ಅಂಕಣ ಬರಹ

ಆನೆಯ ಜರಿದು ಕೋಣವನೇರಿದರೆ ಸವದತ್ತಿಮಠರು?

ಮೇ 12 ವಿಜಯವಾಣಿ ಪತ್ರಿಕೆಯ ಚಿ೦ತನ ವಿಭಾಗದಲ್ಲಿ ಪ್ರಕಟವಾದ ಡಾ। ಸ೦ಗಮೇಶ ಸವದತ್ತಿಮಠರ ಲೇಖನವು ಜಾಣ ಕುರುಡುತನ ಮತ್ತು ಕಪಟತನಗಳಿ೦ದ ಕೂಡಿದ್ದು, ನಾವು ತೀವ್ರವಾಗಿ ಖಂಡಿಸುತ್ತೇವೆ. ಬಸವಣ್ಣನವರು ತಾವೇ ‘ಎತ್ತು’ ಎಂದು ಹೇಳಿಕೊ೦ಡಿದ್ದಾರಲ್ಲ ಅದಕ್ಕೇನಂತೀರಿ? ಎಂಬ ಅವರ ಮಾತೆ ಬಾಲಿಶತನ. ಆತ್ಮವಂಚನೆ. ವಚನ ಸಾಹಿತ್ಯದಲ್ಲಿಯೇ ಹರಿದಾಡುತ್ತಾ ದಪ್ಪ ದಪ್ಪ ಗ್ರಂಥಗಳನ್ನು ಬರೆದು ಪದವಿ-ಪ್ರಶಸ್ಕಿಗಳನ್ನು ಗಿಟ್ಟಿಸಿಕೊಂಡ
ಸವದತ್ತಿಮಠರಿಗೆ ‘ವೃಷಭನೆಂಬ ವಾಹನವಾಗಿರ್ದೆ’ ಎಂಬ ಸಾಲು ಅರ್ಥವಾಗಲಿಲ್ಲವೆ? ವೃಷಭ ವಾಹನವೆಂದರೆ ಧರ್ಮ ಹೊತ್ತು ಬಂದವರು. ಧರ್ಮ ತಂದವರು ಎಂದರ್ಥ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಮಹಾನುಭಾವರು ಬಸವಣ್ಣನವರು. ಅವರು ಎತ್ತಲ್ಲ; ಬಿದ್ದವರನ್ನು ಎತ್ತಲು ಬ೦ದ ಮಹಾಮಾನವತಾವಾದಿ. ವಿಶ್ವಗುರು. ಜಗಜ್ಯೋತಿ.ಯುಗಪುರುಪರೆಂಬುದು ಲೋಕಕ್ಕಲ್ಲ ತಿಳಿದಿದೆ.

12ನೇ ಶತಮಾನದ ನಂತರ ಇಡೀ ಕರುನಾಡನ್ನು, ಸಕಲ ಜಾತಿ-ಮತ-ಪಂಥದವರ ಆರಾಧ್ಯರಾಗಿ ಆವರಿಸಿದ ಬಸವಣ್ಣನವರ ಪ್ರಭಾವಕ್ಕೆ ಕಂಗಾಲಾಗಿ, ಬಸವಣ್ಣ ಎಂದರೆ ನಂದಿಯ ಅವತಾರವೆಂದು ಗೌರವಾನ್ಹ್ವಿತವಾಗಿ ಸಂಬೋಧಿಸುತ್ತಲೇ, ಕ್ರಾಂತಿಪುರುಷ – ದೀನ ದಲಿತರ ಆರಾಧ್ಯ ಬಸವಣ್ಣನವರನ್ನು ಎತ್ತಾಗಿ ಬಿಂಬಿಸಿ, ಮುಗ್ಗರನ್ನು ದಾರಿತಪ್ಪಿಸುವುದು ಸರಿಯೆ? ಈಗ ಸಮಾಜ ಜಾಗೃತವಾಗಿದೆ. ಇಂಥ ಪೊಳ್ಳುವಾದಗಳಿಗೆ ಯಾರೂ ಸೊಪ್ಪು ಹಾಕರು. ಜನಸಾಮಾನ್ಯರ ಅಥವಾ ಮೂಢರ ಮೌಢ್ಯವನ್ನು ತಿದ್ದಬೇಕಾದ ತಮ್ಮಂಥವರು ವಚನಗಳನ್ನು ತಪ್ಪಾಗಿ ಅರ್ಥೈಸಿ ದಾರಿ ತಪ್ಪಿಸುತ್ತಿರುವುದು ದುರದೃಷ್ಟಕರ. ‘ಲಾ೦ಛನಕ್ಕೆ ತಕ್ಕ ಆಚರಣೆ ಇಲ್ಲದಿರೆ ಕೂಡಲಸಂಗಮದೇವಾ ನೀ ಸಾಕ್ಷಿಯಾಗಿ ಛೀ ಎಂಬೆ’ ಎ೦ಬ ಬಸವಣ್ಣನವರ ವಚನ ನೆನಪಾಗುತ್ತಿದೆ.

ಇನ್ನು ಸವದತ್ತಿಮಠರು ಅಲ್ಲಮಪ್ರಭು, ಚನ್ನಬಸವಣ್ಣ, ಬಸವ ಪುರಾಣ, ಹರಿಹರನ ರಗಳೆಗಳನ್ನು ಉಲ್ಲೇಖಿಸಿ ವೃಷಭತ್ತವನ್ನು ಗಟ್ಟಿಗೊಳಿಸಲು ಪ್ರಯತ್ನಿಸಿರುವುದು ಆಶ್ಚರ್ಯಕರ. ಏಕೆಂದರೆ “ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಕರ್ತನಟ್ಟದನಯ್ಯಾ ಒಬ್ಬ ಶರಣನ”, ‘ಆನೂ ನೀನೂ ಬಸವಾ ಬಸವಾ ಎನುತಿರ್ದೆವಯ್ಯಾ ಗುಹೇಶ್ವರಾ’, ‘ಸಮಾಧಾನವೆಂಬ
ಪ್ರಸಾದ ಬಸವಣ್ಣನಿಂದ ಎನಗಾಯಿತ್ತು’, ‘ಬಸವಣ್ಣನೆ೦ಂಬ ಜ್ಯೋತಿ ಮುಟ್ಟಸಲು ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ’, ಬಸವಣ್ಣನಿಂದ ಸದ್ಭಕ್ರನಾದೆನಯ್ಯಾ ಎ೦ಬ ಅಲ್ಲಮಪ್ರಭುದೇವರ ಅನೇಕ ವಚನಗಳು, ಷಟಸ್ಥಲಜ್ಜಾನಿ ಚೆನ್ನಬಸವಣ್ಣನವರ ‘ಭಕ್ತಿ ಪಥವ ತೋರಬಂದನಯ್ಯಾ ನಮ್ಮ ಬಸವಣ್ಣನು’, ‘ಬಸವಣ್ಣ ಮರ್ತ್ಯಲೋಕಕ್ಕೆ ಬ೦ದು ಮಹಾಮನೆಯ ಕಟ್ಟ, ಭಕ್ತಿ ಜ್ಞಾನವೆ೦ಬ ಜ್ಯೋತಿಯನೆತ್ತಿ ತೋರಲು ಸುಜ್ಜಾನವೆಂಬ ಪ್ರಭೆ ಪಸರಿಸಿತ್ತಯ್ಯ ಜಗದೊಳಗೆ” ಎಂಬ ಸಾಲು ಸಾಲು ವಚನಗಳು, ಶಿವಯೋಗಿ ಸಿದ್ದರಾಮೇಶ್ವರರ ‘ನೋಟದ ಭಕ್ತಿ ಬಸವಣ್ಣನಿ೦ಂದಾಯಿತ್ತು,. ಬಸವನ ಮೂರ್ತಿಯೇ ಧ್ಯಾನಕ್ಕೆ ಮೂಲ, ಬಸವೇಶನೆ ಬಸವರಾಜನೆ ಬಸವಣ್ಣನೆ ಬಸವ ತಂದೆ ಬಸವ ಕೃಪಾನಿಧಿ ಬಸವ ಪ್ರಮಥಾದಿದೇವ ಎ೦ಬ ಬಸವಭಕ್ತಿ ಪ್ರೇರಕ
ಅಮೂಲ್ಯ ವಚನಗಳಾಗಲಿ, ಬಸವ ಪುರಾಣದ ‘ಶ್ರೀಗುರುವೆ ದೀಕ್ಷಾಗುರುವೆ ರಕ್ಷಾಗುರುವೆ ಶಿಕ್ಚಾಗುರುವೆ.

ಭವರೋಗಹರ ಶರಣಾಗು ಬಸವ ಮಹಾಗುರುವೆ ನಮಗೆ’ ಎಂಬ ಸ್ತುತಿಯಾಗಲಿ ಮತ್ತು ಹರಿಹರನ ರಗಳೆಯಲ್ಲಿಯ ಬಸವಣ್ಣನವರು ಪೂಜೆಗಾಗಿ ಹೂ ತರುವ ಸಂಭ್ರಮದ ಸಂಭಾಷಣೆಗಳಾಗಲೀ ಬಸವಣ್ಣನವರು ಐತಿಹಾಸಿಕ ಪುರುಷರು, ಜಗತ್ತು ಕಂಡು ಕೇಳರಿಯದ ಅಪರೂಪದ ದಿವ್ಯ ಭವ್ಯ ಮಾನವರು ಎಂಬುದನ್ನು ಸಾಬೀತುಪಡಿಸುತ್ತವಲ್ಲವೆ? ಆದರೂ ಸವದತ್ತಿಮರರಿಗೆ ಮನದಟ್ಟಾಗಲಿಲ್ಲವೆ? ಅಪ್ಪೇ ಅಲ್ಲ ಸ್ವತಃ ಬಸವಣ್ಣನವರೆ ‘ನಾನೊಂದು ಕಾರಣ ಮರ್ತ್ಯಕ್ಕೆ ಬಂದೆನು, ‘ಕರ್ತ ನಟ್ಟಿದಡೆ ಮಹಾಮನೆಯ ಕಟ್ಟಿದೆ” ಎಂದು ಹೇಳಿಲ್ಲವೆ? ಮತ್ತೇನು ಸಾಕ್ಷಿ ಬೇಕು?) ಇಪ್ಪಲ್ಲ ಸಾಕ್ಷಿಗಳಿದ್ದಾಗಲೂ ಬಸವಣ್ಣನವರನ್ನು ಎತ್ತೆಂದು ಪೂಜಿಸಿದರೆ ತಪ್ಪೇನು) ಎನ್ನುವುದು ಕುಬುದ್ಧಿಯೇ ಸರಿ. ವಚನ ಸಾಹಿತ್ಯದಿ೦ದಲೇ ಹೆಸರು, ದಿನದ ಅನ್ನ ಪಡೆದ
ತಾವು ಶರಣರಿಗೆ ಮಾಡುತ್ತಿರುವ ದ್ರೋಹವಲ್ಲದೆ ಮತ್ತೇನು?) ದಯವಿಟ್ಟು ಅವಲೋಕನ ಮಾಡಿಕೊಳ್ಳಿ.

‘ಕೊರೋನಾ’ ಸಂದರ್ಭದಲ್ಲಿ ಈ ವಿಷಯದ ಅಗತ್ಯವಿತ್ತೆ ಎ೦ಬ ಸಾಮಾಜಿಕ ಕಳಕಳಿಯ ಮಾತು ಹಾಸ್ಕಸ್ಟದ.
ಬಸವಜಯಂತಿಯ ಸಂದರ್ಭದಲ್ಲಿ ಚರ್ಚೆಯಾಗಿ ಸತ್ತು ಹೋದ ಮಾತನ್ನು ಮತ್ತೆ ಎತ್ತಿ ನುಡಿದು ಗದ್ದಲವೆಬ್ಬಸಿದವರು
ಯಾರು?

-ಅಕ್ಕ ಅನ್ನಪೂರ್ಣ ತಾಯಿ
ಲಿಂಗಾಯತ ಮಹಾಮಠ, ಬೀದರ್

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago