ಸುರಪುರ: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸುರಪುರ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕು ಅಂಗನವಾಡಿ ನೌಕರರು ತಹಸೀಲ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಖಾ ಕುಲಕರ್ಣಿ ಮಾತನಾಡಿ,ಅಂಗನವಾಡಿ ನೌಕರರು ಇಂದು ಅನೇಕ ಸಮಸ್ಯೆಗಳಿಂದ ಬಳಲುವಂತಾಗಿದೆ.ಸರಕಾರ ಅಂಗನವಾಡಿ ನೌಕರರಿಗೆ ಪ್ರತಿ ತಿಂಗಳು ೫ನೇ ತಾರೀಖಿನೊಳಗೆ ಸಂಬಳ ನಿಡಬೇಕು.ಮೊಟ್ಟೆ ಮತ್ತು ತರಕಾರಿ ಬಿಲ್‌ನ್ನು ಅಂಗನವಾಡಿ ಕಾರ್ಯಕರ್ತೆಯರೆ ಪಾವತಿ ಮಾಡಿ ನಂತರ ಪಡೆಯಬೇಕಿದೆ.ಇದು ನಮಗೆ ತುಂಬಾ ಹೊರೆಯಾಗಿದೆ.
ಆದ್ದರಿಂದ ಪ್ರತಿ ತಿಂಗಳ ಮೊಟ್ಟೆ ತರಕಾರಿ ಹಣವನ್ನು ಮುಂಗಡವಾಗಿಯೆ ನೀಡಬೇಕು.ಸದ್ಯ ಮೂರು ನಾಲ್ಕು ತಿಂಗಳಿಂದ ಬಿಲ್ ಮತ್ತು ವೇತನ ನೀಡಿರುವುದಿಲ್ಲ.ಕೂಡಲೆ ಬಿಡುಗಡೆ ಮಾಡಬೇಕು.ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಕರೆದಿದ್ದು ಮೊದಲು ಸಹಾಯಕಿಯರಿಗೆ ಆದ್ಯತೆ ಮೇರೆಗೆ ಮುಂಬಡ್ತಿ ನೀಡಿ ನೇಮಕಾತಿಗೊಳಿಸಿಕೊಳ್ಳಬೇಕು.ಅಂಗನವಾಡಿ ನೌಕರರಾಗಿ ನೀವೃತ್ತಿ ಹೊಂದಿದವರಿಗೆ ತಕ್ಷಣವೆ ನಿವೃತ್ತಿ ಹಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ನಸೀಮಾ ಮುದನೂರ,ರಾಧಾ ಸುರಪುರ,ಬಸಮ್ಮ ದೊರೆ,ಸೂಗಮ್ಮ ಹಸನಾಪುರ,ಸಿದ್ದಮ್ಮ ಹೆಮನೂರ,ನಾಗರತ್ನ ಲಕ್ಷ್ಮೀಪುರ,ಸಾಬಮ್ಮ ಲಕ್ಷ್ಮೀಪುರ,ಕ್ಲಾರಾ ವಂದಗನೂರು ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…