ಅಂಕಣ ಬರಹ

ವಾರಿಯರ್ರ್ಸ್ ಆಫ್ ದಿ ಕೊರೋನಾ

ಯುದ್ಧ ಎಂದಾಗ ನಮಗೆ ‘ಮಹಾಭಾರತ’ ಅದರಂತೆ ದೀರ್ಘಕಾಲ ನಡೆದ ಗ್ರೀಕ್‍ರ ‘ಪೆಲೋಪೆನೆಶಿಯನ್’ ಯುದ್ಧ ತಕ್ಷಣ ನೆನಪಿಗೆ ಬಂದು ಏನೇನೊ ಹೇಳುತ್ತವೆ. ಈ ಯುದ್ಧಗಳು ನಡೆದಿದ್ದು ಮಾನವ ಜಾತಿಯ ವಿನಾಶಕ್ಕೆ ಅಲ್ಲ. ಸತ್ಯ ಮತ್ತು ಧರ್ಮದ ರಕ್ಷಣೆ ಮಾಡುವದಕ್ಕೆ ಆಗಿದ್ದವು. ಇಲ್ಲಿ ನಿಯಮಬದ್ದ ಯುದ್ಧ ಮಾಡುವದಕ್ಕೆ ಮಹತ್ವ, ಇಲ್ಲದಿದ್ದರೆ ಆತ ಹೇಡಿ ಎಂದು ಕರೆಸಿಕೊಳ್ಳುತಿದ್ದನು. ಕುರಾನದಲ್ಲಿ ಕೂಡ ‘ಯಾರು ಅಲ್ಲಾಹ ಹೇಳಿದ ಮಾರ್ಗದಲ್ಲಿ ದುಷ್ಟರ ವಿರುದ್ಧ ಯುದ್ಧ ಮಾಡುತ್ತಿರೊ, ಅವರು ಮಾತ್ರ ಅಲ್ಲಾಹನ ಪ್ರೀತಿಗೆ ಪಾತ್ರರು..’ ಎಂದು ಹೇಳಲಾಗಿದೆ. ಪ್ರತಿಯೊಂದು ಧರ್ಮ ಅಥವಾ ವಿಚಾರ ಸರಣಿಯು ಯುದ್ಧ ಅಧರ್ಮದ ವಿರುದ್ಧವೆ ಹೇಳಿಕೊಂಡಿದೆ. ಅದರಂತೆ ರಾಜರು ಕೂಡ ಧರ್ಮ ಪರಿಪಾಲನೆಯೊಂದಿಗೆ ತಮ್ಮ ಪ್ರಜೆಗಳ ರಕ್ಷಣೆ ಮಾಡುವದಕ್ಕೆ ಯುದ್ಧ ಮಾಡುತ್ತಿದ್ದರು.

ಕಾಲಾಂತರದಲ್ಲಿ ಕೂಟ ನೀತಿ ಬಂದು ಯುದ್ಧವನ್ನು ಸಂಹಾರಕವನ್ನಾಗಿ ಪರಿವರ್ತಿಸಿತು. ಇದರ ಪ್ರತಿತಿ ನಮಗೆ ಜಾಗತಿಕ ಮೊದಲನೆಯ ಮತ್ತು ಎರಡನೆಯ ಮಹಾಯುದ್ಧದಲ್ಲಿ ಕಂಡು ಬಂತು. ಎರಡನೆಯ ಮಹಾಯುದ್ಧದ ಕೊನೆಗೆ ಅಮೇರಿಕಾ ಜಪಾನ್ ಮೇಲೆ ಪರಮಾಣು ಹಲ್ಲೆ ಮಾಡಿ ಸಾಮಾನ್ಯ ಪ್ರಜೆಗಳನ್ನು ಬಲಿಗೇರಿಸಿತು. ಆಗ ಯುದ್ಧದ ವೈರಿಯೆ ಬದಲಾಗಿ ಬಿಟ್ಟ. ಮುಂದೆ ಈ ವಿಚಾರವನ್ನೆ ಆತಂಕವಾದಿಗಳು ಮತ್ತಷ್ಟು ಕ್ರೂರವಾಗಿ ಬಳಿಸಿ ಸಾಮಾನ್ಯರ ಬದುಕನ್ನು ಕಿತ್ತಿಕೊಂಡರು. ಹೀಗೆನೆ ಕೂಟತೆಯ ಪರಿಕ್ರಮ ಮತ್ತಷ್ಟು ಕೀಳತೆಗೆ ಇಳಿಯಿತು.
ಇಂದು ದೇಶಗಳು ‘ವಿಶ್ವ ಮಾನವನ ಕಲ್ಯಾಣ’ ಬಿಟ್ಟು ಸ್ವತಃದ ಪ್ರಗತಿಗಾಗಿ ಸ್ಪರ್ದೆ ಮಾಡುತ್ತಿವೆ. ಲಾಭಕ್ಕಾಗಿ ಕೂಟ ನೀತಿ ಅನುಸರಿಸಿ ಇನ್ನೊಂದು ದೇಶದ ಅರ್ಥವ್ಯವಸ್ಥೆ ವಿದ್ವಂಸ ಮಾಡುವದೆ ಇಂದಿನ ಯುದ್ಧದ ರೂಪವಾಗಿದೆ. ದೇಶಕ್ಕಾಗಿ ದುಡಿಯುವ ಕೈಗಳ ಬಲಿ ತೆಗೆದುಕೊಳ್ಳುವದು ಈ ಯುದ್ಧದ ನೀತಿ ಆಗಿದೆ. ಈ ವಿಚಾರದಲ್ಲಿಯೆ ಕೊರೋನಾ ವೈರಾಣು ಬಲಾಢ್ಯ ಮತ್ತು ಬಡ ರಾಷ್ಟ್ರಗಳಿಗೆ ಮುತ್ತಿಗೆ ಹಾಕಿ ಕೋಲಾಹಲ ಎಬ್ಬಿಸಿದೆ. ಈ ವೈರಾಣುವಿನ ಯುದ್ಧದಲ್ಲಿ ಮಾತ್ರ ಯಾವ ತೋಪು, ಕ್ಷಿಪಣಿ, ರಡಾರಗಳಿಗೆ ಸ್ಥಾನವಿಲ್ಲ. ರೋಗಿಗೆ ‘ಟಚ್’ ಮಾಡಿದರೆ ಸಾಕು ಯುದ್ಧ ಪ್ರಾರಂಭ ಆಗುತ್ತದೆ. ಕೇವಲ ‘ಟಚ್’ದಿಂದ ಜಗತ್ತನ್ನೆ ಹಬ್ಬಿ ತಾಂಡವ ಆಡುತ್ತಿರುವ ಈ ಮಾರಿಯ ಸಂಹಾರಕ್ಕೆ ಶಸ್ತ್ರಗಳಿಲ್ಲ. ಇದರ ಸಂಹಾರಕ್ಕೆ ಬಲಾಢ್ಯ ಸೈನ್ಯ ಬೇಕಿಲ್ಲ, ಬೇಕಿದೆ ವೇಗದ ವಿನೂತನ್ ‘ವಾಕ್ಸಿನ್’.

ಆದರೂ ಕಣ್ಣಿಗೆ ಕಾಣದ ಈ ವೈರಿಯ ಅಟ್ಟಹಾಸ ಕಟ್ಟಿಹಾಕಲು, ವೈದ್ಯರು, ಪೋಲಿಸ್‍ರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ತಾಯಿಂದಿರರು, ಕಂದಾಯ ಕರ್ಮಚಾರಿಗಳು ವಾರಿಯರ್ರ್ಸ್ ರಂತೆ ಕಾದಾಡುತಿದ್ದಾರೆ. ಈ ಯುದ್ಧದಲ್ಲಿ ಇವರೆಲ್ಲರಿಗೆ ಸೇನಾನಿ ಅಂದರೆ ವೈದ್ಯ. ವೈದ್ಯಲೋಕದಿಂದಲೆ ಜಗತ್ತು ಈ ಯುದ್ಧವನ್ನು ಬಹುಬೇಗ ಗೆಲ್ಲುತ್ತದೆ. ವಿಶ್ವದಲ್ಲಡೆ ವಿಕೃತ ನರ್ತನ ಮಾಡುತ್ತಿರುವ ಇದಕ್ಕೆ ಭಾರತದಲ್ಲಿ ಮಾತ್ರ ಈ ‘ವಾರಿಯರ್ರ್ಸ್’ಗಳು ಕಟ್ಟಿಹಾಕಿದ್ದಾರೆ. ಇನ್ನು ಸ್ವಲ್ಪ ಯುದ್ಧ ಬಾಕಿಯಿದೆ, ಅದನ್ನು ಅವರು ಗೆದ್ದೆ ಗೆಲ್ಲುತ್ತಾರೆ. ಆದರೆ ನಮಗೆ ಮಾತ್ರ ಮನೆಯಲ್ಲಿ ಕೂತು ಇವರೆಲ್ಲರಿಗೆ ಪ್ರೋತ್ಸಾಹ ಕೊಟ್ಟು ಗೌರವದಿಂದ ಕಾಣಬೇಕಿದೆ. ಅವರ ನಿಮಕ್ಕನುಸರಿಸಿ ಬದುಕುವದೆ ಈ ಮಾರಿಯ ವಿರುದ್ಧ ಹೋರಾಟದ ದೊಡ್ಡ ಅಸ್ತ್ರ.

ಸ್ನೇಹಿತರೆ, ಇವರಿಗೆ ಕೂಡ ನಮ್ಮಂತಹ ಬದುಕು ಇದೆ. ಹಗಲು ರಾತ್ರಿ ನಮಗಾಗಿ, ನಮ್ಮ ಪ್ರಾಣದ ರಕ್ಷಣೆಗಾಗಿ, ಎಲ್ಲಕ್ಕಿಂತ ಮಿಗಿಲು ದೇಶವನ್ನು ಕಾಪಾಡುವದಕ್ಕೆ ಇವರ ‘ವಾರ್’ ಚಾಲ್ತಿಯಲ್ಲಿದೆ. ಇದು ಇನ್ನೂ ಕೆಲವು ತಿಂಗಳು ನಡೆಯಬಹುದು. ಆದರೆ ದೃತಿಗೆಡಬೇಡಿ, ತಾಳ್ಮೆ, ಸಹಬಾಳ್ವೆ ಇರಲಿ. ವೈದ್ಯರು ನಮ್ಮ ನೆರೆ ಇರಬಾರದು ಅಥವಾ ಅವರ ಕುರಿತು ಅದೆಷ್ಟೊ ಜನರ ಬಾಯಿಯಿಂದ ನಕಾರಾತ್ಮಕ ಮಾತು ಕೇಳುತಿದ್ದೇನೆ. ಅದರಂತೆ ಇನ್ನುಳಿದ ವಾರಿಯರ್ರ್ಸ್ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು ಕೇಳುತಿದ್ದೇನೆ. ಬಹಳ ಕೆಟ್ಟೆನಿಸುತ್ತಿದೆ. ಬಹುತೇಕ ನಮ್ಮ ಜನರಿಗೆ ಈ ಸಮರದ ಹೋರಾಟಗಾರ ಯಾರು ಎಂಬುದು ಗೊತ್ತಿಲ್ಲ ಕಾಣಿಸುತ್ತದೆ. ಪ್ರಾಣದ ರಕ್ಷಣೆ ಮಾಡುವವ, ರಕ್ಷಣೆ ಕೊಡುವವ, ನಮ್ಮನ್ನು ಸ್ವಚ್ಛವಾಗಿ ಇಟ್ಟು, ನಮ್ಮ ಹೊಟ್ಟೆಗೆ ಅನ್ನ ಹಾಕುವವನೆ ದೇವರು ಎಂಬುದು ಗೊತ್ತಿರಲಿ.

ಸಾಮಾನ್ಯ ಮನುಷ್ಯನಿಗೆ ಈ ಕೊರೋನಾ ಎಷ್ಟು ಕಾಡುತ್ತದೆ, ಅದಕ್ಕಿಂತಲು ಹೆಚ್ಚು ವೈದ್ಯರಿಗೆ ಕಾಡುತ್ತದೆ. ಪಾಪ ಇಟಲಿಯಲ್ಲಿ ವೈದ್ಯ ದಂಪತಿಗಳು ಇದರ ವಿರುದ್ಧ ಹೋರಾಡುವಾಗ ನಗುತ್ತಾ ಪ್ರಾಣ ಬಿಟ್ಟರಂತೆ. ಇನ್ನೊಬ್ಬರ ಜೀವ ಕಾಪಾಡುವದರಲ್ಲಿ ವೈದ್ಯನೂ ಸಹ ಬಲಿ ಆಗುತ್ತಿದ್ದಾನೆ. ಆದರೂ ಅವರು ಹೋರಾಟ ಮಾತ್ರ ನಿಲ್ಲಿಸಿಲ್ಲ. ಒಂದು ಮಾತು ನೆನಪಿರಲಿ ಮನುಷ್ಯ ಪ್ರೀತಿ ಮತ್ತು ವಿಶ್ವಾಸದ ಮೇಲೆ ಬದುಕುತ್ತಿರುತ್ತಾನೆ. ಅದಕ್ಕಾಗಿ ಇವರೆಲ್ಲರಿಗೆ ಗೌರವಿಸಿ, ಪ್ರೀತಿಯಿಂದ ಕಾಣಿ. ಇದರಿಂದ ಅವರ ಶಕ್ತಿ ಇಮ್ಮಡಿ ಆಗುತ್ತದೆ. ನಮಗೆ ಈ ಯುದ್ಧ ಗೆಲ್ಲಲು ಮತ್ತಷ್ಟು ಸುಲಭ ಆಗುತ್ತದೆ. ಇವರ ಪರಿಶ್ರಮದ ಫಲದಿಂದಲೆ ಇವತ್ತು ಭಾರತ ಈ ಯುದ್ಧ ಗೆಲ್ಲುವ ಸಾಮಿಪ್ಯವಿದೆ.

ಪ್ರಾಣದ ಹಂಗು ಬಿಟ್ಟು ದೇಶಕ್ಕಾಗಿ ಶ್ರಮಿಸುತ್ತಿರುವ ಇವರಿಗೆ ಭಾರತಿಯ ಸೈನ್ಯವು ಇವತ್ತು ‘ವಾರಿಯರ್ರ್ಸ್’ಗಳ ಮೇಲೆ ಪುಪ್ಪವೃಷ್ಠಿ ಮಾಡಲು ಹೊರಟಿದೆ. ಅದಕ್ಕೆ ನಾವು ಕೂಡ ನಮ್ಮ ಮನೆ ಅಥವಾ ನೆರೆಯಲ್ಲಿ ‘ವಾರಿಯರ್ರ್ಸ್’ ಇದ್ದರೆ ಅವರು ಹೋಗುವಾಗ, ಬರುವಾಗ ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸೋಣ. ಸಾಧ್ಯವಿದ್ದರೆ ಮಾಸ್ಕ, ಪಿಪಯಿ ಕಿಟ್, ಸೊಂಕು ನಿರೋಧಕ ದ್ರವ್ಯ, ಆಹಾರ ಸಾಮಗ್ರಿಗಳನ್ನು ದಾನ ಮಾಡೋಣ. ಎಲ್ಲರೂ ಕೂಡಿ ಈ ಯುದ್ಧವನ್ನು ಗೆಲ್ಲೋಣ. ಮಾನವ ಕುಲದ ನೆಮ್ಮದಿಯ ಬದುಕನ್ನು ಮರಳಿಸೋಣ.

“ವಾರಿಯರ್ರ್ಸ್ ಆಫ್ ದಿ ಕೊರೋನಾ”… ಲವ್ ಯು ..!! ಸೆಲ್ಯೂಟ್ ಯು..!!!

ಮಲಿಕಜಾನ ಶೇಖ
ಅಕ್ಕಲಕೋಟ, ಮಹಾರಾಷ್ಟ್ರ
emedialine

View Comments

  • ತುಂಬಾ ಅರ್ಥ ಗರ್ಭಿತ ಬರಹ ಗುರುಗಳೇ, ನಿಜವಾದ ಹಿರೋಗಳು ನಮ್ಮ ಕೊರೋನಾ ವಾರಿಯರ್ಸ್, ಅವರ ಬಗ್ಗೆ ಶಕ್ತಿ ತುಂಬುವ ಸ್ಫೂರ್ತಿ ದಾಯಕ ಲೇಖನ ನಿಮ್ಮ ಈ ಸಾಹಿತ್ಯ ಸೇವೆ, ಜಗತ್ತಿನ ಎಲ್ಲೆಡೆ ಶಾಂತಿ, ಪ್ರೀತಿ, ಸೌಹಾರ್ದತೆ, ಆರೋಗ್ಯಕರ ಜೀವನ ನೆಲೆಸಲಿ ಎಂಬ ಈ ನಿಮ್ಮ ಲೇಖನಕ್ಕೆ ನನ್ನ ಸೆಲ್ಯೂಟ್.

    ಧನ್ಯವಾದಗಳು ಮಲಿಕ್ರುಜಾನ್ಳೇ ಶೇಖ ಗುರುಗಳಿಗೆ.

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago