ದೇಶದಲ್ಲಿ ನಾಲ್ಕನೆ ಸ್ಥಾನದ ಸಾಧನೆ ಮಾಡಿದ ಆಲ್ದಾಳ ಪೋಸ್ಟ್ ಮಾಸ್ಟರ್

0
200
  • ರಾಜು ಕುಂಬಾರ ಸುರಪುರ

ಸುರಪುರ: ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಎಂಬ ನೂತನ ಯೋಜನೆ ಜಾರಿಯಾಗಿದ್ದು ಇದರಿಂದ ಯಾವುದೆ ಬ್ಯಾಂಕ್‍ಲ್ಲಿ ಖಾತೆ ಹೊಂದಿದ್ದ ಗ್ರಾಹಕರು ಪೋಸ್ಟ್ ಆಫೀಸಿನಲ್ಲಿಯೆ ಹಣ ಪಡೆಯಬಹುದಾಗಿದೆ.ಈ ಯೊಜನೆಯ ಸದುಪಯೋಗ ಪಡೆಯಲು ಆಯಾ ಅಂಚೆ ಪತ್ರಗಳ ವಿತರಕರ ಬಳಿ ತಮ್ಮ ಖಾತೆಯ ಹಣ ಪಡೆಯುವ ಅವಕಾಶವನ್ನು ಸರಕಾರ ಆರಂಭಿಸಿದ್ದು,ಇದರ ಮೊದಲ ದಿನದ ಕಾರ್ಯಾರಂಭದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಾಲೂಕಿನ ಆಲ್ದಾಳ ಅಂಚೆಕಚೇರಿಯ ಪತ್ರಗಳ ವಿತರಕ ಪ್ರಸನ್ನ ಪೀರಾಪುರ ದೇಶದಲ್ಲಿಯೆ ನಾಲ್ಕನೆ ಸ್ಥಾನದ ಸಾಧನೆ ಮಾಡಿದ್ದಾರೆ.

ಮಂಗಳವಾರ ಆರಂಭಗೊಂಡ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ಆರಂಭಗೊಂಡ ಮೊದಲ ದಿನವೆ 96 ಜನ ಗ್ರಾಹಕರ ಬಳಿಗೆ ಹೋಗಿ ಹಣ ನೀಡುವ ಮೂಲಕ ಉತ್ತಮ ಸಾಧನೆ ಮಾಡಿ ರಾಷ್ಟ್ರೀಯ ಅಂಚೆ ಇಲಾಖೆಯ ಪ್ರಶಂಸೆ ಪಡೆದಿದ್ದಾರೆ.ಯಾದಗಿರಿ ಜಿಲ್ಲೆಯಲ್ಲಿಯೆ ಮೊದಲ ದಿನವೇ 96 ಜನ ಗ್ರಾಹಕರಿಗೆ ಯೋಜನೆಯ ಅರಿವು ಮೂಡಿಸುವ ಜೊತೆಗೆ ಅವರ ಮನೆ ಬಾಗಿಲಿಗೆ ಹೋಗಿ ಗ್ರಾಹಕರ ಬ್ಯಾಂಕ್ ಖಾತೆಯ ಹಣವನ್ನು ಪೋಸ್ಟ್ ಬ್ಯಾಂಕ್ ಮೂಲಕ ನೀಡಿ ಸಾಧನೆ ಮಾಡಿದ್ದಾರೆ.

Contact Your\'s Advertisement; 9902492681
ಇಂಡಿಯನ್ ಪೋಸ್ಟ್ ಬ್ಯಾಂಕ್ ಒಂದೊಳ್ಳೆ ಯೋಜನೆಯಾಗಿದ್ದು, ಯಾವುದೆ ಬ್ಯಾಂಕ್‍ನ ಗ್ರಾಹಕರ ಮನೆ ಬಾಗಿಲಿಗೆ ಹೋಗಿ ಅವರ ಖಾತೆಯಲ್ಲಿನ ಹಣ ನಮ್ಮ ಮೂಲಕ ಪಡೆಯಬಹುದಾಗಿದೆ. ಎಲ್ಲಾ 32 ಬ್ಯಾಂಕ್ ಗ್ರಾಹಕರು ಇದರ ಲಾಭ ಪಡೆಯಬಹದು. ಪ್ರಸನ್ನ ಪೀರಾಪುರ ಆಲ್ದಾಳ ಪೋಸ್ಟ್ ಮಾಸ್ಟರ್.

ಸಾಧನೆಯ ಕುರಿತು ಅಂಚೆ ವಿತರಕ ಪ್ರಸನ್ನ ಮಾತನಾಡಿ, ನಮಗೆ ಸರಕಾರ ಸಂಬಳ ನೀಡುವುದು ಉತ್ತಮ ಸೇವೆ ಮಾಡಲು,ಅದನ್ನು ಮನಗಂಡು ನಮ್ಮ ಸೇವೆಯಲ್ಲಿಯೆ ಸಂತೋಷ ಮತ್ತು ಹೆಮ್ಮೆ ಪಡುವ ಮೂಲಕ ನಿತ್ಯವು ನೂರಾರು ಜನರನ್ನು ಭೇಟಿ ಮಾಡಿ ಅವರ ಸೇವೆ ಮಾಡುವ ಉತ್ತಮ ಅವಕಾಶ ಲಭಿಸಿದೆ.ಇದರಿಂದ ಜನರ ಸೇವೆ ಮಾಡಿದ ತೃಪ್ತಿಯು ಇದೆ.

ಈಗ ನೂತನವಾಗಿ ಆರಂಭಗೊಂಡಿರುವ ಇಂಡಿಯನ್ ಪೋಸ್ಟ್ ಬ್ಯಾಂಕ್ ಯೊಜನೆ ಜನ ಸೇವೆಗೆ ಸಿಕ್ಕಿರುವ ಮತ್ತೊಂದು ಅವಕಾಶವಾಗಿದ್ದು,ಅದನ್ನ ಪ್ರಾಮಾಣಿಕವಾಗಿ ಮಾಡಿದ್ದರಿಂದ ಈ ಸಾಧನೆ ಮಾಡಲು ಅನುಕೂಲವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here