ಅಂಕಣ ಬರಹ

ನಿಮ್ಮೆಲ್ಲರ ನುಡಿಮುತ್ತುಗಳ ಆಚೆಗೆ ‘ಸೂಫಿಯುಂ ಸುಜಾದೆಯುಂ’ ಬಗ್ಗೆ !

  • ಆಶಿಕ್ ಮುಲ್ಕಿ
ಸೂಫಿ ನೀನೆಂದರೆ
ಸಮುದ್ರದ ಅಲೆ
ಲೆಕ್ಕವಿಟ್ಟಷ್ಟು ಹೆಚ್ಚುವ ದರ್ದು…

ಹೀಗೆ ಸಿನೆಮಾವೊಂದು ಕಟ್ಟಿಕೊಡಬಲ್ಲ ಅನುಭವವನ್ನು ‘ಸೂಫಿಯುಂ ಸುಜಾದೆಯುಂ’ ನನ್ನಲ್ಲೂ ಕಟ್ಟಿಕೊಟ್ಟಿದೆ. ಸುಜಾದ ಎಂಬಾಕೆಯ ಮೌನ ಆಳವಾಗಿ ಎದೆಗಿಳಿಯುವಂತದ್ದು. ನಿರ್ದೇಶಕನ ಆ ಚಾಕಚಕ್ಯತೆಗೆ ಬಹುಪರಾಕ್. ಸೂಫಿಯ ಅಝಾನಿನ ತಾಳ, ಲಯ, ಇಂಪು ಅನ್ಯ ಧರ್ಮದ ಹೆಣ್ಣನ್ನು ಕುಣಿಯುವಂತೆ ಮಾಡುವುದು ಇದೆಯಲ್ಲಾ ಅದುವೇ ನೋಡಿ ಪ್ರೇಮ. ಇಲ್ಲಿ ಪ್ರೇಮವೆಂದರೆ ಸೂಫಿ. ಭಕ್ತಿ ಪರಕಾಷ್ಠೆಯಿಂದ ಅಝಾನಿನ ದಿವ್ಯಾನುಭೂತಿ ಪಡೆದುಕೊಳ್ಳವವರ ಮಧ್ಯೆ ಅಝಾನೆಂದರೆ ‘ಸುಜಾದೆ’ಯಂತವರ ಕಾಲು ಕುಣಿಯುವಂತೆ ಮಾಡುತ್ತವೆ. ಸೂಫಿಯೂ ಅಷ್ಟೇ, ಅದೆಷ್ಟು ಕಲೆಗಳನ್ನು ಕರಗತ ಮಾಡಿಕೊಂಡು, ಧರ್ಮದ ಆಳ ಅಗಲವನ್ನು ಅರಿತುಕೊಂಡು, ಖುರಾನಿನ ಸಾಲುಗಳನ್ನ ಬೋಧಿಸುವುದುರ ಜೊತೆಗೆ ‘ಕಾಫಿರಳ’ ಮೋಹಕ್ಕೆ ಬೀಳುವುದು ಇದೆಯಲ್ಲಾ ಅದೇ ಪ್ರೇಮ.‌

ಕಡಲಾಳದಲ್ಲಿ ಅಡಗಿರುವ ಮತ್ತು
ಸುಲಭದಲ್ಲಿ ಧಕ್ಕುವಂತದ್ದಲ್ಲ;
ನಿನ್ನಂತೆ ಸೂಫಿ…

ಪ್ರೇಮವೆಂದರೆ‌ ಬರೀ ಮೋಹವಲ್ಲ. ಕಾಯುವಿಕೆ. ಗುರುವಿನ ಒಮ್ಮತ ಮೀರಿ ಸೂಫಿ ತನ್ನೆದೆಯೊಳಗೆ ಒಂದಿಚು‌ ಜಾಗ ಸುಜಾದಾಳಿಗೆ ನೀಡುತ್ತೇನೆ ಎಂಬ ಗಟ್ಟಿ ನಿರ್ಧಾರ ಇಲ್ಲಿನ ಜನರ ಆತ್ಮವನ್ನು ಒಮ್ಮೆಗೆ ಕದಡುವಂತದ್ದು. ಇಲ್ಲಿ‌ ನಿರ್ದೇಶಕರು ಸೂಫಿ ಸಂತ ಅಬೂ ಕೈಗೆ ಕ್ಲಾರೆಟ್ ಇಡುವ ಉದ್ದೇಶ ಅಗಾಧವಾದ ಯೋಚನೆಗೆ ಒಡ್ಡುವಂತದ್ದು. ನನ್ನ ತಿಳುವಳಿಕೆಯ ಮಟ್ಟಿಗೆ, ಕ್ಲಾರೆಟ್ ವಾದ್ಯಕ್ಕೂ ಈ ಇಸ್ಲಾಂಗೂ ಯಾವ ಸಂಬಂಧ..? ಕ್ಲಾರೆಟ್ ನಿಂದ ಹೊರಹೊಮ್ಮುವ ನಾದ ಮಸೀದಿಯ ಅಂಗಳದಲ್ಲಿ‌ ಓರ್ವ ಹಿಂದೂ ಹೆಣ್ಣಿನ ಮೈ ಬಳುಕಿಗೆ ಕಾರಣಾವಾಗುವುದು ಇಂದಿನ ಪೀಳಿಗೆಯ ಎದೆಳಾಯದಲ್ಲಿ ಕಿಚ್ಚು ಹಚ್ಚುವಂತೆ ಮಾಡಬೇಕು.

