ಬಿಸಿ ಬಿಸಿ ಸುದ್ದಿ

ನೇಮಕಾತಿಗೆ ಬ್ರೇಕ್: ಅಧಿಸೂಚನೆ ರದ್ದುಗೊಳಿಸುವಂತೆ ‌ಸಿಎಂ,‌ ಡಿಸಿಎಂಗೆ ಶಾಸಕ ಖರ್ಗೆ  ಪತ್ರ

ಕಲಬುರಗಿ: ಕೋವಿಡ್ 19 ಹಿನ್ನೆಲೆಯಲ್ಲಿ ಈ ಸಲದ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಹಾಗೂ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಮಾಡದಂತೆ ಸರಕಾರ ಅಧಿಸೂಚನೆ ಹೊರಡಿಸಿರುವುದರ ಹಿನ್ನೆಲೆಯಲ್ಲಿ‌  ಶಾಸಕ ಪ್ರಿಯಾಂಕ್ ಖರ್ಗೆ ಸಿಎಂ ಸಿಎಂ ಬಿ.ಎಸ್ .ಯಡಿಯೂರಪ್ಪ ಮತ್ತು ಉಪಮುಖ್ಯಮಂತ್ರಿ ಹಾಗೂ ಕಲಬುರಗಿ ‌ಜಿಲ್ಲಾ ಉಸ್ತುವಾರಿ‌ ಸಚಿವರಾದ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದು ಕೂಡಲೇ ಸುತ್ತೋಲೆ ರದ್ದುಪಡಿಸಿ ಮರು ಆದೇಶಿಸುವಂತೆ ಆಗ್ರಹಿಸಿದ್ದಾರೆ.

ಈ ಭಾಗದ ರಾಜಕೀಯ ನಾಯಕರ, ಹಿರಿಯ ಧುರಿಣರ, ಸಂಘಟನೆಗಳ ಅವಿರತ ಹೋರಾಟದ ಫಲವಾಗಿ ಅಭಿವೃದ್ದಿ ವಂಚಿತ ಕಲ್ಯಾಣ ಕರ್ನಾಟಕ ( ಈ ಹಿಂದಿನ ಹೈಕ) ಭಾಗದ ಸಮಗ್ರ ಅಭಿವೃದ್ದಿಗಾಗಿ ಸಂವಿಧಾನದ ಆರ್ಟಿಕಲ್‌371 ಕ್ಕೆ ತಿದ್ದುಪಡಿ ತರಲಾಯಿತು. 2014 ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಕಲಬುರಗಿಯಲ್ಲಿ ವಿಶೇಷ‌ ಸಚಿವ  ಸಂಪುಟ ಸಭೆ ನಡೆಸಿ ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ಭರ್ತಿಗೆ ಇರುವ ಆರ್ಥಿಕ‌ ಇಲಾಖೆಯ ನಿಬಂಧನೆಗಳಿಗೆ ವಿನಾಯತಿ ನೀಡಿ ಸುಮಾರ 50 ಸಾವಿರ ಹುದ್ದೆಗಳ ಭರ್ತಿಗೆ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಶಾಸಕರು ಸಂವಿಧಾನ‌ ತಿದ್ದುಪಡಿಗೆ ಉಂಟಾದ ಅನಿವಾರ್ಯತೆ ಹಾಗೂ ನಂತರದ‌ ಕ್ರಮಗಳನ್ನು ನೆನೆಪಿಸಿದ್ದಾರೆ.

ಆದರೆ ಈಗ ಕೊವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವ ನೆಪವೊಡ್ಡಿ ಕಕ ಭಾಗದ ಹುದ್ದೆಗಳ ನೇರ ನೇಮಕಾತಿಗೆ ಮಾತ್ರ ತಡೆಯೊಡ್ಡಿರುವುದು ಆರ್ಟಿಕಲ್   371 J ಮೂಲ ಉದ್ದೇಶಕ್ಕೆ ಧಕ್ಕೆ ತಂದಂತಾಗಿದೆ ಎಂದು  ಪ್ರಿಯಾಂಕ್ ಖರ್ಗೆ ಅವರು ಸರಕಾರದ‌ ನಿರ್ಧಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಹೈಕ ವನ್ನು ಕಕ ಎಂದು ನೇಮಕ ಮಾಡಿ ನಂತರ ನಿರ್ಲಕ್ಷಿಸಿದ‌ ಕ್ರಮವನ್ನು ಟೀಕಿಸಿದ ಖರ್ಗೆ ಅವರು , ಕೊವಿಡ್  ನಿಂದ‌ ತೀವ್ರ ಸಂಕಷ್ಟಕ್ಕೊಳಗಾಗಿರುವ ಈ ಭಾಗದ ನಿರುದ್ಯೋಗಿ ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸದೆ, ಹುದ್ದೆಗಳ ನೇಮಕಾತಿಗೆ ಬ್ರೇಕ್ ಹಾಕಲು ಅಧಿಸೂಚನೆ ಹೊರಡಿಸುವ ಮೂಲಕ ಸರಕಾರ  ಅನ್ಯಾಯವೆಸಗಿದಂತಾಗಿದೆ.‌‌ಕೇವಲ‌

ಹೆಸರು ಬದಲಾವಣೆ ಮಾಡಿದರೆ ಅಭಿವೃದ್ದಿಯಾಗದು ಅಸಮತೋಲಗೆ ಒಳಗಾಗಿರುವ ಈ ಭಾಗದ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಿ ಸಮಗ್ರ ಅಭಿವೃದ್ದಿ ಮಾಡಿದರೆ ಮಾತ್ರ ಅಭಿವೃದ್ದಿಯಾಗುತ್ತದೆ ಎಂದು ಕುಟುಕಿ, ಯುವಕರ ಭವಿಷ್ಯದ ದೃಷ್ಠಿಯಿಂದ ಸರಕಾರ‌ ಈ ಕೂಡಲೇ ತನ್ನ ಅಧಿಸೂಚನೆಯನ್ನು ವಾಪಸ್ ಪಡೆದುಕೊಂಡು‌ ಮರು ಆದೇಶ ಮಾಡಲಿ ಎಂದು ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago