ಚಿತ್ತಾಪುರ: ಕೊರೊನಾ ಲಾಕ್‌ಡೌನ್ ಮತ್ತು ನಿಷೇಧಾಜ್ಞೆ ನಡುವೆಯೂ ನಡೆದ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಡಿಪಿಓ ರಾಜಕುಮಾರ ರಾಠೋಡ ಅಮಾನತು ವಾಪಸ್ ಪಡೆದು, ಯಥಾಪ್ರಕಾರ ಚಿತ್ತಾಪುರ ಸಿಡಿಪಿಒ ಹುದ್ದೆಯಲ್ಲಿಯೇ ಮುಂದುವರೆಸಬೇಕು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ರವಿ ರಾಠೋಡ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರ ತಹಸೀಲ್ದಾರ್‌ಗೆ ಸಲ್ಲಿಸಿ ಮಾತನಾಡಿದ ಅವರು, ಸಿಡಿಪಿಓ ರಾಜಕುಮಾರ ರಾಠೋಡ ಅವರನ್ನು ಸೆಕ್ಟರ್ ಮೆಜಿಸ್ಟ್ರಟ್ ಆಗಿ ನೇಮಕ ಮಾಡಿದಾಗಿನಿಂದ ತಮ್ಮ ಜವಾಬ್ದಾರಿಗಳನ್ನು ಚಾಚು ತಪ್ಪದೇ ಹಗಲು ರಾತ್ರಿ ಎನ್ನದೇ ಬಹಳ ನಿಷ್ಠೇಯಿಂದ ಅಷ್ಟೇ ಪ್ರಾಮಾಣಿಕತೆಯಿಂದ ತಮ್ಮ ಸೇವೆ ಸಲ್ಲಿಸಿದ್ದಾರೆ. ಇಂತಹ ಒಬ್ಬ ದಕ್ಷ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿರುವುದು ಎಲ್ಲರಿಗೂ ಬಹಳ ಬೇಸರವನ್ನುಂಟು ಮಾಡಿದೆ, ಆದ್ದರಿಂದ ಕೂಲಕುಂಶವಾಗಿ ಪರಿಶೀಲಿಸಿ ಅಮಾನತು ಆದೇಶ ಹಿಂಪಡೇದು ಮತ್ತೇ ಯಥಾ ಪ್ರಕಾರ ಚಿತ್ತಾಪುರ ಸಿಡಿಪಿಓ ಹುದ್ದೆಯಲ್ಲಿಯೇ ಮುಂದುರೆಸುವ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಥೋತ್ಸವ ನಾಲ್ಕು ದಿನಗಳ ಮುಂಚೆಯೇ ಸಿದ್ದಲಿಂಗೇಶ್ವರ ಮಠದ ಆಡಳಿತ ಮಂಡಳಿಯವರು ರಥೋತ್ಸವ ರದ್ದು ಪಡಿಸಲಾಗಿದೆ ಎಂದು ಲಿಖಿತ ಮೂಲಕ ಪತ್ರ ಮತ್ತು ಪತ್ರಿಕೆ ಹೇಳಿಕೆ ಮೂಲಕ ನೀಡಿದ್ದಾರೆ, ಆದರೆ ಇಲ್ಲಿ ಹೇಳಿದ ಪ್ರಕಾರ ರಥೋತ್ಸವ ರದ್ದು ಮಾಡದೇ ಎಲ್ಲರ ಕಣ್ತಪ್ಪಿ ಮೋಸದಿಂದ ಬೆಳ್ಳಂಬೆಳಿಗ್ಗೆಯೇ ರಥೋತ್ಸವ ಮಾಡಿದ್ದಾರೆ, ಹೀಗಾಗಿ ಇಲ್ಲಿ ಮಠದ ಆಡಳಿತ ಮಂಡಳಿಯವರ ತಪ್ಪೇ ಹೊರತು ಅಧಿಕಾರಿಗಳ ತಪ್ಪಲ್ಲ, ಇಲ್ಲಿ ಮಾಡದ ತಪ್ಪಿಗೆ ಒಬ್ಬ ನಿಷ್ಠಾವಂತ ಅಧಿಕಾರಿ ಶಿಕ್ಷೆ ಅನುಭವಿಸುವಂತಾಗಿದೆ ಎಂದರು.
ಕೂಡಲೇ ಸಿಡಿಪಿಓ ಅಮಾನತು ಆದೇಶ ವಾಪಸ್ ಪಡೆಯದಿದ್ದರೆ ಬಂಜಾರ ಸಮಾಜದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಂಚಾಲಕ ಜಗದೀಶ ಚವ್ಹಾಣ, ಶಿವರಾಮ ಚವ್ಹಾಣ, ವಿಜಯಕುಮಾರ ಯಾಗಾಪೂರ ಎಚ್ಚರಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…