ಸುರಪುರ: ತಾಲೂಕಿನ ಮಾಚಗುಂಡಾಳ ಗ್ರಾಮದ ಹೊರ ವಲಯದ ಚಿಗರಿಹಾಳ ಕ್ರಾಸ್ ಬಳಿಯಲ್ಲಿನ ಮನೆಯೊಂದರಲ್ಲಿ ವಿದ್ಯೂತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಬಿದ್ದು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿಗಳ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
ಮಾನಪ್ಪ ಹೆಬ್ಬಾಳ ಎಂಬುವವರಿಗೆ ಸೇರಿದ ತಗಡಿನ ಗುಡಿಸಲಲ್ಲಿ ವಿದ್ಯೂತ್ ಶಾರ್ಟ್ ಸಕ್ರ್ಯೂಟ್ ಉಂಟಾಗಿದೆ.ಮದ್ಹ್ಯಾನ ಮನೆಯಲ್ಲಿನ ಎಲ್ಲರು ಹೊಲದಲ್ಲಿ ಕೆಲಸ ಮಾಡಲು ಹೋದಾಗ ಅವಘಡ ಸಂಭವಿಸಿದ್ದು ಬೆಂಕಿ ಉಂಟಾಗಿದ್ದರಿಂದ ಮನೆಯಲ್ಲಿದ್ದ ಅಕ್ಕಿ ಜೋಳ ಸಜ್ಜೆ ಸೇರಿದಂತೆ ಎಲ್ಲಾ ದವಸ ದಾನ್ಯಗಳು ಮತ್ತು 20 ಗ್ರಾಂ ಬಂಗಾರ,50 ಸಾವಿರ ರೂಪಾಯಿ ನಗದು ಹಣ ಹಾಗು ಮನೆಯಲ್ಲಿದ್ದ ಜಮೀನಿನ ಎಲ್ಲಾ ದಾಖಲೆ ಪತ್ರಗಳು ಮತ್ತು ಮನೆಯ ಎಲ್ಲರ ಆಧಾರ ಕಾರ್ಡ್ ಮತ್ತಿತರೆ ದಾಖಲೆಗಳು ಸುಟ್ಟು ಹೋಗಿವೆ.
ಇಷ್ಟೇ ಅಲ್ಲದೆ ಮನೆಯಲ್ಲಿನ ಎಲ್ಲಾ ಬಟ್ಟೆ ಬರೆಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ ಜೊತೆಗೆ ಎಲ್ಲಾ ಸಾಮಾನು ಸರಂಜಾಮುಗಳು ಸುಟ್ಟಿದ್ದರಿಂದ ಮನೆಯವರು ಅಕ್ಷರಶಃ ಬೀದಿಗೆ ಬಿದ್ದಂತಾಗಿದೆ.ಬೆಂಕಿ ಬಿದ್ದು ಮನೆಯಲ್ಲಿ ದಟ್ಟ ಹೊಗೆ ತುಂಬಿದ್ದರಿಂದ ಅಕ್ಕ ಪಕ್ಕದ ಮನೆಯವರು ನೀರು ಸುರಿದು ಬೆಂಕಿ ನಂಸಿದ್ದಾರೆ,ಆದರೆ ಆಗಲೆ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿವೆ.ಈಗ ಉಳಿದುಕೊಳ್ಳಲು ಮನೆಯಿಲ್ಲದೆ ವಯಸ್ಸಾದ ವೃಧ್ಧ ದಂಪತಿಗಳು ಚಿಂತೆಗೀಡಾಗಿದ್ದಾರೆ.
ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು ಹಾಗು ಗ್ರಾಮ ಲೆಕ್ಕಿಗ ಪ್ರದೀಪ ನಾಲ್ವಡೆ ಭೇಟಿ ನೀಡಿ ಪರಿಶೀಲಿಸಿ ಸುಮಾರು ಮೂರುವರೆ ಲಕ್ಷಕ್ಕಿಂತ ಅಧಿಕ ಮೊತ್ತದ ನಷ್ಟವುಂಟಾಗಿದೆ ಎಂದು ತಿಳಿಸಿದ್ದಾರೆ.ಬಡ ಕುಟುಂಬಕ್ಕೆ ಈಗ ಅನಾಥವಾದಂತಾಗಿದೆ.ಜನಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಈ ಕುಟುಂಬಕ್ಕೆ ಸೂರು ಕಲ್ಪಿಸಬೇಕೆಂದು ಮುಖಂಡ ರಾಘವೆಂದ್ರ ಮಾಚಗುಂಡಾಳ ಆಗ್ರಹಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…