ಬಿಸಿ ಬಿಸಿ ಸುದ್ದಿ

ಆರಂಭಗೊಂಡ ಸರಕಾರಿ ಸಾರಿಗೆ ಸೇವೆ: ಮತ್ತೆ ಬೆಂಗಳೂರಿಗೆ ಗುಳೆ ಹೊರಟ ಜನತೆ

ಸುರಪುರ: ಜಗತ್ತಿನೆಲ್ಲೆಡೆ ಕೋವಿಡ್-19 ಕೊರೊನಾ ವೈರಸ್ ತನ್ನ ರಣಕೇಕೆ ಮುಂದುವರೆಸಿದ್ದು ಭಾರತದಲ್ಲಿಯೂ ಅದರಲ್ಲಿ ಮುಖ್ಯವಾಗಿ ಕರ್ನಾಟಕದಲ್ಲಿ ನಿತ್ಯವು ಕೊರೊನಾ ಸೊಂಕಿತರ ಮತ್ತು ಸಾವಿನ ಸಂಖ್ಯೆ ಏರುತ್ತಲಿದೆ.ಇದಕ್ಕಾಗಿಯೆ ಕಳೆದ ಒಂದುವರೆ ತಿಂಗಳಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿ ಎಲ್ಲಾ ವ್ಯಾಪಾರ ವಾಣಿಜ್ಯೋದ್ಯಮ ಮತ್ತು ಸಾರಿಗೆ ಸೇವೆಯನ್ನು ರದ್ದುಗೊಳಿಸಲಾಗಿತ್ತು.

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿನ ಮತ್ತು ಹೊರ ರಾಜ್ಯದಲ್ಲಿನ ಜನರನ್ನು ಅವರವರ ಸ್ವಸ್ಥಳಗಳಿಗೆ ಕರೆತಂದು ಅವರನ್ನು ಕೊರೊನಾ ದಿಂದ ರಕ್ಷಿಸುವ ಕೆಲಸ ಮಾಡಲಾಗಿತ್ತು.ಇದುವರೆಗೆ ಸ್ತಬ್ಧವಾಗಿದ್ದ ಸಾರಿಗೆ ಬಸ್ ಸೇವೆಯನ್ನು ಮತ್ತೆ ಸರಕಾರ ಆರಂಭಿಸಿದೆ.ಆದರೆ ಜನರು ಮಾತ್ರ ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬರದಂತೆ ಲಾಕ್‍ಡೌನ್ ಮುಂದುವರೆದಿದೆ.ಗ್ರಾಮೀಣ ಭಾಗದ ಜನರಿಗಾಗಿ ಉದ್ಯೋಗ ಖಾತ್ರಿ ಆರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ.

ಕೊರೊನಾ ಎಲ್ಲೆಡೆ ಹರಡುತ್ತಿರುವಾಗ ಜನರು ಮತ್ತೆ ಬೆಂಗಳೂರಿಗೆ ಹೊರಟಿರುವುದು ದುರಾದೃಷ್ಟದ ಸಂಗತಿ,ತಾಲೂಕು ಆಡಳಿತ ಗುಳೆ ಹೋಗುವುದನ್ನು ತಡೆದು ಉದ್ಯೋಗ ಖಾತ್ರಿಯಡಿ ಕೆಲಸ ನೀಡಬೇಕೆಂದು ಆಗ್ರಹಿಸುತ್ತೇವೆ: ಮಾಳಪ್ಪ ಕಿರದಳ್ಳಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ

ಆದರೆ ಇಂದಿನಿಂದ ಬೆಂಗಳೂರಿಗೆ ಬಸ್ ಓಡಾಟ ಆರಂಭಗೊಳ್ಳುತ್ತಿದ್ದಂತೆ ತಾಲೂಕಿನ ಜನರು ಮತ್ತೆ ಕೆಲಸ ಅರಸಿ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ.ನಗರದ ಬಸ್ ನಿಲ್ದಾಣದಲ್ಲಿ ನೂರಾರು ಸಂಖ್ಯೆಯ ವಲಸಿಗರು ತಮ್ಮ ಗಂಟು ಮೂಟೆಗಳೊಂದಿಗೆ ಬೆಳಗಿನ ಏಳು ಗಂಟೆಗೆ ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿದ್ದರು.ಬೆಂಗಳೂರು ಬಸ್ ಬರುತ್ತಿದ್ದಂತೆ ನಾಮುಂದು ತಾಮುಂದು ಎಂದು ಹತ್ತಲು ಅಣಿಯಾಗಿದ್ದರು.ಬೆಂಗಳೂರಿಗೆ ಹೊರಟ ಪ್ರತೊಯೊಬ್ಬರ ಫೀವರ್ ಚೆಕ್ ಮಾಡಿ,ಮಾಸ್ಕ್ ಧರಿಸುವಂತೆ ತಿಳಿಸಿಯೆ ಬಸ್ ಹತ್ತಲು ಅವಕಾಶ ನೀಡಿದರು. ಪ್ರತಿ ಬಸ್‍ನಲ್ಲಿ ಕೇವಲ ಮೂವತ್ತು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಇನ್ನೂ ಬೆಂಗಳೂರಿನಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸ ಮುಂದುವರೆಸಿದೆ,ಲಾಕ್‍ಡೌನ್‍ಕೂಡ ಮುಂದುವರೆದಿದೆ, ಇಂತಹ ಸಂದರ್ಭದಲ್ಲಿ ಜನರು ಬೆಂಗಳೂರಿಗೆ ಗುಳೆ ಹೊರಟಿರುವುದು ಎಷ್ಟು ಸರಿ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago