ಸುರಪುರ: ಕೋರೋನಾದಿಂದಾಗಿ ಮುಂದೂಡಲ್ಪಟ್ಟಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆ ನಾಳೆಯಿಂದ (ಜೂ೨೫) ನಡೆಯಲಿದ್ದು ಇದಕ್ಕಾಗಿ ತಾಲೂಕಿನಲ್ಲಿ ಸರ್ವ ಸಿದ್ಧತೆ ಕೈಗೊಳ್ಳಲಾಗಿದ್ದು ಪರೀಕ್ಷೆಗೆ ೩೨೪೫ ಗಂಡು ಹಾಗೂ ೨೩೮೮ ಹೆಣ್ಣು ಸೇರಿದಂತೆ ಒಟ್ಟು ೫೬೧೨ ಮಕ್ಕಳು ಪರೀಕ್ಷೆಗೆ ಕುಳಿತುಕೊಳ್ಳಲಿದ್ದು, ೧೫ ಮುಖ್ಯ ಪರೀಕ್ಷಾ ಕೇಂದ್ರಗಳು ಹಾಗೂ ೬ ಉಪ ಕೇಂದ್ರಗಳು ಸೇರಿದಂತೆ ಒಟ್ಟು ೨೧ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಬಿ.ಇ.ಓ ನಾಗರತ್ನ ಓಲೇಕಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಅವರು ಮಾತನಾಡಿ ಮಾರಕ ಕೋರೋನಾ ಸೋಂಕಿನಿಂದಾಗಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ಆರೋಗ್ಯಕ್ಕೆ ಯಾವುದೇ ತೊಂದರೆಯಾಗದಂತೆ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು ಹಾಗೂ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಎಲ್ಲಾ ಕೇಂದ್ರಗಳಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ ಅವರು, ಈ ಬಾರಿ ಪರೀಕ್ಷೆಗೆ ೧೯೩೩-ಬಾಲಕಿಯರು ಹಾಗೂ ೨೨೬೮ ಬಾಲಕಿಯರು ಸೇರಿ ಒಟ್ಟು ೪೨೦೧ ಪ್ರಥಮ ಬಾರಿಗೆ ಪರೀಕ್ಷೆಗೆ ಕುಳಿತುಕೊಳ್ಳಲಿರುವ ರೆಗ್ಯುಲರ್ ವಿದ್ಯಾರ್ಥಿಗಳು, ೬೦-ಬಾಲಕಿಯರು ಮತ್ತು ೯೫ ಬಾಲಕರು ಸೇರಿ ಒಟ್ಟು ೧೫೫ ಖಾಸಗಿ ಅಭ್ಯರ್ಥಿಗಳು, ೩೮೧-ಬಾಲಕಿಯರು ಹಾಗೂ ೮೩೨ ಬಾಲಕರು ಸೇರಿ ಒಟ್ಟು ೧೨೧೩ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ೧೩-ಬಾಲಕಿಯರು ಮತ್ತು ೫೦-ಬಾಲಕರು ಸೇರಿ ಒಟ್ಟು ೬೩ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ತಾಲೂಕಿನ ೧೫ ಪರೀಕ್ಷಾ ಕೇಂದ್ರಗಳಲ್ಲಿ ಸುರಪುರ-೪, ಕೆಂಭಾವಿ-೪, ಹುಣಸಗಿ-೨, ಕಕ್ಕೇರಾ-೧, ನಾರಾಯಣಪುರ-೧, ಕೊಡೇಕಲ್-೧, ವಜ್ಜಲ್-೧ ಹಾಗೂ ದೇವಾಪುರ-೧ ಮುಖ್ಯ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಇದರೊಂದಿಗೆ ಸುರಪುರನಲ್ಲಿ-೨, ಕೆಂಭಾವಿ-೨, ನಾರಾಯಣಪುರ-೧ ಹಾಗೂ ಕೊಡೇಕಲ್-೧ ಉಪ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದ ಅವರು, ಇದರೊಂದಿಗೆ ಯಾವುದೇ ಪರೀಕ್ಷಾ ಕೇಂದ್ರ ವ್ಯಾಪ್ತಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಲ್ಲಿ ಅಂತಹ ಸಂದರ್ಭದಲ್ಲಿ ಸುರಪುರನಲ್ಲಿ ಕನ್ಯಾ ಸರಕಾರಿ ಪ್ರೌಢಶಾಲೆ ಹಾಗೂ ಕ್ರೈಸ್ತ ದಿ ಕಿಂಗ್ ಶಾಲೆಗಳು ಹಾಗೂ ಕೆಂಭಾವಿಯಲ್ಲಿ ಡಿಗ್ರಿ ಕಾಲೇಜುಗಳನ್ನು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನಾಗಿ ಮೀಸಲು ಇಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಹಾಯವಾಣಿ ಸ್ಥಾಪನೆ
ನಾಳೆಯಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನಿಮಿತ್ಯ ಮಕ್ಕಳಿಗೆ ಪರೀಕ್ಷೆಗೆ ಸಂಬಂಧಪಟ್ಟಂತೆ ಮಾಹಿತಿ ಒದಗಿಸಲು ಬಿ.ಇ.ಓ ಕಚೇರಿಯಿಂದ ಸಹಾಯವಾಣಿ ಸ್ಥಾಪಿಸಲಾಗಿದೆ, ಬಸವರಾಜ ಶಿಕ್ಷಣ ಸಂಯೋಜಕರು (೯೫೯೧೪೦೯೪೩೯), ಶಿವಕುಮಾರ ಶಿಕ್ಷಣ ಸಂಯೋಜಕರು (೯೯೦೨೧೫೨೩೫೬) ಹಾಗೂ ಹಣಮಂತರಾಯ ಪ್ರಥಮ ದರ್ಜೆ ಸಹಾಯಕರು (೮೧೦೫೦೪೩೨೫೨) ಇವರನ್ನು ವಿದ್ಯಾರ್ಥಿಗಳು ಪರೀಕ್ಷೆಗೆ ಸಂಬಂಧಪಟ್ಟಂತೆ ಸಂಪರ್ಕಿಸಬಹುದಾಗಿದೆ.
