ಸುರಪುರ: ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಬೆಲೆ ಪ್ರತಿ ಬ್ಯಾರಲ್‌ಗೆ ೪೩ ಯುಎಸ್ ಡಾಲರ್‌ನ ಆಸುಪಾಸಿನಲ್ಲಿದ್ದರು ನಮ್ಮ ದೇಶದಲ್ಲಿ ಮಾತ್ರ ಇನ್ನು ತೈಲ ಬೆಲೆ ಇಳಿಕೆ ಕಂಡಿಲ್ಲಾ ಸತತವಾಗಿ ಕಳೆದ ಆರು ವರ್ಷಗಳಿಂದ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಇಳಿಕೆ ಮಾಡುವುದನ್ನು ಬಿಟ್ಟು ಪದೆ ಪದೆ ಬೆಲೆ ಏರಿಕೆಮಾಡುತ್ತಿದೆ ಇದರಿಂದ ಜನರು ದುಡಿಮೆಯ ಅರ್ಧಭಾಗದಷ್ಟು ಬರಿ ಪೆಟ್ರೋಲ ಮತ್ತು ಡೀಸಲಗಾಗಿ ನೀಡುವ ಪರಿಸ್ಥಿತಿ ಎದುರಾಗಿದೆ ತಕ್ಷಣವೆ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಕಡಿಮೆಗೊಳಿಸಬೇಕು ಎಂದು ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಹಶಿಲ್ದಾರ ಕಛೇರಿ ಮುಂಭಾಗದಲ್ಲಿ ಗುರುವಾರ ತಾಲೂಕು ಬ್ಲಾಕ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಅವರು ಕರೊನಾ ಸೊಂಕಿನಿಂದಾಗಿ ಕಳೆದ ಕೆಲತಿಂಗಳು ಇಡಿ ದೇಶವೆ ಲಾಕ್ ಡೌನಾಗಿ ಜನರು ಒಂದು ದಿನದ ದುಡಿಮೆಗೆ ಕಷ್ಟಪಡುತ್ತಿದ್ದಾರೆ ಇತಂಹ ಸಮಯದಲ್ಲಿ ಕೇಂದ್ರ ಸರ್ಕಾರ ಬಡ ಜನತೆಯ ನೆರವಿಗೆ ಬಂದು ಅವರ ಕಷ್ಟಕ್ಕೆ ಸ್ಪಂದಿಸಬೇಕಾಗಿತ್ತು ಆದರೆ ಸರ್ಕಾರವು ಪ್ರತಿ ದಿನವು ತೈಲ ಬೆಲೆಯನ್ನು ಏರಿಕೆ ಮಾಡಿ ಇತಂಹ ವಿಷಮ ಪರಿಸ್ಥಿತಿಯಲ್ಲೂ ಜನರ ಜೇಬಿಗೆ ಕತ್ತರಿಹಾಕುವ ಕೆಲಸ ಮಾಡುತ್ತಿರುವುದನ್ನು ಖಂಡಿಸಿದರು.
ಪ್ರತಿಭಟನೆಯ ಆರಂಭದಲ್ಲಿ ಕೇಂದ್ರ ಸರಕಾರದ ವಿರುಧ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶಿಲ್ದಾರ ನಿಂಗಣ್ಣ ಬಿರಾದರ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶಕೀಲ ಅಹ್ಮದ್, ಮಹಿಬೂಬು ಸಾಬ, ಮುಖಂಡರಾದ ವೆಂಕಟರೆಡ್ಡಿ ಬೊವಿ, ವೆಂಕಟೇಶ ಸತ್ಯಂಪೆಟ, ಮಾಳಪ್ಪ ಕಿರದಳ್ಳಿ, ದಾವುದ್ ಪಠಾಣ, ಶರಣು ಸಾಹುಕಾರ ಕಳ್ಳಿಮನಿ, ಸಂಗಣ್ಣಗೌಡ ಪಾಟೀಲ್, ಮಹ್ಮದ್ ಮೌಲಾ, ಸಿದ್ರಾಮ ಎಲಿಗಾರ, ಜಹೀರ ರಂಗಂಪೇಟ, ಶರೀಫ ಅಹ್ಮದ್ ಸೇರಿದಂತೆ ಇನ್ನಿತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…