೩೬ ಗಂಟೆಗಳ ಜನತಾ ಕರ್ಫ್ಯೂಗೆ ಸುರಪುರ ಜನರ ಅಭೂತಪೂರ್ವ ಬೆಂಬಲ

0
44

ಸುರಪುರ: ಕೊರೊನಾ ವೈರಸ್ ನಿರ್ಮೂಲನೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದ ೩೬ ಗಂಟೆಗಳ ಜನತಾ ಕರ್ಫ್ಯೂಗೆ ಸುರಪುರ ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

ಶನಿವಾರ ಸಂಜೆ ೭ ಗಂಟೆಯಿಂದ ಸೋಮವಾರ ಬೆಳಿಗ್ಗೆ ೭ ಗಂಟೆಯವರೆಗೆ ೩೬ ಗಂಟೆಗಳ ಲಾಕ್‌ಡೌನ್ ಅಂಗವಾಗಿ ಜನತಾ ಕರ್ಫ್ಯೂ ಘೋಷಿಸಲಾಗಿತ್ತು.ನಗರಸಭೆಯ ವತಿಯಿಂದ ಶನಿವಾರ ನಗರದಲ್ಲಿ ಪ್ರಚಾರ ನಡೆಸಿ ಜನತಾ ಕರ್ಫ್ಯೂಗೆ ಬೆಂಬಲಿಸಲು ಮನವಿ ಮಾಡಲಾಗಿತ್ತು.ಅದರಂತೆ ಇಡೀ ನಗರದ ಜನರು ಲಾಕ್‌ಡೌನ್‌ಗೆ ಬೆಂಬಲಿಸಿ ಇಡೀ ದಿನ ಮನೆಯಿಂದ ಹೊರ ಬರದೆ ಬೆಂಬಲಿಸಿದರು.

Contact Your\'s Advertisement; 9902492681

ಭಾನುವಾರ ಬೆಳಿಗ್ಗೆ ಕೆಲ ಸಮಯ ಅಗತ್ಯ ವಸ್ತುಗಳ ಖರೀದಿಗಾಗಿ ಹಿರಗೆ ಬಂದರು ನಂತರ ೯ ಗಂಟೆಯ ವೇಳೆಗೆ ಎಲ್ಲರು ಮನೆಯಲ್ಲಿದ್ದು,ಇಡೀ ನಗರವೇ ಸ್ಮಶಾನ ಮೌನ ಆವರಿಸಿತ್ತು.ನಗರದ ಪ್ರಮುಖ ಜನ ಸಂದಣಿಯ ಸ್ಥಳಗಳಾದ ಮಹಾತ್ಮಾ ಗಾಂಧರ ವೃತ್ತ,ದರಬಾರ ರಸ್ತೆ,ಬಸ್ ನಿಲ್ದಾಣ,ಸರದಾರ್ ವಲ್ಲಭಬಾಯಿ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಯಾರೊಬ್ಬರು ಇಲ್ಲದೆ ಬಿಕೋ ಎನ್ನುತ್ತಿದ್ದವು.

ನಗರದಲ್ಲಿನ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲಸಿದರು ಅಲ್ಲದೆ ಹಾಲು ತರಕಾರಿ ಹೊರತು ಪಡಿಸಿ ಪೆಟ್ರೋಲ್ ಬಂಕ್‌ಗಳು ಕೂಡ ಮುಚ್ಚಲಾಗಿತ್ತು. ನಗರದೆಲ್ಲೆಡೆ ಪೊಲೀಸ್ ಕಾವಲು ಹಾಕಲಾಗಿತ್ತು.ಕೆಲವೊಬ್ಬರು ಮನೆಯಿಂದ ಹೊರ ಬಂದವರಿಗೆ ಲಾಕ್‌ಡೌನ್ ಇರುವುದನ್ನು ತಿಳಿಸಿ ಕಳುಹಿಸಲಾಯಿತು.ಸೋಮವಾರ ಮುಸ್ಲಿಮ್ ಸಮುದಾಯದವರ ರಂಜಾನ್ ಹಬ್ಬವಿದ್ದರು,ರವಿವಾರ ಬೆಳಿಗ್ಗೆಯೆ ತರಕಾರಿ ಮತ್ತಿತರೆ ಅಗತ್ಯ ವಸ್ತುಗಳನ್ನು ಖರೀದಿಸಿ ಎಲ್ಲರು ಜನತಾ ಕರ್ಫ್ಯೂಗೆ ಬೆಂಬಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here