ಕಲಬುರಗಿ: ಮಹಾರಾಷ್ಟ್ರ ರಾಜ್ಯ ಪ್ರವಾಸದಿಂದ ಮರಳಿ ಜಿಲ್ಲೆಯ ಸರ್ಕಾರಿ ಕ್ವಾರಂಟೈನ್ ನಲ್ಲಿರುವ ಒಟ್ಟು 16 ಜನರಿಗೆ ಸೋಮವಾರ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಅನಿಕೇರಿ ಬಳಿಯ ರಾಮಾನಾಯಕ್ ತಾಂಡಾ ಮೂಲದ 42 ವರ್ಷದ ಪುರುಷ (P-2139), 18 ವರ್ಷದ ಯುವಕ (P-2140) ಹಾಗೂ 35 ವರ್ಷದ ಮಹಿಳೆಗೆ (P-2151) ಕೊರೋನಾ ಸೋಂಕು ದೃಢವಾಗಿದೆ.
ಕಮಲಾಪೂರ ತಾಲೂಕಿನ ಡೊಂಗರಗಾಂವ ಬಳಿಯ ಭೀಮನಾಳ ತಾಂಡಾದ 29 ವರ್ಷದ ಯುವಕನಿಗೂ (P-2152) ಕೋವಿಡ್-19 ಅಂಟುಕೊಂಡಿದೆ.
ಕಾಳಗಿ ತಾಲೂಕಿನ ಕೋರವಾರ ತಾಂಡಾದ 30 ವರ್ಷದ ಯುವಕ (P-2141), ಸುಗೂರ ಕೆ. ತಾಂಡಾದ 26 ವರ್ಷದ ಯುವಕ (P-2148), ಅರಣಕಲ್ ತಾಂಡಾದ 29 ವರ್ಷದ ಯುವತಿ (P-2149) ಹಾಗೂ ಅರಣಕಲ್ ಹತ್ತಿರದ ಸೊಂಗಸು ತಾಂಡಾದ 68 ವರ್ಷದ ವೃದ್ಧನಿಗೂ (P-2150) ಕೊರೋನಾ ಸೋಂಕು ಕಂಡುಬಂದಿದೆ.
ಇದಲ್ಲದೆ ಕಾಳಗಿ ತಾಲೂಕಿನ ಅರಣಕಲ್ ಹತ್ತಿರದ ಬುಗಡಿ ತಾಂಡಾದ 10 ವರ್ಷದ ಬಾಲಕ (P-2142), 55 ವರ್ಷದ ಮಹಿಳೆ (P-2143), 45 ವರ್ಷದ ಪುರುಷ (P-2144), 18 ವರ್ಷದ ಯುವಕ (P-2145), 40 ವರ್ಷದ ಪುರುಷ (P-2146), 15 ವರ್ಷದ ಬಾಲಕಿ (P-2147), 36 ವರ್ಷದ ಯುವಕ (P-2178) ಹಾಗೂ 21 ವರ್ಷದ ಯುವತಿಗೂ (P-2179) ಕೊರೋನಾ ಸೋಂಕು ದೃಢವಾಗಿದೆ.
ಇದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 157ಕ್ಕೆ ಹೆಚ್ಚಳವಾಗಿದೆ. ಇದರಲ್ಲಿ 72 ಜನ ಗುಣಮುಖರಾಗಿದ್ದರೆ, 7 ಜನರು ನಿಧನಹೊಂದಿದ್ದಾರೆ. ಉಳಿದಂತೆ 78 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ.ಶರತ್ ಬಿ. ಮಾಹಿತಿ ನೀಡಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…