ಸುರಪುರ: ಜಗತ್ತಿನೆಲ್ಲೆಡೆ ಕೋವಿಡ್-19 ಕೊರೊನಾ ವೈರಸ್ ತನ್ನ ರಣಕೇಕೆ ಮುಂದುವರೆಸಿದ್ದು ಭಾರತದಲ್ಲಿಯೂ ಅದರಲ್ಲಿ ಮುಖ್ಯವಾಗಿ ಕರ್ನಾಟಕದಲ್ಲಿ ನಿತ್ಯವು ಕೊರೊನಾ ಸೊಂಕಿತರ ಮತ್ತು ಸಾವಿನ ಸಂಖ್ಯೆ ಏರುತ್ತಲಿದೆ.ಇದಕ್ಕಾಗಿಯೆ ಕಳೆದ ಒಂದುವರೆ ತಿಂಗಳಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿ ಎಲ್ಲಾ ವ್ಯಾಪಾರ ವಾಣಿಜ್ಯೋದ್ಯಮ ಮತ್ತು ಸಾರಿಗೆ ಸೇವೆಯನ್ನು ರದ್ದುಗೊಳಿಸಲಾಗಿತ್ತು.
ರಾಜ್ಯದ ಬೇರೆ ಬೇರೆ ಭಾಗಗಳಲ್ಲಿನ ಮತ್ತು ಹೊರ ರಾಜ್ಯದಲ್ಲಿನ ಜನರನ್ನು ಅವರವರ ಸ್ವಸ್ಥಳಗಳಿಗೆ ಕರೆತಂದು ಅವರನ್ನು ಕೊರೊನಾ ದಿಂದ ರಕ್ಷಿಸುವ ಕೆಲಸ ಮಾಡಲಾಗಿತ್ತು.ಇದುವರೆಗೆ ಸ್ತಬ್ಧವಾಗಿದ್ದ ಸಾರಿಗೆ ಬಸ್ ಸೇವೆಯನ್ನು ಮತ್ತೆ ಸರಕಾರ ಆರಂಭಿಸಿದೆ.ಆದರೆ ಜನರು ಮಾತ್ರ ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬರದಂತೆ ಲಾಕ್‍ಡೌನ್ ಮುಂದುವರೆದಿದೆ.ಗ್ರಾಮೀಣ ಭಾಗದ ಜನರಿಗಾಗಿ ಉದ್ಯೋಗ ಖಾತ್ರಿ ಆರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ.
ಕೊರೊನಾ ಎಲ್ಲೆಡೆ ಹರಡುತ್ತಿರುವಾಗ ಜನರು ಮತ್ತೆ ಬೆಂಗಳೂರಿಗೆ ಹೊರಟಿರುವುದು ದುರಾದೃಷ್ಟದ ಸಂಗತಿ,ತಾಲೂಕು ಆಡಳಿತ ಗುಳೆ ಹೋಗುವುದನ್ನು ತಡೆದು ಉದ್ಯೋಗ ಖಾತ್ರಿಯಡಿ ಕೆಲಸ ನೀಡಬೇಕೆಂದು ಆಗ್ರಹಿಸುತ್ತೇವೆ: ಮಾಳಪ್ಪ ಕಿರದಳ್ಳಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ
ಆದರೆ ಇಂದಿನಿಂದ ಬೆಂಗಳೂರಿಗೆ ಬಸ್ ಓಡಾಟ ಆರಂಭಗೊಳ್ಳುತ್ತಿದ್ದಂತೆ ತಾಲೂಕಿನ ಜನರು ಮತ್ತೆ ಕೆಲಸ ಅರಸಿ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ.ನಗರದ ಬಸ್ ನಿಲ್ದಾಣದಲ್ಲಿ ನೂರಾರು ಸಂಖ್ಯೆಯ ವಲಸಿಗರು ತಮ್ಮ ಗಂಟು ಮೂಟೆಗಳೊಂದಿಗೆ ಬೆಳಗಿನ ಏಳು ಗಂಟೆಗೆ ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿದ್ದರು.ಬೆಂಗಳೂರು ಬಸ್ ಬರುತ್ತಿದ್ದಂತೆ ನಾಮುಂದು ತಾಮುಂದು ಎಂದು ಹತ್ತಲು ಅಣಿಯಾಗಿದ್ದರು.ಬೆಂಗಳೂರಿಗೆ ಹೊರಟ ಪ್ರತೊಯೊಬ್ಬರ ಫೀವರ್ ಚೆಕ್ ಮಾಡಿ,ಮಾಸ್ಕ್ ಧರಿಸುವಂತೆ ತಿಳಿಸಿಯೆ ಬಸ್ ಹತ್ತಲು ಅವಕಾಶ ನೀಡಿದರು. ಪ್ರತಿ ಬಸ್‍ನಲ್ಲಿ ಕೇವಲ ಮೂವತ್ತು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಇನ್ನೂ ಬೆಂಗಳೂರಿನಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸ ಮುಂದುವರೆಸಿದೆ,ಲಾಕ್‍ಡೌನ್‍ಕೂಡ ಮುಂದುವರೆದಿದೆ, ಇಂತಹ ಸಂದರ್ಭದಲ್ಲಿ ಜನರು ಬೆಂಗಳೂರಿಗೆ ಗುಳೆ ಹೊರಟಿರುವುದು ಎಷ್ಟು ಸರಿ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.