ಸೂಫಿ‌ ಜೊತಗೆ ಮೋಹಕ್ಕೆ ಬಿದ್ದು ಸುಜಾದ ಮೌನದಲ್ಲೇ ಮಾತಾಡುವುದು ಪ್ರೇಮಕ್ಕೆ ಕೊಟ್ಟ ಹೊಸ ಭಾಷ್ಯ. ತನ್ಮಾತ್ರಗಳು ಮಾತ್ರ ಉಳಿಯುವಂತೆ ರಾಜೀವ್ ಸುಜಾದಳ‌ ಕೈ ಹಿಡಿಯುವುದು ಸೂಫಿಯಲ್ಲಿ ಉಂಟು ಮಾಡುವ ತಲ್ಲಣಗಳು ಪ್ರತಿಧ್ವನಿಸುವುದು ಮಾತ್ರ ಸುಜಾದಾಳಲ್ಲಿ.‌ ಎಂದರೆ ಇಲ್ಲಿ ಧರ್ಮ ಮೀರಿ ಸೂಫಿ ಹಾಗೂ ಸುಜಾದ ಪ್ರೇಮವನ್ನು ಕಂಡುಕೊಂಡಿದ್ದಾರೆ. ಇನಿಯನ ನಮಾಝು‌ ತನ್ನದೂ ಎಂದು ಸುಜಾದ ಈವರೆಗೆ ಮುಟ್ಟದ ಮುಸಲ್ಲ ಮುಟ್ಟಿ, ಹಾಸಿ ದುಪ್ಪಟ್ಟ ತಲೆ ಮೇಲೆ ಎಳೆದು ಸೂಫಿಯ ಮೂಗು, ತುಟಿ, ಗಡ್ಡವನ್ನೇ ದಿಟ್ಟಿಸುತ್ತಾ ಕೂರುವುದು ಎರಡು ಸಮುದಾಯಗಳು ಈವರೆಗೂ ಕುರುಡಾಗಿ ನಂಬಿಕೊಂಡ ಬಂದ ನಂಬಿಕೆ ಬೀಳುವ ಕೊಡಲಿ ಏಟು.

ಸಿನೆಮಾ ಅಂತ್ಯ ಹಾಡುವ ಹೊತ್ತಿಗೆ ರಾಜೀವ್ ನನ್ನನ್ನು ಹೆಚ್ಚು ಕಾಡುತ್ತಾನೆ. ಸೂಫಿಯ ನೆನಪುಗಳ ಮುತ್ತುಗಳಿಂದ ಪೋಣಿಸಿದ ತಸ್ಬೀಬ್ ಮಾಲೆಯನ್ನು ಖಬರಿನ ಅಂಚೆತ್ತಿ ಅದರೊಳಕ್ಕೆ ಹಾಕುವ ದೃಶ್ಯ ಸುಜಾದಳ ಆಳದಲ್ಲಿ ಉಂಟು ಮಾಡಬಲ್ಲ ದರ್ದು ರಾಜೀವ್ ಗೆ ಮಾತ್ರ ಗೊತ್ತು ಮಾಡುತ್ತದೆ. ಆವರೆಗೂ ರಾಜೀವ್ ಸಂಗಾತಿಯ ಇನಿಯನ ಕೊನೆಗಾಲವನ್ನು ಅವಳ ಕಣ್ಣಿಂದಲೇ ತುಂಬಿಸಿ ಗಹಗಹಿಸಲು ಹೊರಟವನು. ಆದರೆ ಸೂಫಿಯ ಖಬರಿನ ಮೇಲೆ ನಿಂತೇ ಪ್ರೇಮವೆಂದರೆ ಏನು ಎಂಬುವುದರ ಹೊಸ ನಾನರ್ಥಗಳನ್ನು‌ ಹುಡುಕಿಕೊಳ್ಳುತ್ತಾನೆ ರಾಜೀವ್.

ಜಿನ್ನ್ ಮಸೀದಿ ಸೇರ ಬೇಕಾದರೆ ಒಂದು ನದಿಯನ್ನು ಹಾಯಬೇಕು. ಅದು ಕೇವಲ ಪ್ರೇಮಿನ ಸೌಂದರ್ಯಕ್ಕಾಗಿ ಕಟ್ಟಿದ ನೈಸರ್ಗಿಕ ಕಲ್ಪನೆಯಲ್ಲ. ಬದಲಿಗೆ ಸೂಫಿ ಹಾಗೂ‌ ಸುಜಾದ ಎಂಬ ದಿವ್ಯ ಪ್ರೇಮಿಗಳಿಬ್ಬರು ಸಂಧಿಸುವ ಜಾಗಕ್ಕೆ ಹೊರಡುತ್ತಿದ್ದೀರ, ನಿಮ್ಮೊಳಗಿನ ಎಲ್ಲವನ್ನೂ ಈ ಹರಿಯುವ ನೀರಿನಲ್ಲಿ ಹರಿಯ ಬಿಡಿ. ಅವರಂತೆ ಮನುಷ್ಯರಾಗಿ ಬನ್ನಿ ಎಂಬುದುರ ಸಂಕೇತವೆ..? ನನ್ನೊಳಗೆ ನಿರ್ಮಿತಗೊಂಡ ಆಯಾಮಗಳಿವು.

ಹೀಗೆ ನನ್ನೊಳಗೆ ಗೋಜಲು ಹುಟ್ಟಿಸಿ ‘ಸೂಫಿಯುಂ ಸುಜಾದೆಯುಂ’ ಮುಗಿದೇ ಹೋಯ್ತು. ನಾನು ಮಾತ್ರ ರಾಜೀವ್ ಜಿನ್ನ್ ಪಳ್ಳಿಯ ಖಬರಿಸ್ತಾನದಲ್ಲಿ ಸೂಫಿಯ ಖಬರಿನ ಮೇಲೆ ಏಕಾಂಗಿಯಾಗಿ ನಿಂತಂತೇ ನಿಂತಿದ್ದೇನೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago