ವಾಡಿ: ಸ್ಥಳೀಯ ಟ್ರಾನ್ಸ್‍ಪೋರ್ಟ್ ಮಾಲೀಕರ ಸಂಘದ ಪದಾಧಿಕಾರಿಗಳು ಲಾಕ್‍ಡೌನ್ ಸಂಕಟದಲ್ಲಿರುವ 300 ಬಡ ಕುಟುಂಬಗಳಿಗೆ 1.5 ಲಕ್ಷ ರೂ. ಮೌಲ್ಯದ ಆಹಾರದ ಕಿರಾಣಿ ಕಿಟ್ ವಿತರಿಸಿದರು.
ರವಿವಾರ ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ 11 ಹಾಗೂ 12ರ ಬಡಾವಣೆಯ ಬಡ ಕುಟುಂಬಗಳಿಗೆ 5 ಕೆ.ಜಿ ಅಕ್ಕಿ, 2 ಕೆ.ಜಿ ತೊಗರಿ ಬೇಳೆ, 1 ಕೆ.ಜಿ ಸಕ್ಕರೆ ಹಾಗೂ ಎಣ್ಣೆ ಪ್ಯಾಕೇಟ್ ಉಳ್ಳ ಕಿಟ್‍ಗಳನ್ನು ಸಂಘದ ವತಿಯಿಂದ ಗುರುತಿಸಲಾದ ಕುಟುಂಬಗಳಿಗೆ, ಲಾರಿ ಚಾಲಕರಿಗೆ, ಬಡಾವಣೆಯಲ್ಲಿ ನಿತ್ಯ ಜನರ ಸೇವೆಯಲ್ಲಿರುವ ಆಶಾ ಕಾರ್ಯಕರ್ತೆ ಮತ್ತು ಪೌರಕಾರ್ಮಿಕರಿಗೆ ವಿತರಿಸಲಾಯಿತು.
ಟ್ರಾನ್ಸ್‍ಪೋರ್ಟ್ ಮಾಲೀಕರ ಸಂಘದ ಗೌರವಾಧ್ಯಕ್ಷ ವಾಲ್ಮೀಕ ರಾಠೋಡ, ಅಧ್ಯಕ್ಷ ಶಂಕರಸಿಂಗ್ ರಾಠೋಡ, ಪ್ರಧಾನ ಕಾರ್ಯದರ್ಶಿ ಭೀಮರಾವ ದೊರೆ, ಉಪಾಧ್ಯಕ್ಷ ಸದಾಶಿವ ಕಟ್ಟಿಮನಿ, ಮುಖಂಡರಾದ ಗಣೇಶ ಚವ್ಹಾಣ, ಭೀಮಾಶಂಕರ ಸಿಂಧೆ, ಶಿವುಕುಮಾರ ಮಹಾಗಾಂವ, ಮರಲಿಂಗ ದೊಡ್ಡಮನಿ, ಭಾಗಣ್ಣ ದೊರೆ, ಬಸಪ್ಪ ಪೂಜಾರಿ, ಶರಣಪ್ಪ ಹುರಸಗುಂಡಗಿ, ಲೋಕಪ್ಪ ಹೊಸಮನಿ, ಸುನೀಲ ದೊರೆ, ಮಹ್ಮದ್ ರಫೀಕ್ ಪಾಲ್ಗೊಂಡಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…