ಸುರಪುರ: ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಎಂಬ ನೂತನ ಯೋಜನೆ ಜಾರಿಯಾಗಿದ್ದು ಇದರಿಂದ ಯಾವುದೆ ಬ್ಯಾಂಕ್‍ಲ್ಲಿ ಖಾತೆ ಹೊಂದಿದ್ದ ಗ್ರಾಹಕರು ಪೋಸ್ಟ್ ಆಫೀಸಿನಲ್ಲಿಯೆ ಹಣ ಪಡೆಯಬಹುದಾಗಿದೆ.ಈ ಯೊಜನೆಯ ಸದುಪಯೋಗ ಪಡೆಯಲು ಆಯಾ ಅಂಚೆ ಪತ್ರಗಳ ವಿತರಕರ ಬಳಿ ತಮ್ಮ ಖಾತೆಯ ಹಣ ಪಡೆಯುವ ಅವಕಾಶವನ್ನು ಸರಕಾರ ಆರಂಭಿಸಿದ್ದು,ಇದರ ಮೊದಲ ದಿನದ ಕಾರ್ಯಾರಂಭದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಾಲೂಕಿನ ಆಲ್ದಾಳ ಅಂಚೆಕಚೇರಿಯ ಪತ್ರಗಳ ವಿತರಕ ಪ್ರಸನ್ನ ಪೀರಾಪುರ ದೇಶದಲ್ಲಿಯೆ ನಾಲ್ಕನೆ ಸ್ಥಾನದ ಸಾಧನೆ ಮಾಡಿದ್ದಾರೆ.
ಮಂಗಳವಾರ ಆರಂಭಗೊಂಡ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ಆರಂಭಗೊಂಡ ಮೊದಲ ದಿನವೆ 96 ಜನ ಗ್ರಾಹಕರ ಬಳಿಗೆ ಹೋಗಿ ಹಣ ನೀಡುವ ಮೂಲಕ ಉತ್ತಮ ಸಾಧನೆ ಮಾಡಿ ರಾಷ್ಟ್ರೀಯ ಅಂಚೆ ಇಲಾಖೆಯ ಪ್ರಶಂಸೆ ಪಡೆದಿದ್ದಾರೆ.ಯಾದಗಿರಿ ಜಿಲ್ಲೆಯಲ್ಲಿಯೆ ಮೊದಲ ದಿನವೇ 96 ಜನ ಗ್ರಾಹಕರಿಗೆ ಯೋಜನೆಯ ಅರಿವು ಮೂಡಿಸುವ ಜೊತೆಗೆ ಅವರ ಮನೆ ಬಾಗಿಲಿಗೆ ಹೋಗಿ ಗ್ರಾಹಕರ ಬ್ಯಾಂಕ್ ಖಾತೆಯ ಹಣವನ್ನು ಪೋಸ್ಟ್ ಬ್ಯಾಂಕ್ ಮೂಲಕ ನೀಡಿ ಸಾಧನೆ ಮಾಡಿದ್ದಾರೆ.
ಸಾಧನೆಯ ಕುರಿತು ಅಂಚೆ ವಿತರಕ ಪ್ರಸನ್ನ ಮಾತನಾಡಿ, ನಮಗೆ ಸರಕಾರ ಸಂಬಳ ನೀಡುವುದು ಉತ್ತಮ ಸೇವೆ ಮಾಡಲು,ಅದನ್ನು ಮನಗಂಡು ನಮ್ಮ ಸೇವೆಯಲ್ಲಿಯೆ ಸಂತೋಷ ಮತ್ತು ಹೆಮ್ಮೆ ಪಡುವ ಮೂಲಕ ನಿತ್ಯವು ನೂರಾರು ಜನರನ್ನು ಭೇಟಿ ಮಾಡಿ ಅವರ ಸೇವೆ ಮಾಡುವ ಉತ್ತಮ ಅವಕಾಶ ಲಭಿಸಿದೆ.ಇದರಿಂದ ಜನರ ಸೇವೆ ಮಾಡಿದ ತೃಪ್ತಿಯು ಇದೆ.
ಈಗ ನೂತನವಾಗಿ ಆರಂಭಗೊಂಡಿರುವ ಇಂಡಿಯನ್ ಪೋಸ್ಟ್ ಬ್ಯಾಂಕ್ ಯೊಜನೆ ಜನ ಸೇವೆಗೆ ಸಿಕ್ಕಿರುವ ಮತ್ತೊಂದು ಅವಕಾಶವಾಗಿದ್ದು,ಅದನ್ನ ಪ್ರಾಮಾಣಿಕವಾಗಿ ಮಾಡಿದ್ದರಿಂದ ಈ ಸಾಧನೆ ಮಾಡಲು ಅನುಕೂಲವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…