ಡ್ರೋನ್ ನಿಗರಾಣಿಯಲ್ಲಿ ವಾಡಿ ಕಂಟೈನ್ಮೆಂಟ್ ಜೋನ್

0
45

ವಾಡಿ: ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟು ಸೀಲ್‍ಡೌನ್ ತೆಕ್ಕೆಗೆ ಜಾರಿದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ನಾಲ್ಕು ವಾರ್ಡ್‍ಗಳು ಈಗ ಕಂಟೈನ್ಮೆಂಟ್ ಜೋನ್ ಆಗಿ ಗುರುತಿಸಲಾಗಿದೆ. ಇಡೀ ಏರಿಯಾ ಡ್ರೋನ್ ನಿಗರಾಣಿಯಲ್ಲಿದ್ದು, ಮೇ.10 ವರೆಗೆ ಕಠಿಣ ಭದ್ರತೆ ಮುಂದುವರೆಯಲಿದೆ.

ಕೊರೊನಾ ಸೋಂಕಿನಿಂದ ಗುಣಮುಖವಾಗಿ ಮಗು ಗುರುವಾರ ಮನೆಗೆ ಮರಳುತ್ತಿದ್ದಂತೆ ಸಿಪಿಐ ಪಂಚಾಕ್ಷರಿ ಸಾಲಿಮಠ ಹಾಗೂ ಪಿಎಸ್‍ಐ ದಿವ್ಯಾ ಮಹಾದೇವ್ ಅವರು ಕಠಿಣ ಭದ್ರತೆಗೆ ಮುಂದಾದ ಪ್ರಸಂಗ ಕಂಡುಬಂದಿತು. ಸೀಲ್ ಮಾಡಲಾದ ನಾಲ್ಕೂ ಬಡಾವಣೆಗಳ ಸುತ್ತಲೂ ರಸ್ತೆಗಳಿಗೆ ಅಳವಡಿಸಲಾದ ಬ್ಯಾರಿಕೇಡ್‍ಗಳಿಗೆ ಜಾಲಿ ಗಿಡದ ಮುಳ್ಳು ಬಡಿದು ಪ್ರವೇಶ ನಿರ್ಬಂಧ ಹೇರಿದ್ದಾರೆ. ಮುಖ್ಯ ರಸ್ತೆಯ ಶ್ರೀನಿವಾಸಗುಡಿ ವೃತ್ತ, ಶಿವಾಜಿ ಚೌಕ್, ಬಸವೇಶ್ವರ ಚೌಕ್, ಪುರಸಭೆ ಕಾರ್ಯಾಲಯ ರಸ್ತೆ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

Contact Your\'s Advertisement; 9902492681

ಕಂಟೈನ್ಮೆಂಟ್ ಬಡಾವಣೆಗಳಿಂದ ಯಾರೂ ಹೊರಗೆ ಹೋಗುವಂತಿಲ್ಲ ಮತ್ತು ಹೊರಗಿನಿಂದ ಯಾರೂ ಯಾವೂದೇ ಕಾರಣಕ್ಕೂ ಒಳ ಪ್ರವೇಶ ಮಾಡಂತೆ ನೋಡಿಕೊಳ್ಳಲು ಸಿಪಿಐ ಸಾಲಿಮಠ ಅವರು ಭದ್ರತಾ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸೋಂಕು ದೃಢಪಟ್ಟ ಮಗು ಗುಣಮುಖವಾಗಿ ಮನೆಗೆ ಬಂದಿದೆ. ಪೋಷಕರಲ್ಲಾಗಲಿ ಅಥವ ಪ್ರಥಮ ಕಾಂಟೆಕ್ಟ್‍ಗಳಿಗಾಗಲಿ ಸೋಂಕು ಹರಡಿಲ್ಲ. ಆದರೂ ನಿಯಮದಂತೆ ಮೇ.12 ವರೆಗೆ ವಾಡಿ ಕಂಟೈನ್ಮೆಂಟ್ ಜೋನ್ ಭದ್ರತೆ ಮುಂದು ವರೆಯಲಿದೆ. ಕಂಟೈನ್ಮೆಂಟ್ ಬಡಾವಣೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳು ಔಷಧ ಅಂಗಡಿಗಳು ಬಂದ್ ಮಾಡುವಂತಿಲ್ಲ. ಅವು ನಿರಣತರವಾಗಿ ಜನರಿಗೆ ಸೇವೆ ನೀಡಲಿವೆ. ಹೊರಗಿನ ರೋಗಿಗಳು ಕಂಟೈನ್ಮೆಂಟ್ ಜೋನ್ ಒಳಗಿನ ಆಸ್ಪತ್ರೆಗಳಿಗೆ ಬರುವಂತಿಲ್ಲ. ಆರೋಗ್ಯ ಸಿಬ್ವಂದಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆಗೆ ಪೊಲೀಸರು ಅಡ್ಡಿಪಡಿಸಬಾರದು. ಪುರಸಭೆಯವರು ಪ್ರವೇಶ ನಿಬರ್ಂಧಿತ ಬಡಾವಣೆಯ ಜನರಿಗೆ ನಿತ್ಯ ನೀರು, ಹಾಲು, ತರಕಾರಿ, ಕಿರಾಣಿ ಸೇರಿದಂತೆ ಪ್ರಾಥಮಿಕ ಅಗತ್ಯತೆಗಳನ್ನು ಪೂರೈಸಲು ಅಡೆತಡೆಯಾಗದಂತೆ ನೋಡಿಕೊಳ್ಳಬೇಕು. ವಾಡಿ ಸಧ್ಯ ಸೇಫ್ ಜೋನ್ ಆದರೂ ಮೇ.10ರ ವರೆಗೆ ಜನರು ಸಹಕಾರ ನೀಡಬೇಕು.
-ಡಾ.ಸುರೇಶ ಮೇಕಿನ್. ತಾಲೂಕು ವೈದ್ಯಾಧಿಕಾರಿ ಚಿತ್ತಾಪುರ.

ಆರೋಗ್ಯ ಸಿಬ್ಬಂದಿ-ಸರ್ವೆ ಶಿಕ್ಷಕರ ಪರದಾಟ: ಕಂಟೈನ್ಮೆಂಟ್ ಜೋನ್‍ಗೆ ಒದಗಿಸಲಾಗಿದ್ದ ಭದ್ರತೆ ಶುಕ್ರವಾರದಿಂದ ಮತ್ತಷ್ಟು ಬಿಗಿಗೊಳಿಸಿರುವ ಪೊಲೀಸರ ಕ್ರಮದಿಂದ ಆರೋಗ್ಯ ಸಿಬ್ಬಂದಿ, ಕುಟುಂಬ ಸದಸ್ಯರ ಮಾಹಿತಿ ಕಲೆಹಾಕಲು ನೇಮಿಸಲಾದ ಸರ್ವೆ ಶಿಕ್ಷಕರೂ ಕೂಡ ಸೀಲ್‍ಡೌನ್ ಏರಿಯಾಗಳ ಪ್ರವೇಶ ಪಡೆಯಲೂ ಪರದಾಡಬೇಕಾದ ಪ್ರಸಂಗ ನಡೆಯಿತು. ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ನರ್ಸ್‍ಗಳಿಗೂ ಪೊಲೀಸರು ಪ್ರವೇಶ ನಿರಾಕರಿಸಿ ಗೋಳಾಡುವಂತೆ ಮಾಡಿದರು. ತರಕಾರಿ ವ್ಯಾಪಾರಿಗಳನ್ನೂ ಒಳಗಡೆ ಬಿಡಲಿಲ್ಲ. ಹಾಲು ಮತ್ತು ಶುದ್ಧ ನೀರಿನ ಸರಬರಾಜಿಗೂ ಅಡ್ಡಿಪಡಿಸಲಾಯಿತು. ಕೋವಿಡ್-19 ನಿಯಂತ್ರಣಕ್ಕೆ ಸಂಬಂದಿಸಿದಂತೆ ಸಾರ್ವಜನಿಕ ಸೇವೆಯಲ್ಲಿರುವವರ ಕರ್ತವ್ಯಕ್ಕೂ ಅಡೆತಡೆಯುಂಟುಮಾಡಿದ ಪೊಲೀಸರ ನಡೆಗೆ ಹಲವರು ಬೇಸರ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here