ಬಿಸಿ ಬಿಸಿ ಸುದ್ದಿ

ಜನಪ್ರಿಯ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೊಂದು ಪತ್ರ…

ಇಡೀ ಜಗತ್ತು ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ಇದರಿಂದ ಯಾವ ಯುದ್ಧಕ್ಕೂ ಕಡಿಮೆ ಇಲ್ಲದಷ್ಟೂ ಜನರು ಸಾಯುತ್ತಿದ್ದಾರೆ. ವೈದ್ಯಕೀಯ, ಪೊಲೀಸ್ ಹಾಗೂ ಇನ್ನಿತರ ಇಲಾಖೆಯ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಸೋಂಕಿತರ ಪ್ರಾಣ ಉಳಿಸಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ.

ಬೇಡಿದವರಿಗೆ ವರವನ್ನು ಕೊಡುತ್ತವೆಂದು ನಂಬಿದ ದೇವಾಲಯ, ಮಸೀದಿ, ಚರ್ಚುಗಳು ತಮ್ಮ ಬಾಗಿಲುಗಳನ್ನು ಮುಚ್ಚಿಕೊಂಡಿವೆ. ಅದರ ಬದಲಾಗಿ ಆಸ್ಪತ್ರೆಗಳೇ ಜನರ ಪಾಲಿನ ಮಂದಿರಗಳಾಗಿವೆ. ಮೌಢ್ಯವೇ ತುಂಬಿದ ಈ ದೇಶದಲ್ಲಿ ಈ ಸೋಂಕು ಸತ್ಯ ಮತ್ತು ನಂಬಿಕೆ ಬೇರೆ ಬೇರೆ ಎನ್ನುವ ಪರಮಸತ್ಯದ ಅರಿವು ಮೂಡಿಸುತ್ತಿದೆ ಎನ್ನುವಂತಾಗಿದೆ. ಈ ಅರಿವು ಜನಮಾನಸದಲ್ಲಿ ಸ್ಥಾಯಿಯಾಗಿ ಉಳಿದು ಮುಂದೆ ಜನರು ಇದೇ ದಾರಿಯಲ್ಲಿ ನಡೆದರೆ ಮುಂದಿನ ಪೀಳಿಗೆಗಾದರೂ ಶಿಕ್ಷಣ ಮತ್ತು ಆರೋಗ್ಯದ ಕುರಿತ ಮಹತ್ವವನ್ನು ಬಳುವಳಿಯಾಗಿ ಬಿಟ್ಟಂತಾಗುತ್ತದೆ.
ಅದಾಗಿ ಈ ಕೊರೊನಾ ಮಹಾಮಾರಿಯನ್ನು ತಹಬದಿಗೆ ತರಲು ಸರ್ಕಾರಗಳು ಲಾಕ್‌ಡೌನ್ ಎಂಬ ಮಂತ್ರವನ್ನು ಜಪಿಸಿದವು. ಇದರಲ್ಲಿ ದೀಪ ಉರಿಸಿದ್ದು, ತಟ್ಟೆ ಬಾರಿಸಿದ್ದು ಆಯ್ತು. ಇದರಿಂದ ಜಗತ್ತಿನ ಮುಂದೆ ನಾವು ಮೌಢ್ಯದ ಮಹಾಪೋಷಕರೆಂದು ಮತ್ತೊಮ್ಮೆ ತೋರಿಸಿಕೊಟ್ಟೆವು.

