ಸುರಪುರ: ಕೊರೊನಾ ವೈರಸ್ ನಿರ್ಮೂಲನೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದ ೩೬ ಗಂಟೆಗಳ ಜನತಾ ಕರ್ಫ್ಯೂಗೆ ಸುರಪುರ ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಶನಿವಾರ ಸಂಜೆ ೭ ಗಂಟೆಯಿಂದ ಸೋಮವಾರ ಬೆಳಿಗ್ಗೆ ೭ ಗಂಟೆಯವರೆಗೆ ೩೬ ಗಂಟೆಗಳ ಲಾಕ್‌ಡೌನ್ ಅಂಗವಾಗಿ ಜನತಾ ಕರ್ಫ್ಯೂ ಘೋಷಿಸಲಾಗಿತ್ತು.ನಗರಸಭೆಯ ವತಿಯಿಂದ ಶನಿವಾರ ನಗರದಲ್ಲಿ ಪ್ರಚಾರ ನಡೆಸಿ ಜನತಾ ಕರ್ಫ್ಯೂಗೆ ಬೆಂಬಲಿಸಲು ಮನವಿ ಮಾಡಲಾಗಿತ್ತು.ಅದರಂತೆ ಇಡೀ ನಗರದ ಜನರು ಲಾಕ್‌ಡೌನ್‌ಗೆ ಬೆಂಬಲಿಸಿ ಇಡೀ ದಿನ ಮನೆಯಿಂದ ಹೊರ ಬರದೆ ಬೆಂಬಲಿಸಿದರು.
ಭಾನುವಾರ ಬೆಳಿಗ್ಗೆ ಕೆಲ ಸಮಯ ಅಗತ್ಯ ವಸ್ತುಗಳ ಖರೀದಿಗಾಗಿ ಹಿರಗೆ ಬಂದರು ನಂತರ ೯ ಗಂಟೆಯ ವೇಳೆಗೆ ಎಲ್ಲರು ಮನೆಯಲ್ಲಿದ್ದು,ಇಡೀ ನಗರವೇ ಸ್ಮಶಾನ ಮೌನ ಆವರಿಸಿತ್ತು.ನಗರದ ಪ್ರಮುಖ ಜನ ಸಂದಣಿಯ ಸ್ಥಳಗಳಾದ ಮಹಾತ್ಮಾ ಗಾಂಧರ ವೃತ್ತ,ದರಬಾರ ರಸ್ತೆ,ಬಸ್ ನಿಲ್ದಾಣ,ಸರದಾರ್ ವಲ್ಲಭಬಾಯಿ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಯಾರೊಬ್ಬರು ಇಲ್ಲದೆ ಬಿಕೋ ಎನ್ನುತ್ತಿದ್ದವು.
ನಗರದಲ್ಲಿನ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲಸಿದರು ಅಲ್ಲದೆ ಹಾಲು ತರಕಾರಿ ಹೊರತು ಪಡಿಸಿ ಪೆಟ್ರೋಲ್ ಬಂಕ್‌ಗಳು ಕೂಡ ಮುಚ್ಚಲಾಗಿತ್ತು. ನಗರದೆಲ್ಲೆಡೆ ಪೊಲೀಸ್ ಕಾವಲು ಹಾಕಲಾಗಿತ್ತು.ಕೆಲವೊಬ್ಬರು ಮನೆಯಿಂದ ಹೊರ ಬಂದವರಿಗೆ ಲಾಕ್‌ಡೌನ್ ಇರುವುದನ್ನು ತಿಳಿಸಿ ಕಳುಹಿಸಲಾಯಿತು.ಸೋಮವಾರ ಮುಸ್ಲಿಮ್ ಸಮುದಾಯದವರ ರಂಜಾನ್ ಹಬ್ಬವಿದ್ದರು,ರವಿವಾರ ಬೆಳಿಗ್ಗೆಯೆ ತರಕಾರಿ ಮತ್ತಿತರೆ ಅಗತ್ಯ ವಸ್ತುಗಳನ್ನು ಖರೀದಿಸಿ ಎಲ್ಲರು ಜನತಾ ಕರ್ಫ್ಯೂಗೆ ಬೆಂಬಲಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…