ಆಳಂದ: ಕೊರೊನಾ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಿಲುಕಿ ಈಗ ಮೊದಲನೇ ಹಂತದಲ್ಲಿ ವಾಪಸ್ ಆಗಿರುವ ಆಳಂದ ತಾಲೂಕಿನ ಜನತೆಯನ್ನು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಮಂಗಳವಾರ ಆಳಂದ ಪಟ್ಟಣದ ತಹಸೀಲ ಕಚೇರಿ ಸಮೀಪ ಸ್ವಾಗತಿಸಿದರು.
ಮೂರು ಬಸ್‍ಗಳಲ್ಲಿ ಆಗಮಿಸಿದ್ದ ಜನತೆಯನ್ನು ಸ್ವಾಗತಿಸಿ ಮಾತನಾಡಿದ ಅವರು, ಬೆಂಗಳೂರಿನಿಂದ ಆಗಮಿಸಿದವರು 14 ದಿನಗಳ ಕಾಲ ಗೃಹ ಬಂಧನದಲ್ಲಿರಬೇಕು ಕಾಲ ಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಕೊಳ್ಳಬೇಕು ಇದು ಎಲ್ಲರ ದೃಷ್ಟಿಯಿಂದ ಒಳ್ಳೆಯದು. ಇದುವರೆಗೂ ಅಲ್ಲೇ ಉಳಿದಿರುವ ಇನ್ನಿತರ ಜನರನ್ನು ವಾಪಸ್ ಅವರ ಊರುಗಳಿಗೆ ತರೆ ತರುವ ಕೆಲಸ ಪ್ರಗತಿಯಲ್ಲಿದೆ. ರಾಜ್ಯ ಸರ್ಕಾರವು ಉಚಿತವಾಗಿ ಕರೆ ತರುವ ಅವಧಿಯನ್ನು ಗುರುವಾರದವರೆಗೂ ವಿಸ್ತರಿಸಿದೆ ಯಾರು ಆತಂಕಕ್ಕೆ ಒಳಗಾಗಬಾರದು ಎಂದು ಧೈರ್ಯ ತುಂಬಿದರು.
ಮನೆ ಮನೆಗಳಿಗೆ ತಪಾಸಣೆಗೆ ಬರುವ ಆಶಾ ಕಾರ್ಯಕರ್ತರ ಜೊತೆ ಸೌಜನ್ಯದಿಂದ ವರ್ತಿಸಿ ಅವರಿಗೆ ಸಹಕಾರ ನೀಡಬೇಕು. ನಿಮ್ಮಗಳ ಆರೋಗ್ಯದ ಜೊತೆಗೆ ಇತರರ ಆರೋಗ್ಯ ಕಾಪಾಡುವುದು ಈಗ ನಿಮ್ಮ ಕೈಯಲ್ಲಿದೆ ಅದಕ್ಕಾಗಿ ಸಾಮಾಜಿಕ ಸ್ವಾಸ್ಥ್ಯದ ಕಲ್ಪನೆಯೊಂದಿಗೆ ಮನೆಯಲ್ಲಿ ಇರಬೇಕು ಎಂದು ಜನತೆಗೆ ಮನವಿ ಮಾಡಿದರು.
ರಾಜ್ಯ ಸರ್ಕಾರದ ಕ್ರಮದಿಂದ ನಾವು ನಮ್ಮ ಊರಿಗೆ ಮರಳುತ್ತಿದ್ದೇವೆ. ಸರ್ಕಾರ ಹೇಳಿದ ಎಲ್ಲ ವಿಷಯವನ್ನು ಚಾಚು ತಪ್ಪದೇ ಪಾಲಿಸುತ್ತೇವೆ. ನಮಗಾಗಿ ವಿಶೇಷ ಕಾಳಜಿ ವಹಿಸಿದ ಶಾಸಕ ಸುಭಾಷ್ ಆರ್ ಗುತ್ತೇದಾರರಿಗೆ ವಿಶೇಷ ಕೃತಜ್ಞನತೆಗಳು.- ವಾಪಸ್ಸಾದವರು
ಜನರನ್ನು ಸುರಕ್ಷಿತವಾಗಿ ಕರೆತಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಚೆನ್ನಬಸಪ್ಪ, ಧನರಾಜ, ಕೇರಲಿಂಗ, ಸೈಯ್ಯದ, ಸಾದೀಕ್‍ರನ್ನು ಶಾಸಕರು ಅಭಿನಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…