ಕಲಬುರಗಿ ಜಿಲ್ಲೆಯಲ್ಲಿ ಸೋಮವಾರ ಒಟ್ಟು 16 ಕೊರೋನಾ ಸೋಂಕು ಪತ್ತೆ

0
69

ಕಲಬುರಗಿ: ಮಹಾರಾಷ್ಟ್ರ ರಾಜ್ಯ ಪ್ರವಾಸದಿಂದ‌ ಮರಳಿ ಜಿಲ್ಲೆಯ ಸರ್ಕಾರಿ ಕ್ವಾರಂಟೈನ್ ನಲ್ಲಿರುವ ಒಟ್ಟು 16 ಜನರಿಗೆ ಸೋಮವಾರ ಕೊರೋನಾ ಸೋಂಕು‌ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.

ಚಿತ್ತಾಪುರ ತಾಲೂಕಿನ ಅನಿಕೇರಿ ಬಳಿಯ ರಾಮಾನಾಯಕ್ ತಾಂಡಾ ಮೂಲದ 42 ವರ್ಷದ ಪುರುಷ (P-2139), 18 ವರ್ಷದ ಯುವಕ (P-2140) ಹಾಗೂ 35 ವರ್ಷದ ಮಹಿಳೆಗೆ (P-2151) ಕೊರೋನಾ ಸೋಂಕು ದೃಢವಾಗಿದೆ.

Contact Your\'s Advertisement; 9902492681

ಕಮಲಾಪೂರ ತಾಲೂಕಿನ ಡೊಂಗರಗಾಂವ ಬಳಿಯ ಭೀಮನಾಳ ತಾಂಡಾದ 29 ವರ್ಷದ ಯುವಕನಿಗೂ (P-2152) ಕೋವಿಡ್-19 ಅಂಟುಕೊಂಡಿದೆ.

ಕಾಳಗಿ ತಾಲೂಕಿನ ಕೋರವಾರ ತಾಂಡಾದ 30 ವರ್ಷದ ಯುವಕ (P-2141), ಸುಗೂರ ಕೆ. ತಾಂಡಾದ 26 ವರ್ಷದ ಯುವಕ (P-2148), ಅರಣಕಲ್ ತಾಂಡಾದ 29 ವರ್ಷದ ಯುವತಿ (P-2149) ಹಾಗೂ ಅರಣಕಲ್ ಹತ್ತಿರದ ಸೊಂಗಸು ತಾಂಡಾದ 68 ವರ್ಷದ ವೃದ್ಧನಿಗೂ (P-2150) ಕೊರೋನಾ ಸೋಂಕು ಕಂಡುಬಂದಿದೆ.

ಇದಲ್ಲದೆ ಕಾಳಗಿ ತಾಲೂಕಿನ ಅರಣಕಲ್ ಹತ್ತಿರದ ಬುಗಡಿ ತಾಂಡಾದ 10 ವರ್ಷದ ಬಾಲಕ (P-2142), 55 ವರ್ಷದ ಮಹಿಳೆ (P-2143), 45 ವರ್ಷದ ಪುರುಷ (P-2144), 18 ವರ್ಷದ ಯುವಕ (P-2145), 40 ವರ್ಷದ ಪುರುಷ (P-2146), 15 ವರ್ಷದ ಬಾಲಕಿ (P-2147), 36 ವರ್ಷದ ಯುವಕ (P-2178) ಹಾಗೂ 21 ವರ್ಷದ ಯುವತಿಗೂ (P-2179) ಕೊರೋನಾ ಸೋಂಕು ದೃಢವಾಗಿದೆ.

ಇದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 157ಕ್ಕೆ ಹೆಚ್ಚಳವಾಗಿದೆ. ಇದರಲ್ಲಿ 72 ಜನ ಗುಣಮುಖರಾಗಿದ್ದರೆ, 7 ಜನರು ನಿಧನಹೊಂದಿದ್ದಾರೆ. ಉಳಿದಂತೆ 78 ಜನರಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಡಿ‌.ಸಿ.ಶರತ್ ಬಿ. ಮಾಹಿತಿ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here