ಬಿಸಿ ಬಿಸಿ ಸುದ್ದಿ

ಖರ್ಗೆಗೆ ರಾಜ್ಯಸಭಾ ಸದಸ್ಯರನ್ನಾಗಿ ನೇಮಕಕ್ಕೆ ಪಟೇಲ್ ಆಗ್ರಹ

ಕಲಬುರಗಿ: ಜಾತ್ಯತೀತ ಮೌಲ್ಯಗಳ ಸಂಕೇತ, ಪ್ರಜಾಪ್ರಭುತ್ವ ಧರ್ಮವಾಗಿ, ಸಂವಿಧಾನ ಮತ್ತು ಬುದ್ಧ, ಬಸವ, ಅಂಬೇಡ್ಕರ್ ಅವರ ಮಾನವ ಧರ್ಮ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಮಾಜಿ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ಸಭೆಗೆ ನೇಮಕ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಮೋದಿನ್ ಪಟೇಲ್ ಅಣಬಿ ಆಗ್ರಹಿಸಿದ್ದಾರೆ.

ಅವರು AICC ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರಬರೆದು ಡಾ. ಖರ್ಗೆ ಸಾರ್ವಜನಿಕ ಬದುಕನ್ನು ಆರಂಭಿಸಿ, ಶಾಸಕ, ವಿರೋಧ ಪಕ್ಷದ ನಾಯಕ, ಸಂಸದ, ಕೇಂದ್ರ ಸಚಿವ ಚುನಾಯಿತರಾಗಿ ಅರ್ಧ ಶತಮಾನದಷ್ಟು ದೀರ್ಘವಾದ ಯಶಸ್ಸಿನ ಹಾದಿ ಅವರು ಕ್ರಮಿಸಿ ಬಂದಿರುವ ದಾರಿ ಅವರ ವ್ಯಕ್ತಿತ್ವಕ್ಕೆ ಮತ್ತು ರಾಜಕೀಯ ಮುತ್ಸದಿ ತನಕ್ಕೆ ಸಾಕ್ಷಿ ನುಡಿಯುತ್ತದೆ, 70ರ ದಶಕದಲ್ಲಿ ನಾಡಿನ ರಾಜಕಾರಣಕ್ಕೆ ಕಾಲಿಟ್ಟ ಮಲ್ಲಿಕಾರ್ಜುನ ಖರ್ಗೆ ಪಕ್ಷ ನಿಷ್ಠೆ ಸಾಕಾರ ಮೂರ್ತಿಗಳು 80ರ ದಶಕದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಅನೇಕ ಮುನ್ನಡೆ ಹಿನ್ನಡೆಯನ್ನು ಕಂಡಿದೆ. ಆದರೆ ಖರ್ಗೆ ಅವರು ಸತತ ಮುನ್ನಡೆಯ ಮಾರ್ಗದಲ್ಲಿ ಚಲಿಸುತ್ತ ಬರುತ್ತಿದ್ದಾರೆ.

ಹಿಂದೆ NDA ಸರ್ಕಾರದ ಉಪಪ್ರಧಾನಿಯಾಗಿದ್ದ ಎಲ್ ಕೆ ಅಡ್ವಾಣಿ ಅವರು ಕಲಬುರಗಿ ಬಂದಿದ್ದಾಗ ಇಲ್ಲಿಯ ಹೋರಾಟಗಾರರು ಸಂವಿಧಾನದ 371ನೇ ಆರ್ಟಿಕಲ್ ತಿದ್ದುಪಡಿ ತರಬೇಕೆಂದು ಮನವಿ ಸಲ್ಲಿಸಿದಾಗ “ಏ ಕೊಯಿ ಹೊನೆ ವಾಲಿ ಬಾತ್ ನಹಿ ಹೈ “ಎಂದು ತಿರಸ್ಕಾರ ಭರಿತ ಅಸಡ್ಡೆಯಿಂದ ಪ್ರತಿಕ್ರಿಯಿಸಿದರು. ಆಗ ಸಾಧ್ಯವೇ ಇಲ್ಲ ಎಂದು ಅಡ್ವಾಣಿಯವರು ತಿರಸ್ಕರಿಸಿದ್ದನ್ನು ಸಾಧಿಸಿ ತೋರಿಸಿದ ಕೀರ್ತಿ ಡಾ. ಖರ್ಗೆಗೆ ಸಲ್ಲುತ್ತದೆ ಎಂದು ತಿಳಿಸಿದರು.

ರಾಜಕೀಯ ಅಧಿಕಾರದ ಕ್ಷೇತ್ರದಲ್ಲಿ ನಡೆದು ಬರುತ್ತಿರುವ ಖರ್ಗೆ ಜಾತಿಯತೆ ಸಂಕುಚಿತ ಮನೋಭಾವ ದ್ವೇಷದ ರಾಜಕಾರಣ ಗುಂಡಾಗಿರಿ ಮುಂತಾದವುಗಳು ತಮ್ಮ ಬಳಿಯಲ್ಲಿ ಸುಳಿಯಲು ಅವಕಾಶ ಕೊಡದ ಸಚ್ಚಾರಿತ್ರ್ಯದ ರಾಜಕಾರಣಕ್ಕೆ ಹೆಸರು ಮಾಡಿದ್ದಾರೆ .ಇಂಥ ಒಬ್ಬ ಮೇರು ನಾಯಕ ರನ್ನು ರನ್ನು ರಾಜ್ಯಸಭಾ ಸದಸ್ಯನಾಗಿ ಮಾಡಬೇಕೆಂದು ಮೋದಿನ ಪಟೇಲ ಅಣಬಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒತ್ತಾಯಿದ್ದಾರೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago