ಶಹಾಬಾದ: ಗ್ರಾಪಂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದವರು ಹೊನಗುಂಟಾ ಗ್ರಾಪಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ.ಸಿ.ಹೊನಗುಂಟಾ, ಸರ್ಕಾರ ಆದೇಶ ಹೊರಡಿಸಿ ತಿಂಗಳುಗಳೇ ಕಳೆದರೂ ಗ್ರಾಪಂ ಮಾತ್ರ ಆದೇಶಗಳು ಜಾರಿಯಾಗುತ್ತಿಲ್ಲ.ಈಗಾಗಲೇ ಕೋವಿಡ್-೧೯ ದಿಂದ ಜನಸಾಮಾನ್ಯರ ಬದುಕು ಅಲ್ಲೊಲ ಕಲ್ಲೊಲವಾಗಿದೆ. ಕೂಡಲೇ ಇಎಫ್‌ಎಮ್‌ಎಸ್ ಸಿಬ್ಬಂದಿಗಳನ್ನು ಅಳಡಿಸಬೇಕು.ಸಿಬ್ಬಂದಿಗಳ ವೇತನ ಸರಿಯಾಗಿ ಆಗುತ್ತಿಲ್ಲವಾದ್ದರಿಂದ ತೆರಿಗೆ ವಸೂಲಾತಿ ಹಣದಲ್ಲಿ ಶೇ ೪೦ರಷ್ಟು ಹಾಗೂ ೧೪ನೇ ಹಣಕಾಸು ಯೋಜನೆಯಲ್ಲಿ ಶೇ ೧೦% ಸಿಬ್ಬಂದಿಗಳ ವೇತನ ಪಾವತಿಸಬೇಕು.
ಪಂಚಾಯತ ಸಿಬ್ಬಂದಿಗಳಿಗೆ ನಿವೃತ್ತಿ ಉಪದಾನ ನೀಡಬೇಕು. ಸಿಬ್ಬಂದಿಗಳಿಗೆ ಸೇವಾ ಪುಸ್ತಕ ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು. ಪಂಪ್ ಆಪರೇಟರ್‌ಗಳಿಗೆ ಕರವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕು.ಎಲ್ಲಾ ಸಿಬ್ಬಂದಿಗಳಿಗೆ ಸಮವಸ್ತ್ರ ಒದಗಿಸಬೇಕು. ಅನುಕಂಪದ ನೇಮಕಾತಿಗಳನ್ನು ತೊಂದರೆಯಾಗದಂತೆ ಸರ್ಕಾರವೇ ನೇಮಕಾತಿ ಮಾಡಬೇಕು.ಕಂಪ್ಯೂಟರ ಆಪರೇಟರ್‌ಗಳಿಗೆ ಅನುಮೋದನೆ ನೀಡಿ ಇಎಫ್‌ಎಮ್‌ಎಸ್‌ಗೆ ಸೇರಿಸಬೇಕೆಂದು ಆಗ್ರಹಿಸಿದರು.
ಗ್ರಾಪಂ ಪಿಡಿಓ ಗುರುನಾಥ ಓಗೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘz ಶರಣಪ್ಪ, ನಾಗಪ್ಪ, ಶೋಭಾ, ಮರೆವ್ವ, ಮಲ್ಕಮ್ಮ, ಅಯ್ಯಮ್ಮ, ಸುಭದ್ರಮ್ಮ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…