ಬಿಸಿ ಬಿಸಿ ಸುದ್ದಿ

ಮಣ್ಣು ಆರೋಗ್ಯದ ಕುರಿತು ಅರಿವು ಮೂಡಿಸಿ ಚೀಟಿ ವಿತರಣೆ ಕಾರ್ಯಕ್ರಮ

ಸುರಪುರ: ತಾಲೂಕಿನ ಬಿಜಾಸಪುರ ಗ್ರಾಮದ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ೨೦೧೯-೨೦ನೇ ಸಾಲಿನ ಮಣ್ಣು ಆರೋಗ್ಯ ಚೀಟಿ ಯೋಜನೆ ಅಡಿಯಲ್ಲಿ ಗ್ರಾಮ ಮಟ್ಟದ ಮಣ್ಣು ಪರೀಕ್ಷಾ ಫೀಡರ್ ಸುರಪುರ ಪ್ರಯೋಗಾಲಯಕ್ಕೆ ಬಿಜಾಸಪುರ,ದೇವಿಕೇರಾ ಹಾಗು ಖಾನಾಪುರ ಎಸ್.ಹೆಚ್.ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು.

ಈ ಗ್ರಾಮಗಳಲ್ಲಿನ ನಿಗದಿಪಡಿಸಿದ ೮೦೦ ಫಲಾನುಭವಿ ರೈತರ ಜಮೀನಿನ ಮಣ್ಣು ಮಾದರಿಗಳ ಮಣ್ಣು ಆರೋಗ್ಯ ಕಾರ್ಡುಗಳನ್ನು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಭೀಮರಾಯ ಹವಾಲ್ದಾರ ಪ್ರಾಸ್ತಾವಿಕವಾಗಿ ಮಾತನಾಡಿ,ಮುಂಗಾರು ಹಂಗಾಮಿನ ಬಿತ್ತನೆ ಪೂರ್ವದಲ್ಲಿ ರೈತರು ಮಣ್ಣು ಆರೋಗ್ಯ ಚೀಟಿ ಪಡೆದು ಲಾಭ ಪಡೆಯುವಂತೆ ತಿಳಿಸಿದರು.

ಕೃಷಿ ವಿಜ್ಞಾನಿ ಡಾ: ಉಮೇಶ ಬಿರಾದಾರ ಮಾತನಾಡಿ,ಮಣ್ಣು ಆರೋಗ್ಯ ಚೀಟಿಯ ಮಾಹಿತಿ ನೀಡಿ,ಇದರಿಂದ ರೈತರು ತಮ್ಮ ಹೊಲದಲ್ಲಿನ ಮಣ್ಣಿಗೆ ಬೇಕಾಗುವ ಅಗತ್ಯ ಪೋಷಕಾಂಶಗಳಾದ ಸಾರಜನಕ,ರಂಜಕ ಮತ್ತು ಪೋಟ್ಯಾಸಿಯಂ ಸೇರಿದಂತೆ ಅವಶ್ಯಕವಾದ ಪೊಷಕಾಂಶಗಳ ಮಾಹಿತಿ ಪಡೆದು ಅದರಂತೆ ಬೇಸಾಯ ಮಾಡಿದಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದರು.

ಸಹಾಯಕ ಕೃಷಿ ನಿರ್ದೇಶಕರಾದ ದಾನಪ್ಪ ಕತ್ನಳ್ಳಿ ಮಾತನಾಡಿ,ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗೆ ದೊರೆಯುವ ಲಾಭಗಳು ಮತ್ತು ಲಭ್ಯವಿರುವ ಬಿತ್ತನೆ ಬೀಜಗಳ ಕುರಿತು ಮಾಹಿತಿ ನೀಡಿ,ಕೋರೊನಾ ಕುರಿತು ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಮಣ್ಣು ಪರೀಕ್ಷಾ ಕೇಂದ್ರದ ನಿರ್ವಾಹಕ ಬಾಲರಾಜ ಚಂದುಕರ,ತಾಂತ್ರಿಕ ವ್ಯವಸ್ಥಾಪಕ ವಿನಾಯಕ ಚವ್ಹಾಣ ರೈತ ಮುಖಂಡರಾದ ಶಾಂತರಡ್ಡಿಗೌಡ ಪೊಲೀಸ್ ಪಾಟೀಲ್,ಮಾನಪ್ಪ ನಾಯಕ,ಮಹಿಬೂಬ ಜಮಾದಾರ,ರಾಮಣ್ಣ ಬಬಲಾದಿ,ಅಮರಪ್ಪ ಬಿಜಾಸಪುರಕರ,ಸಿದ್ರಾಮ,ಮಲ್ಕಪ್ಪ ನಾಯಕ,ಚಂದ್ರಶೇಖರ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

1 hour ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago