ಕಲಬುರಗಿ: ಜನಸೇವೆಯೇ ಜನಾರ್ಧನನ ಸೇವೆ, ವೈದ್ಯರೇ ರೋಗಿಗಳಿಗೆ ದೇವರಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು ತಮ್ಮ ಕುಟುಂಬವನ್ನೇ ಮರೆತು ಜೀವದ ಹಂಗು ತೊರೆದು ಸೇವೆ ಮಾಡಿ ನಮ್ಮ ಜೀವ ಉಳಿಸುತ್ತಿರುವುದು ನೋಡಿದರೆ ಸತ್ಯವಾಗಲು ವೈದ್ಯರೇ ದೇವರಾಗಿದ್ದಾರೆ ಎಂದು ಅಖಿಲ ಭಾರತ ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ನ್ಯಾಯವಾದಿ ಹಣಮಂತರಾಯ ಅಟ್ಟೂರ ಹೇಳಿದರು.
ನಿನ್ನೆ ಕಾರ್ಮಿಕರ ದಿನಾಚರಣೆ ನಿಮಿತ್ಯ ಡಾ. ಚಂದ್ರಶೇಖರ ಪಾಟೀಲ ಅವರನ್ನು ನಗರದ ಗಂಜ ಪ್ರದೇಶದಲ್ಲಿರುವ ಮಹಾಲಕ್ಷ್ಮೀ ಲೇಔಟ್‍ನಲ್ಲಿ ವಿಶೇಷವಾಗಿ ಗೌರವಿಸಿ ಮಾತನಾಡಿ, 12ನೇ ಶತಮಾನದ ಶರಣರು ಕಾಯಕದಲ್ಲೇ ಕೈಲಾಸ ಕಂಡು ಅಮರರಾದರು. ಅವರಂತೆ ಯಾವುದೇ ಕಾಯಕವಿರಲಿ ಪ್ರಾಮಾಣಿಕತೆಯಿಂದ ಸೇವೆ ಮಾಡಿದರೆ ತಮ್ಮ ಹೆಸರು ಉಳಿಯುವದರೊಂದಿಗೆ ಬೇರೆಯವರಿಗೆ ಆದರ್ಶವಾಗುತ್ತಾರೆ ಎಂದರು.
ಇಂದಿನ ಸಂದರ್ಭದಲ್ಲಿ ವೈದ್ಯರು ಹಗಲು ರಾತ್ರಿಯನ್ನದೇ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಅಲ್ಲದೆ ಇದರೊಂದಿಗೆ ಪೊಲೀಸ್ ಅಧಿಕಾರಿಗಳು, ಪತ್ರಕರ್ತರೂ, ಅಂಗನವಾಡಿ ಕಾರ್ಯಕರ್ತೆಯರಿಗೂ, ಜಿಲ್ಲಾಡಳಿತಕ್ಕೂ ಹಾಗೂ ಯಾರಿಗೂ ರೋಗ ಹರಡದಂತೆ ಮನೆಯಲ್ಲಿದ್ದ ಜನರಿಗೂ ಇವರೆಲ್ಲರ ಪರವಾಗಿ ವೈದ್ಯರಿಗೆ ಗೌರವಿಸುವುದರ ಮೂಲಕ ಸಂಘಟನೆಯ ಪರವಾಗಿ ಅಭಿನಂದಿಸಲಾಯಿತು.
ಸನ್ಮಾನಿಸಿಕೊಂಡ ಯುವ ವೈದ್ಯ ಡಾ. ಸ್ನೇಹಿತ ಪಾಟೀಲ ಮಾತನಾಡುತ್ತಾ ರೋಗಿಗಳ ಸೇವೆ ಮಾಡುವುದು ನಮ್ಮ ಕರ್ತವ್ಯ ಎಂತಹ ಸ್ಥಿತಿ ಇದ್ದರು ರೋಗಿಯನ್ನು ಉಳಿಸಿಕೊಳ್ಳಲು ಹಗಲಿರುಳು ಪ್ರಾಮಾಣಿಕ ಸೇವೆ ವೈದ್ಯರು ಮಾಡುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ಪಾಟೀಲ, ಶರಣಮ್ಮ ಪಾಟೀಲ, ಶ್ರೀದೇವಿ ಅಟ್ಟೂರ, ರೇಖಾ ಸಿ. ಬಿರಾದಾರ, ಜಯಲಕ್ಷ್ಮೀ ಕಣ್ಣೂರ, ವಿಠಾಬಾಯಿ ಅಟ್ಟೂರ, ವಿನಿತಾ ಪಾಟೀಲ, ಕಮಲಮ್ಮ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…