ಪ್ರತ್ಯೇಕ ಕೋಣೆ: ಕಂಟೇನ್ಮೆಂಟ್ ಝೋನ್‌ದಿಂದ ಆಗಮಿಸುವ ಮಕ್ಕಳ ಸಲುವಾಗಿ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಕೋಣೆಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ತಾಲೂಕಿನಲ್ಲಿ ಒಟ್ಟು ೯೦ ಕಂಟೇನ್ಮೆಂಟ್ ಝೋನ್ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಕಂಟೇನ್ಮೆಂಟ್ ಝೋನ್‌ಗಳಾಗಿ ಗುರುತಿಸಲಾಗಿರುವ ನಗರದ ದೀವಳಗುಡ್ಡ, ಆಸರ್ ಮೊಹಲ್ಲಾ ಹಾಗೂ ಹೊಸ ಸಿದ್ದಾಪುರ ಗ್ರಾಮಗಳ ಪರೀಕ್ಷಾರ್ಥಿಗಳ ಸಲುವಾಗಿ ವಿವಿಧ ಕೇಂದ್ರಗಳಲ್ಲಿ ಪ್ರತ್ಯೇಕ ಕೋಣೆಗಳನ್ನು ವ್ಯವಸ್ಥೆಗೊಳಿಸಿದ್ದು ಹಾಗೂ ಕೆಂಭಾವಿ ಮತ್ತು ನಾರಾಯಣಪುರನ ಪರೀಕ್ಷಾ ಕೇಂದ್ರಗಳಲ್ಲಿ ಕೂಡಾ ಕಂಟೇನ್ಮೆಂಟ್ ಝೋನ್ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕೋಣೆಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು
ಮಾಸ್ಕ ಮತ್ತು ಸ್ಯಾನಿಟೈಜರ್ ವಿತರಣೆ : ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ಇಬ್ಬರು ಆರೋಗ್ಯ ಸಹಾಯಕ ಸಿಬ್ಬಂದಿಗಳು ಇರಲಿದ್ದು ಮಕ್ಕಳ ಜ್ವರ ತಪಾಸಣೆ ಕೈಗೊಳ್ಳಲಿದ್ದಾರೆ ಅಲ್ಲದೆ ಪ್ರತಿಯೊಂದು ಕೇಂದ್ರದಲ್ಲಿ ಮಾಸ್ಕ ಹಾಗೂ ಸ್ಯಾನಿಟೈಜರ್ ವಿತರಿಸಲು ಮತ್ತು ಸಾಮಾಜಿಕ ಅಂತರ ಕಾಪಾಡಲು ವಿಶೇಷವಾಗಿ ಸ್ಕೌಟ್ ಮತ್ತು ಗೈಡ್ ಶಿಕ್ಷಕರನ್ನು ನಿಯೋಜಿಸಲಾಗಿದ್ದು ಪ್ರತಿಯೊಂದು ಕೇಂದ್ರದಲ್ಲಿ ಮೈಕ್ ವ್ಯವಸ್ಥೆ ಕೈಗೊಂಡಿದ್ದು ಮಾಹಿತಿ ನೀಡಲು ಒಬ್ಬ ದೈಹಿಕ ಶಿಕ್ಷಕರನ್ನು ನಿಯೋಜಿಸಲಾಗಿದ್ದು ಹಾಗೂ ಪ್ರತಿ ಕೇಂದ್ರದಲ್ಲಿ ಮೊಬೈಲ್ ಸ್ವಾಧೀನಾಧಿಕಾರಿಗಳನ್ನಾಗಿ ಸಿಆರ್‌ಪಿ ಗಳನ್ನು ನಿಯೋಜಿಸಲಾಗಿದೆ ಹಾಗೂ ಪ್ರತಿ ಕೇಂದ್ರದಲ್ಲಿ ಪೋಲಿಸ್ ಬಂದೋಬಸ್ತು ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಬಿಇಓ ಅವರು ವಿವರ ಮಾಹಿತಿ ನೀಡಿದರು.
ಪರೀಕ್ಷಾ ಕೇಂದ್ರಗಳಲ್ಲಿ ಆಗಮಿಸುವ ಮಕ್ಕಳನ್ನು ಕರೆದುಕೊಂಡು ಬರಲು ಸಾರಿಗೆ ಸಂಸ್ಥೆಯ ವತಿಯಿಂದ ೪೦ ಬಸ್‌ಗಳನ್ನು ವ್ಯವಸ್ಥೆಗೊಳಿಸಿದ್ದು ಅಲ್ಲದೆ ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲಿ ೧೫ ಖಾಸಗಿ ಶಾಲಾ ವಾಹನಗಳನ್ನು ಕೂಡಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…