ವಾಡಿ: ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟು ಸೀಲ್‍ಡೌನ್ ತೆಕ್ಕೆಗೆ ಜಾರಿದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ನಾಲ್ಕು ವಾರ್ಡ್‍ಗಳು ಈಗ ಕಂಟೈನ್ಮೆಂಟ್ ಜೋನ್ ಆಗಿ ಗುರುತಿಸಲಾಗಿದೆ. ಇಡೀ ಏರಿಯಾ ಡ್ರೋನ್ ನಿಗರಾಣಿಯಲ್ಲಿದ್ದು, ಮೇ.10 ವರೆಗೆ ಕಠಿಣ ಭದ್ರತೆ ಮುಂದುವರೆಯಲಿದೆ.
ಕೊರೊನಾ ಸೋಂಕಿನಿಂದ ಗುಣಮುಖವಾಗಿ ಮಗು ಗುರುವಾರ ಮನೆಗೆ ಮರಳುತ್ತಿದ್ದಂತೆ ಸಿಪಿಐ ಪಂಚಾಕ್ಷರಿ ಸಾಲಿಮಠ ಹಾಗೂ ಪಿಎಸ್‍ಐ ದಿವ್ಯಾ ಮಹಾದೇವ್ ಅವರು ಕಠಿಣ ಭದ್ರತೆಗೆ ಮುಂದಾದ ಪ್ರಸಂಗ ಕಂಡುಬಂದಿತು. ಸೀಲ್ ಮಾಡಲಾದ ನಾಲ್ಕೂ ಬಡಾವಣೆಗಳ ಸುತ್ತಲೂ ರಸ್ತೆಗಳಿಗೆ ಅಳವಡಿಸಲಾದ ಬ್ಯಾರಿಕೇಡ್‍ಗಳಿಗೆ ಜಾಲಿ ಗಿಡದ ಮುಳ್ಳು ಬಡಿದು ಪ್ರವೇಶ ನಿರ್ಬಂಧ ಹೇರಿದ್ದಾರೆ. ಮುಖ್ಯ ರಸ್ತೆಯ ಶ್ರೀನಿವಾಸಗುಡಿ ವೃತ್ತ, ಶಿವಾಜಿ ಚೌಕ್, ಬಸವೇಶ್ವರ ಚೌಕ್, ಪುರಸಭೆ ಕಾರ್ಯಾಲಯ ರಸ್ತೆ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ಕಂಟೈನ್ಮೆಂಟ್ ಬಡಾವಣೆಗಳಿಂದ ಯಾರೂ ಹೊರಗೆ ಹೋಗುವಂತಿಲ್ಲ ಮತ್ತು ಹೊರಗಿನಿಂದ ಯಾರೂ ಯಾವೂದೇ ಕಾರಣಕ್ಕೂ ಒಳ ಪ್ರವೇಶ ಮಾಡಂತೆ ನೋಡಿಕೊಳ್ಳಲು ಸಿಪಿಐ ಸಾಲಿಮಠ ಅವರು ಭದ್ರತಾ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಸಿಬ್ಬಂದಿ-ಸರ್ವೆ ಶಿಕ್ಷಕರ ಪರದಾಟ: ಕಂಟೈನ್ಮೆಂಟ್ ಜೋನ್‍ಗೆ ಒದಗಿಸಲಾಗಿದ್ದ ಭದ್ರತೆ ಶುಕ್ರವಾರದಿಂದ ಮತ್ತಷ್ಟು ಬಿಗಿಗೊಳಿಸಿರುವ ಪೊಲೀಸರ ಕ್ರಮದಿಂದ ಆರೋಗ್ಯ ಸಿಬ್ಬಂದಿ, ಕುಟುಂಬ ಸದಸ್ಯರ ಮಾಹಿತಿ ಕಲೆಹಾಕಲು ನೇಮಿಸಲಾದ ಸರ್ವೆ ಶಿಕ್ಷಕರೂ ಕೂಡ ಸೀಲ್‍ಡೌನ್ ಏರಿಯಾಗಳ ಪ್ರವೇಶ ಪಡೆಯಲೂ ಪರದಾಡಬೇಕಾದ ಪ್ರಸಂಗ ನಡೆಯಿತು. ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ನರ್ಸ್‍ಗಳಿಗೂ ಪೊಲೀಸರು ಪ್ರವೇಶ ನಿರಾಕರಿಸಿ ಗೋಳಾಡುವಂತೆ ಮಾಡಿದರು. ತರಕಾರಿ ವ್ಯಾಪಾರಿಗಳನ್ನೂ ಒಳಗಡೆ ಬಿಡಲಿಲ್ಲ. ಹಾಲು ಮತ್ತು ಶುದ್ಧ ನೀರಿನ ಸರಬರಾಜಿಗೂ ಅಡ್ಡಿಪಡಿಸಲಾಯಿತು. ಕೋವಿಡ್-19 ನಿಯಂತ್ರಣಕ್ಕೆ ಸಂಬಂದಿಸಿದಂತೆ ಸಾರ್ವಜನಿಕ ಸೇವೆಯಲ್ಲಿರುವವರ ಕರ್ತವ್ಯಕ್ಕೂ ಅಡೆತಡೆಯುಂಟುಮಾಡಿದ ಪೊಲೀಸರ ನಡೆಗೆ ಹಲವರು ಬೇಸರ ವ್ಯಕ್ತಪಡಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…