ ಎತ್ತಿಗೆ ಪೂಜೆ ಮಾಡುವ ಮೂಲಕ ಬಸವ ಜಯಂತಿ ಆಚರಿಸಿರುವುದು ಸಮಸ್ತ ಬಸವ ಭಕ್ತರಿಗೆ ನೋವುಂಟು ಮಾಡಿದೆ. ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರು ಅತ್ಯಂತ ಶ್ರಮಪಟ್ಟು 1913ರಲ್ಲಿ ದಾವಣಗೆರೆಯಲ್ಲಿ ಮೊಟ್ಟಮೊದಲು ಸಾರ್ವಜನಿಕ “ಬಸವ ಜಯಂತಿ” ಆಚರಣೆ ಮಾಡಿದರು ಆ ಸಂದರ್ಭದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಗೆ ಬಸವಜಯಂತಿ ಆಚರಿಸಬೇಕೆಂದು ಸಾಕಷ್ಟು ಅಭಿಪ್ರಾಯಗಳು ಬಂದವು ಆದರೆ ಮಂಜಪ್ಪನವರು ಈ ಪೌರಾಣಿಕ ಕಲ್ಪನೆಯನ್ನು ಒಪ್ಪದೇ ಐತಿಹಾಸಿಕ ಮಹಾಪುರುಷರಾದ ಬಸವಣ್ಣನವರ ಜಯಂತಿಯನ್ನು ಅನೇಕ ಆಧಾರಗಳನ್ನು ಸಂಗ್ರಹಿಸಿ ಅಕ್ಷಯ ತೃತೀಯದಂದು ಆಚರಿಸಿದರು.

ಆದರೆ ಒಂದು ಸಂಸ್ಥೆಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ನಮ್ಮ ಧರ್ಮ ಹಾಗೂ ರಾಷ್ಟ್ರನಾಯಕರ ವಿಚಾರಧಾರೆಗೆ ಧಕ್ಕೆ ಉಂಟುಮಾಡಿ ಅದೇ ದಾವಣಗೆರೆ ಭೂಮಿಯಲ್ಲಿ ಎತ್ತಿನ ಪೂಜೆ ಮಾಡುವ ಮೂಲಕ ಬಸವ ಜಯಂತಿ ಆಚರಣೆ ಮಾಡಿರುವುದು ಖಂಡನಿಯ.

ಈ ಸಂದರ್ಭದಲ್ಲಿ ರಂಭಾಪುರಿ ವೀರಸೋಮೇಶ್ವರ ಶ್ರೀಗಳು “ಶೈವ ಬ್ರಾಹ್ಮಣ ಕುಲದಲ್ಲಿ ಜನಿಸಿದ ಬಸವಣ್ಣನವರು ವೀರಶೈವ ಧರ್ಮದ ಉದಾತ್ತ ತತ್ವಗಳಿಗೆ ಮಾರುಹೋಗಿ ವೀರಶೈವ ಧರ್ಮವನ್ನು ಸ್ವೀಕರಿಸಿದರು” ಎಂದು ಹೇಳಿದ್ದು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಶ್ರೀಗಳ ಈ ಹೇಳಿಕೆಯನ್ನು ಅಪ್ಪಟ ಸುಳ್ಳು ಎಂಬುದು ಜಗಜ್ಜಾಹಿರ. ವಿಶ್ವಗುರು ಬಸವಣ್ಣನವರು ತಮ್ಮ ಸ್ವತಂತ್ರ ವಿಚಾರಧಾರೆಯ ಮೂಲಕ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ ಎಂಬುದಕ್ಕೆ ವಚನಸಾಹಿತ್ಯದಲ್ಲಿ ಸಾಲು ಸಾಲುಗಳಲ್ಲಿ ಆಧಾರಗಳು ಸಿಗುತ್ತವೆ. ನಾಡಿನ ಶ್ರೇಷ್ಠ ಸಂಶೋಧಕರೂ, ಜಗತ್ತಿನ ವಿದ್ವಾಂಸರು, ಬ್ರಿಟಿμï ಕಾಲದ ದಾಖಲೆಗಳು ಈ ಮಾತಿಗೆ ಪುಷ್ಟಿ ನೀಡುತ್ತವೆ. ಆದರೂ ರಂಭಾಪುರಿ ಶ್ರೀಗಳು ಹುಸಿಯ ನುಡಿಯಲುಬೇಡ ಎಂಬ ಬಸವವಾಣಿ ಹೇಳುತ್ತಲೆ ಪದೆ ಪದೆ ಹುಸಿ ಮಾತನ್ನೇ ನುಡಿಯುತ್ತಾ ಬಸವತತ್ವಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಇಂದು ಕರೋನಾ ಮಹಾಮಾರಿಯಿಂದ ಇಡಿ ಜಗತ್ತೇ ತತ್ತರಿಸುತ್ತಿದ್ದಾಗ ಮಾನವ ಧರ್ಮಕ್ಕೆ ಜಯಕಾರ ಹಾಕುವ ಶ್ರೀಗಳ ನುಡಿ ಮಾನವೀಯತೆಗೆ ಧಕ್ಕೆ ಉಂಟುಮಾಡಿದೆ.

ರಂಭಾಪುರಿ ಶ್ರೀಗಳ ಹೇಳಿಕೆ ಹಾಗೂ ಶಾಮನೂರು ಶಿವಶಂಕರಪ್ಪನವರ ಈ ನಡೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಶ್ರೀಗಳು ಹಾಗೂ ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ಇಂತಹ ವಿಕೃತ ಮನಸ್ಸಿನಿಂದ ಹೊರಬಂದು ಸಮಾಜಕ್ಕೆ ಒಳ್ಳೆಯ ಆರೋಗ್ಯಪೂರ್ಣ ಸಂದೇಶವನ್ನು ಕೊಡಬೇಕು ಇಂತಹ ಸದ್ಬುದ್ಧಿ ವಿಶ್ವಗುರು ಬಸವಣ್ಣನವರ ಅವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುವೆ ಎಂದರು.

emedialine

Recent Posts

ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ಶಾಸಕ ಆರ್.ವಿ.ನಾಯಕ ಚಾಲನೆ

ಸುರಪುರ: ನಗರದಲ್ಲಿ ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ…

3 mins ago

ಸಂಸ್ಕøತಿ ಉಳಿಸಿ ಬೆಳೆಸುವ ಸಂಘದ ಕಾರ್ಯ ಶ್ಲಾಘನೀಯ

ಸುರಪುರ:ದೇಶದಲ್ಲಿ ಹಲವು ಸಂಸ್ಕøತಿಗಳು ಇರುತ್ತವೆ,ಅಂತಹ ಸಂಸ್ಕøತಿಗಳಲ್ಲಿ ಕನ್ನಡ ಮತ್ತು ಕರ್ನಾಟಕ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕಳೆದ 82 ವರ್ಷಗಳಿಂದ…

5 mins ago

ಸುರಪುರ:ಅಭಾವೀಲಿಂ ಮಹಾಸಭೆಗೆ ಪದಾಧಿಕಾರಿಗಳ ನೇಮಕ

ಸುರಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸುರಪುರ ತಾಲೂಕ ನೂತನ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ಮಹಾಸಭಾ ತಾಲೂಕ…

7 mins ago

ಕಲಬುರಗಿ ಪಾಲಿಕೆ ಉಪ ಆಯುಕ್ತರನ್ನು ಅಮಾನತುಗೊಳಿಸಲು ಶಾಸಕ ಬಿ.ಆರ್. ಪಾಟೀಲ ಆಗ್ರಹ

ಕಲಬುರಗಿ: ಮಹಾನಗರ ಪಾಲಿಕೆಯ ಅಧೀಕ್ಷಕ, ಅಭಿಯಂತರ ಹಾಗೂ ಉಪ ಆಯುಕ್ತ ಆರ್.ಪಿ. ಜಾಧವ ಅವರನ್ನು ಅಮಾತುಗೊಳಿಸಿ ಮನೆಗೆ ಕಳಿಸಬೇಕು ಎಂದು…

10 mins ago

ಅ.6 ರಂದು ಡಾ. ಲಕ್ಷ್ಮಣ ದಸ್ತಿಯವರಿಂದ 371 J ಕಲಂ ಸೌಲತ್ತುಗಳ ಬಗ್ಗೆ ವಿಶೇಷ ಉಪನ್ಯಾಸ

ಕಲಬುರಗಿ: 371ನೇ ಜೇ ಕಲಂ ಸೌಲತ್ತುಗಳ ಬಗ್ಗೆ ಡಾ. ಲಕ್ಷ್ಮಣ ದಸ್ತಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅಂಜುಮನ್ ಸಂಸ್ಥೆಯಿಂದ ಅ.6.…

24 mins ago

ಜಾತಿ, ಧರ್ಮ, ಭಾಷೆ, ಎಲ್ಲವನ್ನು ಮೀರಿನಿಂತ ಭಕ್ತಿಯ ದೇವರ ಉಪಾಸನೆಯೇ ಭಜನೆ

ಕಲಬುರಗಿ: ಎಷ್ಟೋ ಜನರ ಜೀವನ ಭಜನೆಯಿಂದ ಬದಲಾಗಿಗೆ ಕಾಯಿಲೆ ಬಿದ್ದು ಹಾಸಿಗೆ ಹಿಡಿದ ವ್ಯಕ್ತಿ ಭಜನೆ ಮಾಡುವುದರಿಂದ ಎದ್ದು ಗುಣಮುಖರಾದ…

27 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420