ಕಲಬುರಗಿ: ನಂಬಿಕೆ ದ್ರೋಹಿ ಚೀನಾ ದೇಶ ಗಾಲ್ವಾನ್ ಕಣಿವೆಯಲ್ಲಿ ನಮ್ಮ ದೇಶದ ಯೋಧರ ಮೇಲೆ ಕಬ್ಬಿಣದ ಮೊಳೆಯುಕ್ತ ರಾಡ್ಗಳಿಂದ ಭೀಕರವಾಗಿ ಹಲ್ಲೆಯ ಹೇಯ ಕೃತ್ಯ ಎಸಗಿರುವ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸಲು ದೇಶವಾಸಿಗಳು ಮುಂದಾಗಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಹೇಳಿದ್ದಾರೆ.
ಚೀನಾದ ಅನಾಗರೀಕ ಕೃತ್ಯದಿಂದಲೇ ನಮ್ಮ ಯೋಧರು ಹುತಾತ್ಮರಾಗಿರುವ ಕುರಿತು ಬಿಬಿಸಿ ವರದಿಯಲ್ಲಿ ಚೀನಾದ ಈ ಕುತಂತ್ರದ ಕುಟಿಲ ಸಂಚನ್ನು ಬಯಲುಮಾಡಿದೆ. ನಂಬಿಕೆ ದ್ರೋಹಿ ಚೀನಾಕ್ಕೆ ನಮ್ಮ ದೇಶದ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ .ಸೇನೆಯ ವೀರ ಕಾರ್ಯಕ್ಕೆ ವಿಶ್ವವೆ ಮೆಚ್ಚುಗೆ ವ್ಯಕ್ತಪಡಿಸಿದೆ,ಇಡೀ ದೇಶ ಸೇನೆಯ ಜೋತೆಗಿದೆ.
ದೇಶದ ಪ್ರಜ್ಞಾವಂತ ನಾಗರೀಕರಾಗಿ ನಾವು ಗಡಿ ಪ್ರದೇಶಕ್ಕೆ ಹೋಗಿ ಚೀನಾ ವಿರುದ್ಧ ಯುದ್ಧ ಮಾಡಬೇಕಿಲ್ಲ, ನಾವು ದೇಶದಲ್ಲಿದ್ದುಕೊಂಡೇ ನಮ್ಮ ಮನೆಯಿಂದಲೇ ಚೀನಾದ ಎಲ್ಲ ವಸ್ತುಗಳನ್ನು ಸಂಪೂರ್ಣವಾಗಿ ಈಗಿನಿಂದಲೇ ಖರೀದಿಸುವುದನ್ನು ನಿಲ್ಲಿಸುವುದು ಹಾಗೂ ದೇಶಾದ್ಯಂತ ಚೀನಿ ವಸ್ತುಗಳನ್ನು ಬಹಿಷ್ಕರಿಸುವುದೇ ಚೀನಿಯರಿಗೆ ಸರಿಯಾದ ಪ್ರತ್ಯುತ್ತರವಾಗಲಿದ್ದು, ಇದುವೇ ಹುತಾತ್ಮರಾದ ನಮ್ಮ ಸೈನಿಕರಿಗೆ ನಾವು ನೀಡುವ ನಿಜವಾದ ಶೃದ್ಧಾಂಜಲಿ ಎಂದು ಅಂಬಾರಾಯ ಅಷ್ಠಗಿ ಹೇಳಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…