ಬಿಸಿ ಬಿಸಿ ಸುದ್ದಿ

ದತ್ತಾತ್ರೇಯ ಇಕ್ಕಳಕಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅಭಿನಂದನ ಪತ್ರ

ಮಾನ್ಯ ದತ್ತಾತ್ರೇಯ ಇಕ್ಕಳಕಿ ಅವರಿಗೆ ನಮಸ್ಕಾರಗಳು,

ನೀವು ಬರೆದ ಪತ್ರವು ನನಗೆ ತಲುಪಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಒಬ್ಬ ಜವಾಬ್ದಾರಿಯುತ ಶಾಸಕನಾಗಿ ನಾನು ನನ್ನ ಕೆಲಸಗಳನ್ನು ಮಾಡುತ್ತಿದ್ದೇನೆ. ನನ್ನ ಈ ಕಾರ್ಯಗಳ ಕುರಿತು ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಹಾಗೂ ಕಾಳಜಿಗೆ ನಾನು ಆಭಾರಿಯಾಗಿದ್ದೇನೆ.

ಕಳೆದ 5 ದಶಕಗಳಿಂದ ಈ ಭಾಗದ ಜನತೆ ನನ್ನ ಹಾಗೂ ನಮ್ಮ ತಂದೆಯವರ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾವು ಸಲ್ಲಿಸುತ್ತಿರುವ ಅಳಿಲು‌ ಸೇವೆ ಇದು. ನಮ್ಮ ಜನ ಸಂಕಷ್ಟದಲ್ಲಿರುವಾಗ ಅವರ ಸಹಾಯಕ್ಕೆ ಧಾವಿಸುವುದು ಯಾವುದೇ ಮಾನವೀಯ ವ್ಯಕ್ತಿಯ ಪ್ರಥಮ ಆದ್ಯತೆಯಾಗಬೇಕು. ಇದು ನಮ್ಮ ಹೊಣೆ ಹಾಗೂ ಕರ್ತವ್ಯವೂ ಹೌದು. ಇದೇ ಜನತೆಯ ಆಶೀರ್ವಾದದಿಂದ ನಾವು ಇಂದು ಈ ಮಟ್ಟಕ್ಕೆ ಬೆಳೆದಿದ್ದೇವೆ. ನನ್ನ ಹಾಗೂ ನಮ್ಮ ತಂದೆಯವರ ಮೇಲೆ ಈ ಭಾಗದ ಜನರ ತೀರಿಸಲಾಗದಷ್ಟು ಋಣವಿದೆ. ಜನ ನಮಗೆ ಅಧಿಕಾರ ನೀಡಿರುವುದು ಅವರ ಸೇವೆ ಮಾಡಲು ಎಂಬುವುದನ್ನು ಅರಿತು ಅವರ ಕಷ್ಟಕ್ಕೆ ಹೆಗಲು ನೀಡುತ್ತಿದ್ದೇವೆ ಅಷ್ಟೇ.

” ಒಬ್ಬ ಮಹಾನ್ ವ್ಯಕ್ತಿಯು ಖ್ಯಾತ ವ್ಯಕ್ತಿಯಿಂದ ಭಿನ್ನವಾಗಿರುತ್ತಾನೆ, ಏಕೆಂದರೆ ಅವರು ಸಮಾಜದ ಸೇವಕರಾಗಲು ಸಿದ್ಧರಾಗಿದ್ದಾರೆ ” ಎಂಬ ಅಂಬೇಡ್ಕರ್ ಅವರ ನುಡಿಯನ್ನು ನಂಬಿ ನಾನು ಅವರ ಹಾದಿಯಲ್ಲಿ ನಡೆಯುತ್ತಿದ್ದೇನೆ.

ಈ ಭಾಗದ ಜನರು ನನ್ನನ್ನು ನಂಬಿ ಅವರ ಸೇವೆಗಾಗಿ ನನ್ನನ್ನು ಆಯ್ಕೆಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ. ಈ ಭಾಗದ ಪ್ರತಿ ಪ್ರಜೆಯ ಕಷ್ಟ – ಸುಖಗಳಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯವೆಂದು ನಂಬಿದ್ದೇನೆ. ಮುಂದೆಯೂ ಅವರ ನಂಬಿಕೆ ಉಳಿಸಿಕೊಳ್ಳುವತ್ತ ನನ್ನ ಪ್ರಯತ್ನ ಮುಂದುವರೆಸುತ್ತೇನೆ. ನಿಮ್ಮ ಪ್ರಶಂಸೆಯ ನುಡಿಗಳು ಸದಾ ಸ್ಪೂರ್ತಿದಾಯಕವಾಗಿ ಜನಪರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ನನಗೆ ಮತ್ತಷ್ಟು ಇಂಬು ನೀಡಿದಂತಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

1 hour ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago