ಶಹಾಬಾದ: ಜನರು ಸಾಮಾಜಿಕ ಅಂತರ ಸರಿಯಾಗಿ ಕಾಯ್ದುಕೊಳ್ಳುತ್ತಿಲ್ಲವೆಂದು ಲಾಕ್‌ಡೌನ್ ಹೇರಲಾಗಿದೆ. ಇನ್ನೂ ಕೆಲವು ದಿನ ಜಿಲ್ಲಾಡಳಿತದ ಲಾಕ್ ಡೌನ್‌ಗೆ ವರ್ತಕರು ಸಹಕರಿಸಬೇಕೆಂದು ಕಲಬುರಗಿ ಶಾಸಕ ಬಸವರಾಜ ಮತ್ತಿಮಡು ಮನವಿ ಮಾಡಿದರು.
ಅವರು ನಗರದ ಸಂತೋಷ ಟ್ರೇಡರ್ಸ್‌ನಲ್ಲಿ ಕಿರಾಣಿ, ಜವಳಿ, ಸ್ವೀಟ್, ಬೇಕರಿ ಅಂಗಡಿ ಸೇರಿದಂತೆ ವಿವಿಧ ವರ್ತಕರೊಂದಿಗೆ ಸಭೆ ನಡೆಸಿ ಮಾತನಾಡಿದರು.
ನಗರದಲ್ಲಿ ಮೂವ್ವರಲ್ಲಿ ಕೊರೊನಾ ಸೊಂಕು ಕಂಡು ಬಂದಿದ್ದರೂ, ಅವರೆಲ್ಲರೂ ಗುಣಮುಖರಾಗಿ ಮನೆಗೆ ಮರಳಿ ಬಂದಿದ್ದಾರೆ. ನಗರದಲ್ಲಿ ಕೊರೊನಾದ ಸಂಖ್ಯೆ ಶೂನ್ಯಕ್ಕಿಳಿದಿದೆ ಎಂಬುದು ಸಂತೋಷದ ವಿಷಯ. ಗುರುವಾರ ಕೆಲವು ನಿರ್ಭಂಧದೊಂದಿಗೆ ತಾಲೂಕ ಆಡಳಿತ ನಗರದಲ್ಲಿ ಕೆಲವು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿತ್ತು. ಆದರೆ, ಜಿಲ್ಲೆಯಲ್ಲಿ ಮತ್ತೆ ಮೂರು ಕರೋನಾ ಸೊಂಕು ಕಂಡು ಬಂದ ಹಿನ್ನೇಲೆಯಲ್ಲಿ ಜಿಲ್ಲಾಧಿಕಾರಿಗಳು ಅನಿವಾರ್ಯವಾಗ ಲಾಕ್‌ಡೌನ್ ಬಿಗಿಗೊಳಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿ ಇರುವುದೇ ಸಮಾಜಕ್ಕೆ ನೀಡುವಂತಹ ದೊಡ್ಡ ಸೇವೆ.ಮನೆಯಲ್ಲಿ ಹೊರಬರುವುದಕ್ಕೆ ಇಲ್ಲಸಲ್ಲದ ಕಾರಣ ಹುಡುಕಬೇಡಿ. ಜಾತಿ,ಧರ್ಮ, ವರ್ಗ ಎಲ್ಲವನ್ನೂ ಬದಿಗೊತ್ತಿ ಮನುಷ್ಯರಾಗಿ ಕೆಲಸ ಮಾಡೋಣ.ಸಂಕುಚಿತ ಭಾವನೆ ದೂರ ಮಾಡೋಣ.ಸರ್ಕಾರದ ಸವಲತ್ತು ತಲುಪಿಸಲು ಮತ್ತು ಲಾಕ್‌ಡೌನ್ ಯಶಸ್ವಿಯಾಗಿ ಪಾಲನೆಯಾಗಲು ಎಲ್ಲರೂ ಸಹಕಾರ ನೀಡಬೇಕು. ನಗದ ಎಲ್ಲಾ ವರ್ತಕರು ಇನ್ನೂ ಕೆಲವುದಿನ ಸಹಕರಿಸಬೇಕೆಂದು ಮನವಿ ಮಾಡಿದರು.
ತಹಶೀಲ್ದಾರ ಸುರೇಶ ವರ್ಮಾ, ಪಿಐ. ಬಿ.ಅಮರೇಶ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಅರುಣಪಟ್ಟಣಕರ್, ಮೃತ್ಯುಂಜಯ ಸ್ವಾಮಿ ಹಿರೇಮಠ, ವಿಜಯಕುಮಾರ ಓಝಾ, ಮಲ್ಲಿಕಾರ್ಜುನ ತುಪ್ಪದ ಮಠ, ಸೋಮಶೇಖರ ನರಿಬೋಳ,ಮಹಾವೀರ ಸುಗಂಧಿ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…