ಶಹಾಪುರ: ಕೋವಿಡ್-19 ನಂತಹ ಮಹಾಮಾರಿ ಖಾಯಿಲೆಯ ಮಧ್ಯದಲ್ಲೂ ತಮ್ಮ ಜೀವವನ್ನು ಲೆಕ್ಕಿಸದೇ ಹಗಲಿರುಳು ಸೇವೆಗೈದ ವೈದ್ಯರು,ವೈದ್ಯಕೀಯ ಸಹಾಯಕರು,ಪೋಲಿಸ್ ಅಧಿಕಾರಿಗಳು ಗ್ರಾಮಪಂಚಾಯತಿಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಚ್ಛತಾಕರ್ಮಿಗಳು ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಈ ಸಂಧರ್ಭದಲ್ಲಿ ಶಾರದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ “ಶ್ರೀ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೆಬಲ್ ಟ್ರಸ್ಟ್ (ರಿ) ” ನ ಅಧ್ಯಕ್ಷರಾದ ಸಂತೋಷ್ ಎಮ್ ವಿಶ್ವಕರ್ಮ ಇವರ ವತಿಯಿಂದ ಲಾಕ್ಡೌನ್ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ವೈದ್ಯಕೀಯ ಸಹಾಯಕರಾದ ಆನಂದ್ ಮಾಲಿಪಾಟಿಲ್, ಗ್ರಾಮಪಂಚಾಯತಿಯ ಅಧ್ಯಕ್ಷರಾದ ಮಾಳಮ್ಮ ಸುರಪುರ, ಪಿಡಿಓ ಮಹಮ್ಮದ್ ಸರ್ಮುದ್ದಿನ್, ಸೆಕ್ರೇಟರಿ ಶರಣಪ್ಪ ಸನ್ನತಿ,ಅಂಗನವಾಡಿ ಕಾರ್ಯಕರ್ತೆಯರಾದ ಭೀಂಬಾಯಿ, ಭಾರತಿ,ಪೂಜಾ, ಆಶಾ ಕಾರ್ಯಕರ್ತೆಯರಾದ ಈರಮ್ಮ, ಚಂದ್ರಕಲಾ,ಮತ್ತು ಸ್ವಚ್ಛತಾಕರ್ಮಿಗಳಿಗೆ ಸನ್ಮಾನಿಸಲಾಯಿತು.
ಗ್ರಾಮದಸ್ಥರಾದ ಮಹಾದೇವ್ ಗೋನಾಲ್, ಹಣಮಂತ ಪೂಜಾರಿ,ಶಿವರುದ್ರಪ್ಪ ರುದ್ರಪ್ಪ ನಾಗಲಿಕರ್, ಭೀಮಾಶಂಕರ್ ಮತ್ತು ನಿರೂಪಕರಾದ ಬಾಲರಾಜ್ ಎಮ್ ವಿಶ್ವಕರ್ಮ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…