ವಾಡಿ: ಡಾ.ಮಲ್ಲಿಕರ್ಜುನ ಖರ್ಗೆ ಅವರಿಗೆ ದೂರವಣಿ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿದವನನ್ನು ಕಾನೂನು ಶಿಕ್ಷೆಗೆ ಗುರಿಪಡಿಸಿ. ಇಲ್ಲವಾದರೆ ನಮಗೆ ಒಪ್ಪಿಸಿರಿ ನಾವೇ ಆತನಿಗೆ ಮಲ ಮೂತ್ರಗಳಿಂದ ಅಭಿಷೇಕ ಮಾಡ್ತೀವಿ ಎಂದು ವಾಡಿ ಬ್ಲಾಕ್ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಕೇಂದ್ರ ಮಂತ್ರಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಸಭೆಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶನಿವಾರ ವಾಡಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂದೆ ಜಮಾಯಿಸಿದ್ದ ಕೈ ಕಾರ್ಯಕರ್ತರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ ಅವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಗೆಲುವಿನ ಸಂಭ್ರಮ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಟೋಪಣ್ಣ ಕೋಮಟೆ ಹಾಗೂ ಮಹೆಮೂದ್ ಸಾಹೇಬ, ಸಂಸದರಾಗಿದ್ದಾಗ ಖರ್ಗೆ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಏಕೈಕ ರಾಷ್ಟ್ರನಾಯಕರಾಗಿದ್ದರು. ಬಿಜೆಪಿ ಸರಕಾರದ ದುರಾಡಳಿತವನ್ನು ನಿರ್ಭಯವಾಗಿ ಬಯಲಿಗೆಳೆಯುತ್ತಿದ್ದರು. ಬಿಜೆಪಿ, ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷತ್ ಹಾಗೂ ಸಂಘ ಪರಿವಾರದ ಮನುವಾದಿ ಸಿದ್ಧಾಂತದ ವಿರುದ್ಧ ಧ್ವನಿ ಎತ್ತಿದ್ದರು. ಸಂವಿಧಾನದ ಬದಲಾಯಿಸಿದರೆ ರಕ್ತಕ್ರಾಂತಿ ಆಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಈಗ ಸಂಸದ ಖರ್ಗೆ ಮತ್ತು ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವುದು ನೋಡಿದರೆ, ಇದರಲ್ಲಿ ಸಂಘ ಪರಿವಾರದ ಕೈವಾಡವಿರುವುದು ನಿಸಂಶಯ ಎಂದು ಆರೋಪಿಸಿದರು.
ಈಗ ರಾಜ್ಯ ಸಭೆಗೆ ಆಯ್ಕೆಯಾಗುವ ಮೂಲಕ ಖರ್ಗೆ ಅವರು ಮತ್ತೊಮ್ಮೆ ದೇಹಲಿ ಸಂಸತ್ ಪ್ರವೇಶ ಪಡೆಯುತ್ತಿರುವುದರಿಂದ ಬಿಜೆಪಿ ಪಾಳೆಯದಲ್ಲಿ ನಡುಕ ಹುಟ್ಟಿದೆ. ಹೇಗಾದರೂ ಮಾಡಿ ಖರ್ಗೆ ಸಂಸತ್ ಪ್ರವೇಶಿಸದಂತೆ ತಡೆಯಲು ಹಲವು ಪ್ರಯತ್ನಗಳನ್ನು ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಪ್ಲ್ಯಾನ್ ಕೈಕೊಟ್ಟಿದೆ. ಇನ್ನುಮುಂದೆ ಕೇಂದ್ರ ಬಿಜೆಪಿ ಸರಕಾರದ ಭೂ ಮಾಫೀಯಾ ಬಯಲಿಗೆ ಬರಲಿದ್ದು, ಬಿಜೆಪಿಗರು ತೊಟ್ಟ ಅಭಿವೃದ್ಧಿಯ ಮುಖವಾಡ ಕಳಚಲಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಶಂಕ್ರಯ್ಯಸ್ವಾಮಿ ಮದರಿ, ಭೀಮರಾವ ದೊರೆ, ಬಾಬುಮಿಯ್ಯಾ, ನಾಗೇಂದ್ರ ಜೈಗಂಗಾ, ಪರಶುರಾಮ ಕಟ್ಟಿಮನಿ, ಮುಕ್ರುಂ ಪಟೇಲ, ಅಬ್ರಾಹಂ ರಾಜಣ್ಣ, ಎಸ್‌ಸಿ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಸೈದಾಪುರ, ಪುರಸಭೆ ಸದಸ್ಯರಾದ ದೇವಿಂದ್ರ ಕರದಳ್ಳಿ, ಪೃಥ್ವಿರಾಜ ಸೂರ್ಯವಂಶಿ, ತಿಮ್ಮಯ್ಯ ಪವಾರ, ಮಹ್ಮದ್ ಗೌಸ್, ಯುವ ಮುಖಂಡರಾದ ಬಸವರಾಜ ಕೇಶ್ವಾರ, ಸೂರ್ಯಕಾಂತ ರದ್ದೇವಾಡಿ, ಶರಣಬಸು ಸಿರೂರಕರ, ರಮೇಶ ಬಡಿಗೇರ, ಶ್ರವಣಕುಮರ ಮೌಸಲಗಿ, ವಿಜಯಕುಮಾರ ಸಿಂಗೆ, ರಾಹುಲ ಮೇನಗಾರ, ನಾಸೀರ ಹುಸೇನ, ಮಹ್ಮದ್ ಅಶ್ರಪ್, ರಾಜಾ ಪಟೇಲ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
೧೩ಜಿಯು-ವಾಡಿ೨
ವಾಡಿ: ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಕಾರಣ ಬ್ಲಾಕ್ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿದರು.
ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…
ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…
ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್‍ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ…
ಕಲಬುರಗಿ; ಶಿಶು ಮಗುವಿಗೆ ಅಪಹರಣಕಾರರನ್ನು ಬಂಧಿಸಿದ ಕಲಬುರಗಿ ಪೆÇೀಲೀಸ್ ಇಲಾಖೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅಭಿನಂದನೆ ವ್ಯಕ್ತಪಡಿಸಿದೆ.…
ಕಲಬುರಗಿ; ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಅಫಜಲಪೂರ, ಸೇಡಂ, ಆಳಂದ, ಚಿಂಚೋಳಿ ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟನೆನ್ಸ್…