ಬಡತನವೇ ತಾಂಡವವಾಡುತ್ತಿರುವ ಈ ದೇಶದಲ್ಲಿ ಯಾವುದೇ ಮುಂದಾಲೋಚನೆಯಿಲ್ಲದೇ ತೆಗೆದುಕೊಂಡ ಈ ಲಾಕ್‌ಡೌನ್‌ನಿಂದ ಕೊರೊನಾ ಸೋಂಕು ಎಷ್ಟು ಹಿಮ್ಮೆಟ್ಟಿದೆಯೋ ಗೊತ್ತಿಲ್ಲ. ಆದರೆ ಅದರ ನೂರುಪಟ್ಟು ಬಡವರ ಬದುಕನ್ನು ಇನ್ನಷ್ಡು ದುಃಖಕ್ಕೆ ತಳ್ಳಿದೆ. ಇದರಲ್ಲಿ ಅನೇಕ ಬಡಕುಟುಂಬಗಳು ಬೀದಿಪಾಲಾದರೆ, ಎಷ್ಟೋ ಜೀವಗಳು ನಡುದಾರಿಯಲ್ಲಿಯೇ ಜೀವಬಿಟ್ಟವು. ಕೆಲವರು ತಮ್ಮ ಮಕ್ಕಳು ಕಣ್ಣೆದುರೇ ಹಸಿವಿನಿಂದ ಸಾಯುತ್ತಿರುವುದನ್ನು ನೋಡಲಾರದೇ ಆತ್ಮಹತ್ಯೆ ಮಾಡಿಕೊಂಡರು. ಅತ್ತ ಕೆಲಸವಿಲ್ಲದೇ ಇತ್ತ ಸ್ವಂತ ಊರಿಗೆ ಹೋಗಲಾರದೇ ಲಕ್ಷಾಂತರ ಕುಟುಂಬಗಳು ಬೀದಿಯಲ್ಲೇ ಬದುಕುವಂತಾಗಿದೆ. ಇವರೆಲ್ಲರೂ ಮತ್ತೆ ಮೊದಲಿನ ಬದುಕು ಯಾವಾಗ ಕಟ್ಟಿಕೊಳ್ಳಬಹುದು ಎಂದು ಯೋಚಿಸಿದರೆ ತುಂಬಾ ಖೇದವಾಗುತ್ತದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಬಡವರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರಗಳು ಕೇವಲ ಉಳ್ಳವರ ಹಿತಾಸಕ್ತಿಗಳನ್ನು ಕಾಪಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.

ಒಂದು ಸಂಗತಿಯನ್ನು ಹೇಳಲೇಬೇಕು: ನನ್ನ ದೃಷ್ಟಿಯಲ್ಲಿ ದೇಶ ಎಂದರೇ ಜನ. ಜನರೆಂದರೇ ದೇಶ. ಇನ್ನು ಸ್ವಾಭಾವಿಕವಾಗಿ ದೇಶದ ರಕ್ಷಣೆ ಮಾಡಬೇಕಾದ ಹೊಣೆ ನಮ್ಮ ಸೈನಿಕರದ್ದಾದರೆ, ಜನರನ್ನು ಹಸಿವು ಮತ್ತು ಇನ್ನಿತರ ಸಂಕಟಗಳಿಂದ ರಕ್ಷಿಸುವುದು ಸರ್ಕಾರದ ಸಿಬ್ಬಂದಿಗಳ ಹೊಣೆಗಾರಿಕೆಯಾಗಿದೆ. ರಾಜಕಾರಣಕ್ಕೆ ಬಂದರೆ ರಾಜಕಾರಣಿಗಳು ಹುಸಿಭ್ರಮೆಗಳನ್ನು ಸೃಷ್ಟಿಸುವ, ಅಥವಾ ವೈಭೋಗದ ಜೀವನ ನಡೆಸಲಿಕ್ಕೆ ಮಾತ್ರ ಸೀಮಿತವಾದ ಆಟಿಕೆಯ ಬೊಂಬೆಗಳು ಎನ್ನುವಂತಾಗಿದೆ. ಮತದಾರ ಅಥವಾ ಮತಕ್ಷೇತ್ರವು ಹೆಮ್ಮೆಪಡುವಂತಹ ನಾಯಕ ಈಗ ಯಾರೂ ಉಳಿದಿಲ್ಲ ಎನ್ನುವಷ್ಟರಮಟ್ಟಿಗೆ ಉತ್ತಮರ ಸಂಖ್ಯೆ ಕ್ಷೀಣವಾಗಿದೆ. ತ್ಯಾಗ ಬಲಿದಾನದಿಂದ ಕೂಡಿದ ಈ ಕ್ಷೇತ್ರ ಈಗ ಬೇಸರ ಬರುವಷ್ಟರಮಟ್ಟಿಗೆ ಕಲುಷಿತವಾಗಿದೆ.

ಆದರೆ ಇದಕ್ಕೆ ಅಪವಾದವೆಂಬಂತೆ ತಮ್ಮಂಥ ಕೆಲವು ನಾಯಕರು ಇನ್ನೂ ಕೂಡಾ ಬಡವರ ಕೊರಳ ದನಿಯಾಗಿ ಮಾತಾಡುತ್ತಿದ್ದೀರಿ, ಆ ದಿಸೆಯಲ್ಲಿ ಕೆಲಸ ಮಾಡುತ್ತಿದ್ದೀರಿ ಎನ್ನುವುದು ಮುಳುಗುವ ಮನುಷ್ಯನಿಗೆ ಹುಲ್ಲುಕಡ್ಡಿ ಆಸರೆಯಾದಂತೆ ಎನ್ನುವುದು ನನ್ನಂಥವನಿಗೆ ಸಮಾಧಾನದ ಸಂಗತಿ. ಏಕೆಂದರೆ ಬಹುತೇಕ ರಾಜಕಾರಣಿಗಳು ಈ ಕೊರೊನಾ ವಿಪತ್ತಿನಿಂದ ಪಾರಾದರೆ ಸಾಕು ಎಂದು ಬಾಗಿಲು ಮುಚ್ಚಿಕೊಂಡು ಮನೆಯೊಳಗಿದ್ದರೆ ತಾವು ಮಾತ್ರ ದಿಟ್ಟತನದಿಂದ ಜನರ ಸಂಕಷ್ಟಕ್ಕೆ ಮಿಡಿಯುವುತ್ತಿರುವುದಕ್ಕೆ ತಮ್ಮ ಮೇಲಿನ ಅಭಿಮಾನ ಇನ್ನಷ್ಟು ಇಮ್ಮಡಿಗೊಳಿಸಿದೆ.
ಈ ಕೊರೊನಾ ಸಮಸ್ಯೆಯ ಆರಂಭದ ದಿನಗಳಿಂದಲೂ ತಾವು ಜನರಿಗೆ ಮಾಸ್ಕ್ ವಿತರಿಸುವುದು, ದಿನಸಿ ವಸ್ತುಗಳು, ತರಕಾರಿ ವಿತರಿಸುವುದು, ಬಡವರಿಗೆ ಊಟದ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಕಾರ್ಮಿಕರಿಗೆ ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಲು ಮಾಡುತ್ತಿರುವ ಪ್ರಯತ್ನಗಳೆಲ್ಲವನ್ನೂ ತುಂಬಾ ಅಭಿಮಾನದಿಂದ ಗಮನಿಸುತ್ತಿದ್ದೇನೆ. ನಾಡಿನ ಜನತೆಗೆ ತಾವೊಬ್ಬ ಮುತ್ಸದ್ದಿ ರಾಜಕಾರಣಿ ಎಂಬುದನ್ನು ಇಂಥ ಸಂದಿಗ್ಧ ಸಂದರ್ಭದಲ್ಲಿ ಸಾಬೀತು ಮಾಡಿ ತೋರಿಸಿದ್ದೀರಿ. ಇಂಥ ಗಳಿಗೆಯಲ್ಲಿ ತಾವು ತೋರಿದ ಸಕಾಲಿಕ ಕಾಳಜಿ ಮತ್ತು ಧೈರ್ಯ ಎರಡೂ ಮೆಚ್ಚುವಂತದ್ದು.

ಇದಷ್ಟೇ ಅಲ್ಲ, ಇನ್ನೂ ಹಲವು ಕಾರಣಗಳಿಂದಾಗಿ ತಾವು ನನಗೆ ತುಂಬಾ ಇಷ್ಟದ ನಾಯಕರು. ತಮ್ಮ ನೇರ ನುಡಿ, ನಡೆ ಕೆಲವರಿಗೆ ಮುಜುಗರ ಉಂಟುಮಾಡಿದರೂ ನನಗೆ ಮಾತ್ರ ತಮ್ಮ ದಾರಿಯೇ ಸರಿ ಎನಿಸುತ್ತದೆ. ಏಕೆಂದರೆ ಇಂದಿನ ಲೆಕ್ಕಾಚಾರದ ಬದುಕಿನಲ್ಲಿ ಸತ್ಯ ಸ್ವಲ್ಪ ನಿಧಾನವಾಗಿ ಚಲಿಸುತ್ತದೆ. ಆದರೆ ಕೊನೆಗೇ ಗೆಲ್ಲುವುದು ಮಾತ್ರ ಸತ್ಯವೇ! ಸಂವಿಧಾನದ ಆಶಯದಂತೆ ನಡೆಯುತ್ತಿರುವ ತಾವು ಭವಿಷ್ಯದ ಬಹು ದೊಡ್ಡ ನಾಯಕರಾಗಬೇಕೆನ್ನುವುದು ನನ್ನ ಸದಾಶಯ.

ಇಂಥದೊಂದು ನಾಲ್ಕು ಸಾಲುಗಳ ಪತ್ರ ನಾಲ್ಕೈದು ವರ್ಷಗಳ ಹಿಂದೆಯೇ ಬರೆಯಬೇಕೆಂದಿದ್ದೆ. ಪ್ರಜಾವಾಣಿ ಪತ್ರಿಕೆ ’ದೇಶಕಾಲ’ ದೊಂದಿಗೆ ಒಂದು ವಿಶೇಷ ಪುರವಣಿ ಪ್ರಕಟಿಸಿತ್ತು. ಅದರಲ್ಲಿ ತಮ್ಮದೊಂದು ಚಿಕ್ಕ ಸಂದರ್ಶನ ಪ್ರಕಟವಾಗಿತ್ತು. ಅದನ್ನು ಓದಿದ ಮೇಲೆ ಲೇಖನ ಓದಿದೆ ಎನ್ನುವುದಕ್ಕಿಂತಲೂ ಒಂದು ಸುಂದರ ಕತೆ ಓದಿದೆ ಎನ್ನುವ ಹಾಗೆ ಅದು ಬಹಳ ದಿನಗಳ ಕಾಲ ಹಾಗೆಯೇ ನೆನಪಲ್ಲಿ ಉಳಿಯಿತು. ಆ ನೆನಪು ಈಗಲೂ ಹಾಗೆಯೇ ಇದೆ. ಅಂದು ಬರೆಯಬೇಕೆಂದಿದ್ದ ಪತ್ರ ಈಗ ಸಾಧ್ಯವಾಗಿದೆ.

ಕಾರಣ ಇಷ್ಟೇ: ತಾವು ಜನರ ನಿರೀಕ್ಷೆಗಳನ್ನು ನಿಜಗೊಳಿಸಲು ಅವಿಶ್ರಾಂತವಾಗಿ ದುಡಿಯುತ್ತಿರುವುದು, ದಣಿಯುತ್ತಿರುವುದನ್ನು ಕಂಡು ನನ್ನಲ್ಲಿ ತಲ್ಲಣ ಹುಟ್ಟಿಕೊಂಡಿದೆ. ಸಾರ್ವಜನಿಕ ಬದುಕಲ್ಲಿ ಮುಳುಗಿ ಹೋಗಿರುವ ನೀವು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುತ್ತಿಲ್ಲ ಎನ್ನುವ ಕೊರಗು ನನ್ನನ್ನು ಕಾಡುತ್ತಿದೆ.. ಆದ್ದರಿಂದ ಆರೋಗ್ಯದ ಕಡೆ ತಾವು ಹೆಚ್ಚು ಗಮನ ಕೊಡಿ ಎನ್ನುವುದು ನನ್ನ ವಿನಮ್ರ ಕಾಳಜಿ. ಬಡವರ ನೋವಿಗೆ ಧ್ವನಿಯಾಗುವ ತಮ್ಮ ತಾಯಿಕಾರುಣ್ಯದ ನಡೆಯನ್ನು ಈ ನಾಡು ಸದಾ ಸ್ಮರಿಸುತ್ತದೆ.

ಮಹಾರಾಷ್ಟ್ರದ ಹೆಸರಾಂತ ಕವಿ ಅಣ್ಣಾ ಭಾವು ಸಾಠೆ ಅವರ ಕವಿತೆಯ ಸಾಲುಗಳೊಂದಿಗೆ ಈ ಪತ್ರ ಪೂರ್ಣಗೊಳಿಸುತ್ತಿದ್ದೇನೆ. ಈ ಜಗವ ಬದಲಿಸಲು ಹಾಕೊಂದು ಪೆಟ್ಟು, ಬಾಬಾ ಹೋಗಿದ್ದಾರೆ ನಿಜ ಹೇಳಿ ಕೊಟ್ಟು.

ಇಂತಿ ತಮ್ಮ
ದತ್ತಾತ್ರೇಯ ಇಕ್ಕಳಕಿ
ಕಲಬುರ್ಗಿ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

1 hour ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago