ಕಲಬುರಗಿ: ಎಲೆಕ್ಶನ್ ದಲ್ಲಿ ನಾನು ಸೋತ್ರು ಪರ್ವಾಗಿಲ್ಲˌ ಅಕ್ರಮ ಮರಳು ಸಾಗಿಸುವವರಿಗೆ ಜೈಲಿಗೆ ಹಾಕಿಸ್ತಿನಿ. ಜನ ಕೊರೊನಾ ಅಂತ ಸಾಯ್ತಾ ಇದ್ರೆˌ ನೀವ್ ಮರಳು ಹೊಡಿತಿನಿ ಅಂತಾ ಕಾಲ್ ಮಾಡ್ತಿರಾ? ಅಕ್ರಮ ಕೆಲಸಕ್ಕೆ 10 ಸಲ ಪೋನ್ ಮಾಡ್ತೀರಾ? ನಾನು ಎಲೆಕ್ಶನ್ ದಾಗ ಸೋತ್ರು ಪರ್ವಾಗಿಲ್ಲˌ ನಿಮ್ಮ ಓಟುಗೀಟು ಏನೂ ಬೇಡ. ಅದು ಹೇಗೆ ಮರಳು ಹೊಡಿತಿರೋ ನಾನು ನೋಡೇ ಬಿಡ್ತಿನಿ ಅಂತ ಖಡಕ್ ಎಚ್ಚರಿಕೆ ನೀಡಿದ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಅಕ್ರಮ ಮರಳುಕೋರರ ಜೊತೆ ಮಾತನಾಡಿದ ಆಡಿಯೋ ಸಕತ್ ವೈರಲ್ ಆಗಿದ್ದುˌ ಸಾರ್ವಜನಿಕರಿಂದ ಬೇಷ್ ಎನಿಸಿಕೊಂಡಿದೆ.
ಹೊನಗುಂಟಿ ಗ್ರಾಮದ ವ್ಶಕ್ತಿ ಶಾಸಕರಿಗೆ ಕರೆ ಮಾಡಿ ಸರ್ˌ ಮರಳು ಹೊಡಿಯೋದಕ್ಕೆ ಅವಕಾಶ ಮಾಡಿಕೊಡಿ. ಸರˌ ನಾವು ಅದರಿಂದಾನೇ ಬದುಕ್ತಾ ಇದ್ದೀವಿ. ಪೊಲೀಸರಿಗೆ ಕೇಳಿದ್ರೆ ನಿಮ್ಮ ಹೆಸರೇ ಹೇಳುತ್ತಿದ್ದಾರೆ ಎಂದ.
ಇದಕ್ಕೆ ಕೆಂಡಾಮಂಡಲರಾದ ಶಾಸಕರುˌಯಾವನ್ರೀ ಅವ್ನುˌನನ್ನ ಹೆಸರು ಹೇಳವ್ನು. ನಿಮಗೆ ತಲೆ ಕೆಟ್ಟಿದೆಯಾ? ಅಕ್ರಮ ಮರಳು ತಡೆದರೆ ಓಟು ಹಾಕಲ್ಲ ಅಂತ ಹೆದರಿಸ್ತೀರಾ? ನಿಮ್ಮ ಓಟು ಬೇಡˌ ಏನೂ ಬೇಡ ನನಗೆ. ನೀವು ಮರಳು ಹೊಡಿತಿರಿˌ ಪತ್ರಿಕೆಯವರು ನನ್ನ ಹೆಸರು ಬರಿತಾರೆ. ಅಕ್ರಮ ಕೆಲಸಕ್ಕೆ ನಾನು ಎಂದಿಗೂ ಸಹಕರಿಸಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಈ ರೀತಿ ಶಾಸಕರು ಖಡಕ್ ಸಂದೇಶ ರವಾನಿಸಿದ್ದರಿಂದ ಸಾರ್ವಜನಿಕರು ಬೇಷ್ ಎನ್ನುತ್ತಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…