ಶಹಾಬಾದ: ಹೊನಗುಂಟ ಗ್ರಾಮದ ರೈತರು ಬೆಳೆದ ಫಸಲಿಗೆ ನೀರು ಸರಬರಾಜು ಮಾಡಲು ಸಮರ್ಪಕ ವಿದ್ಯುತ್ ಸರಬರಾಜು ಒದಗಿಸಿಸಬೇಕೆಂದು ಆರ್.ಕೆ.ಎಸ್. ಶಹಾಬಾದ ಸ್ಥಳಿಯ ಸಮಿತಿ ವತಿಯಿಂದ ಜೆಸ್ಕಾಂ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿಲಾಯಿತು.
ಹೊನಗುಂಟಾ ಗ್ರಾಮದಲ್ಲಿ ಹಲವಾರು ಜನರ ತೋಟಗಳಲ್ಲಿ ಕಬ್ಬು, ತರಕಾರಿ ಹಾಗೂ ಇತರ ಬೆಳೆಗಳನ್ನು ಬೆಳೆದಿದ್ದಾರೆ. ಹಲವು ದಿನಗಳಿಂದ ಗ್ರಾಮದ ತೋಟಗಳಿಗೆ ವಿದ್ಯುತ್ ಕಡಿತವಾಗುತ್ತಿರುವುದರಿಂದ ಕಬ್ಬಿಗೆ ಬೇಕಾಗುವಷ್ಟು ನೀರನ್ನು ನೀಡಲು ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ೯:೦೦ ರಿಂದ ಸಂಜೆ ೫:೦೦ಘಂಟೆಯವರೆಗೆ ಹಲವಾರು ಬಾರಿ ವಿದ್ಯುತ್ ಲೈನ್ ಕಡಿತ ಮಾಡುತ್ತಿದೆ.ಇದರಿಂದ ಬೆಳೆಗಳಿಗೆ ನೀರು ಹಾಯಿಸದೇ ಇರುವುದರಿಂದ ಬೆಳೆಯುತ್ತಿರುವ ಕಬ್ಬು ಎಲ್ಲಿ ನಾಶವಾಗುತ್ತದೆ ಎಂದು ಆತಂಕ ಮನೆಮಾಡಿದೆ.
ಆದಕಾರಣ ಈ ಕೂಡಲೇ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಿ ರೈತರಿಗೆ ಅನುಕೂಲಮಾಡಬೇಕು ಎಂದು ಜೆಸ್ಕಾಂ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಆರ್.ಕೆ.ಎಸ್ ಜಿಲ್ಲಾ ಅಧ್ಯಕ್ಷ ಗಣಪತ್‌ರಾವ್.ಕೆ.ಮಾನೆ, ಎಸ್.ಯು.ಸಿ (ಐ) ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ.ಎಸ್.ಇಬ್ರಾಹಿಂಪುರ, ಆರ್.ಕೆ.ಎಸ್ ನಗರ ಕಾರ್ಯದರ್ಶಿ ರಾಜೇಂದ್ರ ಅತೂನೂರ, ಈರಣ್ಣ ಇಟಗಿ, ವಿಶ್ವನಾಥ ಬೆಲ್ಲದ್, ವೀರಭದ್ರಯ್ಯ ಸ್ವಾಮಿ, ಮಗ್ದುಮ್ ಪಟೇಲ್, ನಾಗೇಂದ್ರ ಟೆಂಗಳಿಗಿ, ಆನಂದ ಕೊಳಸಪ್ಪ, ಅನಂತಕುಮಾರ ಜೈನ್ ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…